ಶುಕ್ರವಾರ, ಜೂನ್ 25, 2021
29 °C

ತಪ್ಪಿದ ವಿಮಾನ ಅವಘಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌(ಐಎಎನ್‌ಎಸ್): ಪಾಕಿಸ್ತಾನದ ಕರಾಚಿ ವಿಮಾನನಿ­ಲ್ದಾಣ ದಲ್ಲಿ ಮಂಗಳವಾರ ರಾತ್ರಿ  ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳಿಂದ (ಎಟಿಸಿ) ನಡೆದ ಅಚಾತುರ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭಾರತೀಯ ವಿಮಾನ ನಿಲ್ದಾಣ ಗಳ ಪ್ರಾಧಿಕಾರದ ಅಧ್ಯಕ್ಷ ಅಲೋಕ್‌ ಸಿನ್ಹಾ ಹೇಳಿದ್ದಾರೆ.  ಈ ಘಟನೆಯನ್ನು ಪಾಕಿಸ್ತಾನ ಸರ್ಕಾ­ರದ ಗಮನಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ತರಲಾಗು­ವುದು ಎಂದು ನಾಗರಿಕ ವಿಮಾನ­ಯಾನ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.ಲಂಡನ್‌ ಹಾಗೂ ಮುಂಬೈ ನಡು­ವಿನ ಏರ್ ಇಂಡಿಯಾದ ವಿಮಾನಕ್ಕೆ ಕರಾ­ಚಿಯ ವಾಯು ಸಂಚಾರ ನಿಯಂ­ತ್ರಣ ಅಧಿಕಾರಿಗಳು ತಪ್ಪು ಸಂಕೇತ ನೀಡಿದ್ದರು. ಇದರಿಂ­ದಾಗಿ ವಿಮಾನದ ದಾರಿ ಬದಲಾಗಿ ಅಪಘಾತವಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್‌ ಯಾವುದೇ ದುರ್ಘಟನೆ ನಡೆಯಲಿಲ್ಲ.ತಪ್ಪು ಸಂಕೇತ ನೀಡಿದ್ದರಿಂದ ವಿಮಾನದ ಪೈಲಟ್‌ಗೆ ಮುಂಬೈ ಎಟಿಸಿಗೆ ಸಂಪರ್ಕ ಸಾಧಿಸಲಾಗಲಿಲ್ಲ. ಆ ನಂತರ ವಿಮಾನ ಅಹಮದಾ­ಬಾದ್‌ನ ಎಟಿಸಿಗೆ ಸಂಪರ್ಕ ಸಾಧಿಸಿ ಸರಿಯಾದ ಮಾರ್ಗ ಕಂಡುಕೊಂಡಿತು.‘ಇದೊಂದು ತುಂಭಾ ಗಂಭೀರ­ವಾದ ತಪ್ಪು. ಈ ರೀತಿಯ ಘಟನೆ ಹಿಂದೆ ಎಂದೂ ನಡೆದಿಲ್ಲ’ ಎಂದು ಅಲೋಕ್‌ ಹೇಳಿದರು.‘ನಾವೀಗ ಈ ಘಟನೆಯನ್ನು ಯಾವ ರೀತಿ ಪರಿಶೀಲನೆ ನಡೆಸಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದೇವೆ. ಇದು ಮತ್ತೊಮ್ಮೆ ನಡೆಯಬಾರದು’ ಎಂದು ಅವರು ಹೇಳಿದರು.ನಾಗರಿಕ ವಿಮಾನ­ಯಾನ ಇಲಾಖೆ ಜಂಟಿ ಕಾರ್ಯದರ್ಶಿ ಜಿ.ಅಶೋಕ್‌್್್ ಬಾಬು ಮಾತನಾಡಿ, ಕರಾಚಿ ವಿಮಾನ ನಿಲ್ದಾಣದ ಎಟಿಸಿ ಅಧಿಕಾರಿಗಳು ವಿಮಾನ ಇಳಿಯುವ ವೇಳೆ ಯಾಕೆ ಖುಷಿಯಾಗಿದ್ದರು ಮತ್ತು ನಗುತ್ತಿ­ದ್ದರು.  ಯಾಕೆ ತಪ್ಪು ಸೂಚನೆ ನೀಡಿ­ದ್ದಾರೆ ಎಂಬುದೂ ತಿಳಿದಿಲ್ಲ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.