ಗುರುವಾರ , ಜೂನ್ 24, 2021
28 °C

ತಂತ್ರಜ್ಞಾನ ಅಭಿವೃದ್ಧಿಗೆ ಸಂಖ್ಯಾಶಾಸ್ತ್ರ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಸಂಖ್ಯಾಶಾಸ್ತ್ರ ವಿಷಯವು ಗಣಕಯಂತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಷಯಕ್ಕೆ ಪೂರಕವಾಗಿದ್ದು, ಉನ್ನತ ಶಿಕ್ಷಣದಲ್ಲಿ ಸಂಖ್ಯಾಶಾಸ್ತ್ರ ವಿಷಯದ ಕಲಿಕೆ ಅವಶ್ಯವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಸಂಖ್ಯಾಶಾಸ್ತ್ರ ವಿಭಾಗದ ನಿವೃತ ಮುಖ್ಯಸ್ಥ ಡಾ. ಎಂ.ಎಸ್. ಚಿಕ್ಕಗೌಡರ ಅಭಿಪ್ರಾಯಪಟ್ಟರು.ತಿಕೋಟಾ ಗ್ರಾಮದಲ್ಲಿನ ಬಿ.ಎಲ್.ಡಿ.ಇ. ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ಭಾನುವಾರ ನಡೆದ ಉನ್ನತ ಶಿಕ್ಷಣದಲ್ಲಿ ಸಂಖ್ಯಾಶಾಸ್ತ್ರದ ಅವಶ್ಯಕತೆ ಕುರಿತ ರಾಷ್ಟೀಯ ವಿಚಾರ ಸಂಕಿರಣ ಉದ್ಘಾಟಿಸಿದರು.ಗಣಕಯಂತ್ರದ ಉಪಯೋಗದಿಂದ ಸಂಖ್ಯಾಶಾಸ್ತ್ರದ ಬಳಕೆಯಲ್ಲಿ ಕ್ರಾಂತಿಯಾಗಿದೆ. ಗಣತಿ ಸೇರಿದಂತೆ ಅನೇಕ ವಿಷಯಗಳ ಮಾಹಿತಿಯನ್ನು ನೀಡುವ ಸಂಖ್ಯಾಶಾಸ್ತ್ರ, ವಿಷಯ ಸಂಗ್ರಹಣೆ ಕಾಲ್ಪನಿಕವಾಗಿರದೆ ನೈಜವಾಗಿರಬೇಕು. ಈ ಹಿನ್ನೆಲೆಯಲ್ಲಿ ಸಂಖ್ಯಾಶಾಸ್ತ್ರದ ಅಭ್ಯಾಸ ಅವಶ್ಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಲ್.ಡಿ.ಇ ಸಂಸ್ಥೆಯ ಕುಲಪತಿ ಬಿ.ಜಿ. ಮೂಲಿಮನಿ ಭಾಷೆಗಳಂತೆ ಸಂಖ್ಯಾಶಾಸ್ತ್ರದ ಜ್ಞಾನವೂ ಅವಶ್ಯ. ಇದು ಇತರ ವಿಷಯಗಳ ಅಧ್ಯಯನಕ್ಕೂ ಆಧಾರವಾಗಿದೆ ಎಂದರು.ಕವಿವಿ ಸಂಖ್ಯಾಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಡಾ ಎಂ.ವಿ. ಮುದ್ದಾಪುರ, ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರೊ. ಎಸ್.ಎಚ್. ಲಗಳಿ, ಪ್ರೊ. ಕೆ.ಎಸ್. ಬಿರಾದಾರ, ನಿವೃತ್ತ ಪ್ರಾಚಾರ್ಯ ಎಸ್.ಸಿ. ಹಿರೇಮಠ, ಪ್ರಾಚಾರ್ಯ ಎಸ್.ಜಿ. ಗಣಿ, ಕೆ.ಎಂ. ಲಮಾಣಿ ಉಪಸ್ಥಿತರಿದ್ದರು.ಪ್ರೊ. ಸಿದ್ದಕ್ ಪ್ರಾರ್ಥನೆ  ಗೀತೆ ಹಾಡಿದರು. ಪ್ರಾಚಾರ್ಯ ಎಸ್.ಜಿ. ಗಣಿ ಸ್ವಾಗತಿಸಿದರು. ಎಲ್.ಎಂ. ಮುಂಡಾಸನವರ ನಿರೂಪಿಸಿದರು. ಕೆ.ಎಂ. ಲಮಾಣಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.