ಮೈಸೂರು: `ನಿಮ್ಮ ವಯಸ್ಸು ಎಷ್ಟು?~-ಹೀಗೊಂದು ಪ್ರಶ್ನೆ ತುಂಟ ಪೋರನಿಂದ ಕನ್ನಡದ ಖ್ಯಾತ ನಟಿ ತಾರಾಗೆ ತೂರಿ ಬಂದಿತು. ಇದರಿಂದ ತಬ್ಬಿಬ್ಬಾದ ತಾರಾ ಸಾವರಿಸಿಕೊಂಡು, `ನಿನ್ನ ವಯಸ್ಸು ಎಷ್ಟು~ ಎಂದು ಕೇಳಿದರು. ಆ ಪೋರ `ಒಂಬತ್ತು~ ಎಂದ. ಆಗ ತಾರಾ ಕೂಡ `ನನಗೂ ಒಂಬತ್ತು ವರ್ಷ~ ಎಂದು ಜಾರಿಕೊಂಡರು.

ರಂಗಾಯಣ ಆಯೋಜಿಸಿರುವ ಚಿಣ್ಣರ ಮೇಳದ ಅಂಗವಾಗಿ ಗುರುವಾರ ಭೂಮಿಗೀತದಲ್ಲಿ ಏರ್ಪಡಿ ಸಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ಚಿಣ್ಣರು ತಾರಾಗೆ ಬಗೆ ಬಗೆಯ ಪ್ರಶ್ನೆಗಳನ್ನು ಕೇಳಿ ಖುಷಿಪಟ್ಟರು.

ಪ್ರಶ್ನೋತ್ತರದ ಆರಂಭದಲ್ಲಿ ದರ್ಶನ್ ಎನ್ನುವ ಬಾಲಕ `ನೀವು ಮೊದಲಾಸಲ ಚಿತ್ರದಲ್ಲಿ ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡಿದ್ದೀರಿ~ ಎಂದು ಪುಸಲಾಯಿಸಿದವನು, `ಆ ಚಿತ್ರದಲ್ಲಿ ದಪ್ಪಗಿರುವ ಹುಡುಗನ ಪಾತ್ರವನ್ನು ನಾನು ಮಾಡಬೇಕಿತ್ತು. ಆದರೆ ಅವಕಾಶ ತಪ್ಪಿ ಹೋಯಿತು. ಮುಂದೆಯಾ ದರೂ ಅವಕಾಶಕೊಡಿಸಿ~ ಎಂದು ಕೇಳಿದಾಗ ತಾರಾ ಸುಸ್ತಾದರು. ತಾರಾ ಆತನನ್ನು ವೇದಿಕೆಗೆ ಕರೆದು ಅಭಿನಯಿಸುವಂತೆ ಕೋರಿದಾಗ ನಾಟಕವೊಂದರ ಸಂಭಾಷಣೆ ಹೇಳಿ ಚಪ್ಪಾಳೆ ಗಿಟ್ಟಿಸಿದ.

ಇದರಿಂದ ಉತ್ತೇಜಿತನಾದ ಶ್ರೀಹರಿ ಸಹ ಸಿನಿಮಾದಲ್ಲಿ ಅಭಿನಯಿಸಲು ಛಾನ್ಸ್ ಕೇಳಿದ. ಬಳಿಕ `ಜಾಕಿ~ ಚಿತ್ರದ `ಜಾಕಿ...ಜಾಕಿ..~ಎನ್ನುವ ಶೀರ್ಷಿಕೆ ಗೀತೆಗೆ ಕುಣಿದು ಸೈ ಎನಿಸಿಕೊಂಡನು. ಮುಖಾಮುಖಿ ಕಾರ್ಯಕ್ರಮ ಚಿಣ್ಣರು ಸಿನಿಮಾದಲ್ಲಿ ಅಭಿನಯಿಸಲು ಛಾನ್ಸ್ ಕೇಳುವ ಕಾರ್ಯಕ್ರಮವಾಗಿ ಪರಿವರ್ತನೆ ಗೊಂಡಿತು. ಮೂರನೇ ತರಗತಿಯ ವಿಷ್ಣು ವೇದಿಕೆ ಏರಿ `ಪರಮಾತ್ಮ~ ಚಿತ್ರ `ಒಬ್ಬ ಒಬ್ಬ ಪರಮಾತ್ಮ~ ಗೀತೆಗೆ ಹೆಜ್ಜೆಗೆ ಹಾಕಿ ಎಲ್ಲರೂ ಬೆರಗಾಗುವಂತೆ ಮಾಡಿದ. ಹೀಗಾಗಿ ಚಿಣ್ಣರು ಛಾನ್ಸ್ ಕೇಳಲು ವೇದಿಕೆಯತ್ತ ನುಗ್ಗುವುದು ಹೆಚ್ಚಾಯಿತು. ಈ ಸಂದರ್ಭದಲ್ಲಿ ಯಾರು ಏನು ಕೇಳುತ್ತಿದ್ದಾರೆ ಎನ್ನುವುದು ತಿಳಿಯದಾಯಿತು.

ಮಕ್ಕಳನ್ನು ಸುಮ್ಮನಿರಿಸುವ ಸಲುವಾಗಿ ರಂಗಾಯ ಣದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ `ನಿಮ್ಮಲ್ಲಿ ಎಷ್ಟು ಮಂದಿ ಸಿನಿಮಾ ನಟರಾಗಬೇಕು ಎಂದುಕೊಂಡಿದ್ದೀರಿ, ಕೈ ಎತ್ತಿ~ ಎಂದಾಗ ಹೆಚ್ಚಿನ ಮಕ್ಕಳು ಕೈ ಎತ್ತಿ `ನಾವು ಪುನೀತ್ರಾಜ್ಕುಮಾರ್ ಥರ ಆಗಬೇಕು~ ಎಂದು ಕೂಗಿದವು. ರಂಗಭೂಮಿ ಮತ್ತು ಟೀಚರ್ ಆಗಬೇಕು ಎಂದು ಕೈ ಎತ್ತಿದವರ ಸಂಖ್ಯೆ ಕಡಿಮೆ ಇತ್ತು.

ಇಷ್ಟಾದರೂ ಚಿಣ್ಣರ ಗಲಾಟೆ ನಿಯಂತ್ರಣಕ್ಕೆ ಬರಲೇ ಇಲ್ಲ. ಶ್ರೀನಿವಾಸ್ ಭಟ್ಟರು ಹಾಡು ಆರಂಭಿಸಿ ದರು. ಎಲ್ಲರೂ ಧ್ವನಿಗೂಡಿಸಿದರು. ಹಾಡು ಮುಗಿ ಯುತ್ತಿದ್ದಂತೆ ಮಕ್ಕಳು ತಾರಾ ಅವರ ಹಸ್ತಾಕ್ಷರ ಪಡೆಯಲು ಮುಗಿಬಿದ್ದರು. ಅಲ್ಲಿಗೆ ಕಾರ್ಯಕ್ರಮದ ಕಥೆಯೂ ಮುಗಿಯಿತು. ತಾರಾ ಜೊತೆಗೆ ರಂಗಾ ಯಣದ ನಿರ್ದೇಶಕ ಡಾ.ಬಿ.ವಿ. ರಾಜಾರಾಂ, ಉಪ ನಿರ್ದೇಶಕಿ ನಿರ್ಮಲ ಮಠಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.