ಭಾನುವಾರ, ಜನವರಿ 19, 2020
27 °C

ಡೆಂಗೆಗೆ ಮತ್ತೆ ಮೂವರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು/ಮದ್ದೂರು: ಬೀರೂರು ತಾಲ್ಲೂಕಿನ ಕುಡ್ಲೂರು ಗ್ರಾಮದ ಇಬ್ಬರು ಮಕ್ಕಳು ಒಂದು ವಾರದ ಅಂತರದಲ್ಲಿ ಡೆಂಗೆ ಜ್ವರದಿಂದ ಮೃತಪಟ್ಟಿದ್ದಾರೆ. ತರೀಕೆರೆ ತಾಲ್ಲೂಕು ಕುಡ್ಲೂರಿನ ಸತೀಶ್ ಮತ್ತು ಲತಾ ದಂಪತಿಯ  ಪುತ್ರ ನಿಶಾಂಕ್ ಭಾನುವಾರ ಡೆಂಗೆ ಜ್ವರದಿಂದಾಗಿ ಶಿವಮೊಗ್ಗದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಸತೀಶ್ ಸಹೋದರ ಪ್ರಕಾಶ್ ಅವರ ಪುತ್ರಿ ವೈಶವಿ ಕೂಡ ಜ್ವರದಿಂದ ಬಳಲುತ್ತಿದ್ದು,  ಗುರುವಾರ ರಾತ್ರಿ ಮೃತಪಟ್ಟಳು.ಮದ್ದೂರು ವರದಿ: ಡೆಂಗೆ ಜ್ವರದಿಂದ ಬಳಲಿ ಯುವತಿಯೊಬ್ಬಳು ಮೃತಪಟ್ಟ ಘಟನೆ ಸಮೀಪದ ದೊಡ್ಡಂಕನಹಳ್ಳಿ ಗ್ರಾಮದಲ್ಲಿ ಕಳೆದ ಗುರುವಾರ ರಾತ್ರಿ ನಡೆದಿದೆ.ಗ್ರಾಮದ ರಾಮಕೃಷ್ಣ ಹಾಗೂ ಸುಶೀಲಮ್ಮ ದಂಪತಿಯ ಪುತ್ರಿ ರೋಜಾ (18) ಮೃತಪಟ್ಟ ಯುವತಿ. ಕಳೆದ ಒಂದು ವಾರದ ಹಿಂದೆ ಆಕೆಗೆ ಜ್ವರ ಕಾಣಿಸಿಕೊಂಡಿತು. ಕೂಡಲೇ ಆಕೆಯನ್ನು ಕೊಪ್ಪ ಗ್ರಾಮದ ಸರ್ಕಾರಿ ಆಸ್ಪತ್ರೆಗೆ, ಅನಂತರ ಮೈಸೂರು ಅಪೊಲೊ ಆಸ್ಪತ್ರೆಗೆ ಸೇರಿಸಲಾಗಿತ್ತು. ಗುರುವಾರ ರಾತ್ರಿ ಮೃತಪಟ್ಟಿದ್ದು, ಡೆಂಗೆ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ವೈದ್ಯರು ದೃಢೀಕರಿಸಿದ್ದಾರೆ.

ಪ್ರತಿಕ್ರಿಯಿಸಿ (+)