ಡೆಂಗೆ: ತಿಂಗಳಲ್ಲಿ ಮೂರು ಬಲಿ

7

ಡೆಂಗೆ: ತಿಂಗಳಲ್ಲಿ ಮೂರು ಬಲಿ

Published:
Updated:

ವಿಜಾಪುರ: ಶಂಕಿತ ಡೆಂಗೆಗೆ ಒಂದು ತಿಂಗಳ ಅವಧಿಯಲ್ಲಿ ಮೂವರು ಮಕ್ಕಳು ಮೃತಪಟ್ಟಿರುವ ಇಂಡಿ ತಾಲ್ಲೂಕು ತಡವಲಗಾ ಗ್ರಾಮದಲ್ಲೆಗ ಆತಂಕದ ಕಾರ್ಮೋಡ. ಮೃತ ಮಕ್ಕಳ ಮನೆಯಲ್ಲಿ ನಿಲ್ಲದ ರೋದನ.`ಒಂದು ತಿಂಗಳ ಅವಧಿಯಲ್ಲಿ ನಮ್ಮೂರಲ್ಲಿ ಮೂರು ಮಕ್ಕಳು ಡೆಂಗೆಗೆ ಬಲಿಯಾಗಿವೆ. 10 ತಿಂಗಳ ಸುಶ್ಮಿತಾ ಶರಣಪ್ಪ ಇಂಡಿ, ಆಕೆಯ ಸಹೋದರಿ ಒಂಬತ್ತು ತಿಂಗಳ ಗೀತಾ ಸಾಹೇಬಗೌಡ ಇಂಡಿ, ಎರಡು ವರ್ಷದ ದಾಕ್ಷಾಯಿಣಿ ಬಿರಾದಾರ ಡೆಂಗೆಗೆ ಬಲಿಯಾಗಿದ್ದಾರೆ. ಇನ್ನೂ ಕೆಲ ಮಕ್ಕಳು ಜ್ವರದಿಂದ ಬಳಲುತ್ತಿವೆ~ ಎಂದು ಗ್ರಾಮದ ಕೆಲವರು ಗೋಳಿಟ್ಟರು. ಗ್ರಾಮದಲ್ಲಿ ನೈರ್ಮಲ್ಯ ಎಂಬುದೇ ಇಲ್ಲ. ಈ ಮಕ್ಕಳು ಶಂಕಿತ ಡೆಂಗೆಗೆ ಬಲಿಯಾಗಿದ್ದಾರೆ ಎಂಬ ಸುದ್ದಿ ಪ್ರಕಟವಾದ ನಂತರ ಗ್ರಾಮ ಪಂಚಾಯ್ತಿಯವರು ರಸ್ತೆಯಲ್ಲಿ ಸ್ವಲ್ಪ ಮಣ್ಣು ಎಸೆದಿದ್ದಾರೆ.`ಈ ಪ್ರದೇಶವನ್ನು ಡೆಂಗೆಪೀಡಿತ ಎಂದು ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಶುದ್ಧ ಕುಡಿಯುವ ನೀರು ಪೂರೈಸಿ ಸ್ವಚ್ಛತೆ ಕಾಪಾಡುವಂತೆ ಗ್ರಾಮ ಪಂಚಾಯ್ತಿಗೆ ತಿಳಿಸಿದ್ದೇವೆ~ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಗಲಗಲಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry