ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ತಮಿಳುನಾಡು ಇಲ್ಲಿ ಮುಕ್ತಾಯಗೊಂಡ 34ನೇ ಮಾಸ್ಟರ್ಸ್ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ 904 ಪಾಯಿಂಟ್ಗಳನ್ನು (ಪುರುಷರು-560 ಹಾಗೂ ಮಹಿಳೆಯರು-344 ಪಾಯಿಂಟ್ಗಳು) ಗಳಿಸಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಅಲ್ಲದೇ 560 ಪಾಯಿಂಟ್ಗಳೊಂದಿಗೆ ಪುರುಷರ ವಿಭಾಗದ ಚಾಂಪಿಯನ್ ಪಟ್ಟವನ್ನೂ ತಮಿಳುನಾಡು ತನ್ನದಾಗಿಸಿಕೊಂಡಿತು. 599 ಪಾಯಿಂಟ್ಗಳನ್ನು ಪಡೆದ ಮಣಿಪುರ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿವಿಧ ವಿಭಾಗದ ಹಲವು ಸ್ಪರ್ಧೆಗಳಲ್ಲಿ ಐದನೇ ದಿನ ಕರ್ನಾಟಕ ನಾಲ್ಕು ಚಿನ್ನ, ಎಂಟು ಬೆಳ್ಳಿ ಹಾಗೂ 11 ಕಂಚಿನ ಪದಕಗಳನ್ನು ಜಯಿಸಿತು. ಈ ಟೂರ್ನಿಯಲ್ಲಿ ಆತಿಥೇಯ ರಾಜ್ಯ ಒಟ್ಟು 92 ಪದಕಗಳನ್ನು ಮುಡಿಗೇರಿಸಿಕೊಂಡಿದೆ.

ಪುರುಷರ ವಿಭಾಗ: ಅಂತಿಮ ದಿನವಾದ ಸೋಮವಾರ ಕೋದಂಡಪಾಣಿ ಕೆ.ಸಿ. 55+ ವಿಭಾಗದ 3000 ಮೀ. ಸ್ಟೇಪಲ್ ಚೇಸ್ ಸ್ಪರ್ಧೆಯಲ್ಲಿ ಬಂಗಾರದ ಸಾಧನೆ ಮಾಡಿದರೇ ಕಾಂತಾ (40+, ಟ್ರಿಪಲ್ ಜಂಪ್, 11.87 ಮೀ.) ಬೆಳ್ಳಿ ಪದಕ ಗೆದ್ದರು. 4್ಡ400 ರಿಲೇ ಸ್ಪರ್ಧೆಯ 50+ (4:14.7 ಸೆ.) ಹಾಗೂ 70+ (6:19.5 ಸೆ) ವಿಭಾಗದಲ್ಲಿ ರಾಜ್ಯದ ಸ್ಪರ್ಧಿಗಳು ಬೆಳ್ಳಿ ಗೆದ್ದರೇ 4್ಡ100 ರಿಲೇಯ 70+ (1:12.8 ಸೆ.) ವಿಭಾಗದಲ್ಲಿ ಕಂಚಿಗೆ ತೃಪ್ತಿ ಪಟ್ಟರು.

ಗೋಪಪ್ಪ ನಾಯ್ಕ (55+, ಸ್ಟೀಪಲ್ ಚೇಸ್, 15:29.00 ಸೆ.), ಕೋದಂಡಪಾಣಿ ಕೆ.ಸಿ. (55+, 5000 ಮೀ. 23.8.4 ಸೆ.), ಎಸ್.ಆರ್. ಕಾಳೇಗೌಡ (60+, 5000 ಮೀ. 24.50.4 ಸೆ.), ಡಾ.ಬಿ.ಪುರುಷೋತ್ತಮ್ ಶೆಟ್ಟಿ (70+, 5000 ಮೀ. 26:16.5 ಸೆ.), ನಂದಪ್ಪ (75+, 5000 ಮೀ. 29:40.0 ಸೆ.) ಹಾಗೂ ಬರ್ನಾಬಸ್ ಕೆ. (45+, ಟ್ರಿಪಲ್ ಜಂಪ್, 10.57 ಮೀ.) ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.
ಮಹಿಳೆಯರ ವಿಭಾಗ: ಈ ವಿಭಾಗದಲ್ಲಿ ಕೆ. ಕೀರ್ತನಾ (35+, 400 ಮೀ. ಹರ್ಡಲ್ಸ್, 1:30.8 ಸೆ.), ಕಮಲಾ ಶ್ರೀನಿವಾಸನ್ (55+, 100ಮೀ. ಓಟ, 16.3 ಸೆ.) ಹಾಗೂ ಟಿ.ವಿ.ಲಲಿತಮ್ಮ (65+, 5000 ಮೀ. 40:16.7 ಸೆ.) ಚಿನ್ನ ಜಯಿಸಿದರು.

ಜ್ಯೋತಿ ಯು. ಶೆಟ್ಟಿ (45+, 400ಮೀ. ಹರ್ಡಲ್ಸ್, 1:39.9 ಸೆ), ನೀರಾ ಕತ್ವಾಲ್ (35+, 5000 ಮೀ. 22:21.7 ಸೆ.), ಸುನಂದಾ ಶೆನನ್ (45+, 5000 ಮೀ. 31:26.9 ಸೆ.) ಹಾಗೂ ಲಲಿತಾ ಜಯರಾಮ್ (45+, ಹ್ಯಾಮರ್ ಥ್ರೋ, 28.80 ಮೀ.) ಬೆಳ್ಳಿ ಪದಕ ಗೆದ್ದರು. 4್ಡ400 ಸ್ಪರ್ಧೆಯಲ್ಲಿ ರಾಜ್ಯದ ಮಹಿಳೆಯರು (35+, 5:04.6 ಸೆ.) ಬೆಳ್ಳಿಗೆ ತೃಪ್ತಿ ಪಟ್ಟರು.

ಅಂತಿಮ ದಿನ ಪುಷ್ಪಾ ಎಚ್.ಕೆ. (45+, 5000 ಮೀ. 33:44.2 ಸೆ.) ಹಾಗೂ ಅರುಣಕಲಾ ಎಸ್.ರಾವ್ (60+, 5000 ಮೀ. 36:12.5 ಸೆ.) ಕಂಚು ಜಯಿಸಿದರು. 4ಷ100 ರಿಲೇ ಸ್ಪರ್ಧೆಯ 50+ (1:14.1 ಸೆ.) ಮತ್ತು 4ಷ400 ರಿಲೇ ಸ್ಪರ್ಧೆಯ 50+ (7:02.1 ಸೆ.) ವಿಭಾಗದಲ್ಲಿ ರಾಜ್ಯ ಸ್ಪರ್ಧಿಗಳು ಕಂಚಿಗೆ ತೃಪ್ತಿ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.