ಇಸ್ಲಾಮಾಬಾದ್(ಐಎಎನ್ಎಸ್/ ಪಿಟಿಐ): ಪಾಕಿಸ್ತಾನದ ಬುಡಕಟ್ಟು ಪ್ರಾಂತ್ಯದ ಮೇಲೆ ಅಮೆರಿಕ ನಡೆಸುತ್ತಿರುವ ಡ್ರೋಣ್ ದಾಳಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.

ಡ್ರೋಣ್ ದಾಳಿಯನ್ನು ಕೂಡಲೇ ನಿಲ್ಲಿಸಬೇಕು. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದೆವು. ದಾಳಿ ಮೂಲಕ ಪಾಕ್ನ ಸಾರ್ವಭೌಮತ್ವ ಹಾಗೂ ಅಂತರರಾಷ್ಟ್ರೀಯ ಕಾನೂನನ್ನು ಅಮೆರಿಕ ಉಲ್ಲಂಘನೆ ಮಾಡಿದೆ ಎಂದು ಜರ್ಮನಿ ವಿದೇಶಾಂಗ ಸಚಿವ ಗೀಡೊ ವೆಸ್ಟರ್ವೆಲ್ಲೆ ಅವರೊಂದಿಗಿನ ಮಾತುಕತೆಯಲ್ಲಿ ಷರೀಫ್ ಹೇಳಿರುವುದಾಗಿ `ಡಾನ್' ನ್ಯೂಸ್ ವರದಿ ಮಾಡಿದೆ.

ಆಫ್ಘಾನಿಸ್ತಾನದಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ತಾವು ನೆರವಾಗುವುದಾಗಿಯೂ ಹೇಳಿರುವ ಷರೀಫ್, ಅಫ್ಘನ್ ಸೇನೆ ಹಾಗೂ ಭದ್ರತಾ ಪಡೆಗಳು ಅಲ್ಲಿನ ಪರಿಸ್ಥಿತಿ ನಿಯಂತ್ರಿಸಲು ಶಕ್ತವಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.