ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ತರಕಾರಿ ವ್ಯಾಪಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತ್ಯೇಕ ವಾದ ಶೆಡ್ಗಳನ್ನು ನಿರ್ಮಿಸಿ ವ್ಯಾಪಾರಿ ಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸ ಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿನ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆದ ತರಕಾರಿ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಅನಧಿಕೃತವಾಗಿ ತರಕಾರಿ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳು ಎಪಿಎಂಸಿ ಪರವಾನಗಿ ಪಡೆದಿದ್ದಾರೆ.

ಆದರೂ ಪಟ್ಟಣದಲ್ಲಿ ವಹಿವಾಟು ನಡೆಸುವುದು ಸರಿಯಲ್ಲ. ಅಲ್ಲಿ ವಹಿವಾಟು ನಡೆ ಸುತ್ತಿರುವ ಸ್ಥಳ ಶಾಶ್ವತವೂ ಅಲ್ಲ. ಆದ್ದರಿಂದ ಪರವಾನಗಿ ಪಡೆದಿರುವ ಎಲ್ಲ ತರಕಾರಿ ವ್ಯಾಪಾರಿಗಳೂ ಪ್ರಾಂಗಣದಲ್ಲಿ ವ್ಯಾಪಾರ ವಹಿವಾಟನ್ನು ಆರಂಭಿ ಸಬೇಕು ಎಂದು ಮನವಿ ಮಾಡಿದರು.

ಒಂದು ತಿಂಗಳ ಕಾಲ ರೈತರ ತರಕಾರಿಯನ್ನು ಬಸ್ ನಿಲ್ದಾಣದಿಂದ ಪ್ರಾಂಗಣಕ್ಕೆ ಉಚಿತವಾಗಿ ಸಾಗಿಸಿ ಕೊಡಲಾಗುವುದು. ಆದರೆ ತರಕಾರಿ ಅಥವಾ ಟೊಮೆಟೊ ವಹಿವಾಟುಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿ ಕೊಳ್ಳಬೇಕು. 11 ತಿಂಗಳಿಗೊಮ್ಮೆ ಪರ ವಾನಗಿ ನವೀಕರಿಸಿಕೊಳ್ಳಬೇಕು. ಎಪಿಎಂಸಿ ನಿಯಮಗಳಿಗೆ ಬದ್ಧರಾಗಿ ವಹಿವಾಟು ನಡೆಸಬೇಕು ಎಂದು ಸೂಚಿಸಿದರು. ಎಪಿಎಂಸಿ ಕಾರ್ಯದರ್ಶಿ ಕೃಷ್ಣನ್ ಕೃಷ್ಣನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.