ಸೋಮವಾರ, ಮೇ 23, 2022
20 °C

ತಾಲ್ಲೂಕಿನ ರಸ್ತೆ ದುರಸ್ತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಬಿಜೆಪಿ ಸರ್ಕಾರವು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಹಲವಾರು ಕಾರ್ಯ ಕರ್ತರು ಸೋಮವಾರ ಪಟ್ಟಣದ ಲೋಕೋಪಯೋಗಿ ಕಚೇರಿ ಹಾಗೂ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಸಿ. ಪಾಟೀಲ, ಲೋಕೋಪಯೋಗಿ ಸಚಿವ ರಾದ ಸಿ.ಎಂ.ಉದಾಸಿ ತಾಲ್ಲೂಕಿಗೆ ತಾರ ತಮ್ಯ ಮಾಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ತಾಲ್ಲೂಕಿನ ಬಗ್ಗೆ ಮಲತಾಯಿ ಧೋರಣೆ ಅನುಸರಿ ಸುತ್ತಿದ್ದು, ಅಭಿವೃದ್ಧಿ ಕುಂಠಿತವಾಗಿದೆ.ರಸ್ತೆಗಳು ಪೂರ್ಣ ಹಾಳಾಗಿದ್ದು, ಓಡಾ ಡಲು ಬಾರದಂತಾಗಿವೆ. ಇದರಿಂದ ಜನತೆ ಪ್ರತಿದಿನ ತೊಂದರೆ ಎದುರಿ ಸುತ್ತಿದ್ದಾರೆ ಎಂದು ದೂರಿದರು.ರಟ್ಟೀಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮಾತ ನಾಡಿ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಪಿಡಬ್ಲುಡಿ ಹಾಗೂ ಜಿ.ಪಂ. ಅಧಿಕಾರಿಗಳು ರಸ್ತೆಗಳ ದುರಸ್ತಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ದಲ್ಲಿ ತೊಡಗಿದ್ದು, ಅಭಿವೃದ್ಧಿಯನ್ನು ಮರೆತಿದೆ. ಜನ ಸಾಮಾನ್ಯರ ತೊಂದರೆ ಸರ್ಕಾರಕ್ಕೆ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿ.ಪಂ. ಮಾಜಿ ಸದಸ್ಯ ಬಿ.ಎನ್. ಬಣಕಾರ ಮಾತನಾಡಿ, ತಾಲ್ಲೂಕಿನ ಎಲ್ಲ ರಸ್ತೆಗಳು ಹಾಳಾಗಿರುವುದರಿಂದ ಪ್ರಯಾಣಿಕರು ನಿತ್ಯ ತೊಂದರೆ ಅನು ಭವಿಸುವಂತಾಗಿದೆ. ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಂತೆ ವರ್ತನೆ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರ ಗಳು ಅಭಿವೃದ್ಧಿ ಕಾಣುತ್ತಿದ್ದು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಬಗ್ಗೆ ತಾರತಮ್ಯ ನೀತಿ ಅನುಸರಿಸುವ ಮೂಲಕ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನೀತಿ ಅನು ಸರಿಸುತ್ತಿದೆ ಎಂದು ಆರೋಪಿಸಿದರು.ಪ.ಪಂ. ಅಧ್ಯಕ್ಷ ದುರಗೇಶ ತಿರಕಪ್ಪ ನವರ, ಉಪಾಧ್ಯಕ್ಷ ರಾಮಣ್ಣ ಗುಡ್ಡಳ್ಳಿ, ತಾ.ಪಂ. ಸದಸ್ಯ ಆರ್.ಎನ್. ಗಂಗೋಳ, ಯುವ ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ದುರಗಪ್ಪ ನೀರಲಗಿ, ಹಸನ್ ನದಾಫ್, ಎಸ್.ಸಿ.ಹುಲ್ಲತ್ತಿ, ಚೌಡಪ್ಪ ಮಾಸೂರ, ಈರಪ್ಪ ಗೋಣಿಮಠ, ನಿಂಗಪ್ಪ ಲೆಕ್ಕಪ್ಪಳವರ, ಎಂ.ಎಸ್. ಸಂತೇರ, ಬಿ.ಎಸ್.ಬಂಗೇರ, ಪರ ಮೇಶಪ್ಪ ಗವಿಯಪ್ಪನವರ,ಕತ್ತಲಗೆರೆ ಗೌಡ ಪ್ರತಾಪ್, ಚನ್ನೇಶ ದೀವಿಗಿಹಳ್ಳಿ, ಬಸವರಾಜ ಸಾಲಿ, ಬಸನಗೌಡ ಸೂಡಂಬೇರ, ಬಸನಗೌಡ ಕರೇಗೌಡ್ರ, ಜಿ.ಕೆ.ಮಲ್ಲೂರ, ಮರಿಗೋಣೆಪ್ಪ ಧೂಳಣ್ಣನವರ, ನಿಂಗಪ್ಪ ಕಡೂರ, ಶೆದಿ ಯಪ್ಪ ಹಾರೋಗೊಪ್ಪ, ಪ್ರಕಾಶ ಹಿತ್ಲಳ್ಳಿ, ರಾಜು ಕಮಡೊಳ್ಳಿ, ಮಾದೇವಪ್ಪ ವೀರಾಪುರ, ಶಂಭು ಹಂಸ ಭಾವಿ ಮೊದಲಾದವರು ಪಾಲ್ಗೊಂ ಡಿದ್ದರು. ಸಿಪಿಐ ಎಚ್.ಶೇಖರಪ್ಪ ಸ್ಥಳದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.