ಬುಧವಾರ, ಮೇ 12, 2021
24 °C

ತಾಲ್ಲೂಕು ಸಾಹಿತ್ಯ ಸಮ್ಮೇಳನ 9ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಲಗಿ: `ಜೂ 9ರಂದು ಜರುಗಲಿರುವ ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು'  ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಹಿತ್ಯ ಪರಿಷತ್‌ದಿಂದ ಪ್ರಥಮ ಸಮ್ಮೇಳನವು ಮೂಡಲಗಿಯಲ್ಲಿ ಜರುಗುತ್ತಿರುವುದು ಹೆಮ್ಮೆಯ ವಿಷಯ. ಮೂಡಲಗಿ ಜನತೆಗೆ ಕನ್ನಡ ಸೇವೆಯನ್ನು ಮಾಡಲು ಇದೊಂದು ಉತ್ತಮ ಅವಕಾಶ ಎಂದರು.ಜೂನ 9ರಂದು ಬೆಳಿಗ್ಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ  ಸ್ಕೌಟ್ಸ್,ಎನ್.ಸಿ.ಸಿ. ಹಾಗೂ ಸೇವಾದಳದ ತಂಡಗಳು ಭಾಗವಹಿಸಲಿದ್ದು, ಇದಕ್ಕೆ ತಾಲ್ಲೂಕಿನ ಎಲ್ಲ ಜನರು ಸಹಕರಿಸಬೇಕೆಂದು ಹೇಳಿದರು.ಕ.ಸಾ.ಪ.ದ ಅಧ್ಯಕ್ಷ ಬಾಲಶೇಖರ ಬಂದಿ ಅವರು ಮಾತನಾಡಿ ಸಮ್ಮೇಳನದ ಸಿದ್ಧತೆ ಭರದಿಂದ ನಡೆದಿದ್ದು, ತಾಲ್ಲೂಕಿನಾದ್ಯಂತ ಸಾಹಿತಿ, ಕಲಾವಿದರು, ಸಾಹಿತ್ಯ ಆಸಕ್ತರು ಹಾಗೂ ಸಂಘ, ಸಂಸ್ಥೆಯವರಿಂದ ಸಮ್ಮೇಳನ ನಡೆಸಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ದೈ.ಶಿಕ್ಷಣ ಪ್ರವೀಕ್ಷಕ ಎಸ್.ಎ. ನಾಡಗೌಡ, ಪ್ರಾಚಾರ್ಯ ಪ್ರೊ. ಬಿ.ಸಿ. ಪಾಟೀಲ, ಪ್ರೊ. ಸಂಗಮೇಶ ಗುಜಗೊಂಡ, ಸ್ಕೌಟ್ಸ್ ಅಧಿಕಾರಿ ಬಿ.ಎಂ. ನಿಡೋಣಿ, ಎನ್.ಸಿ.ಸಿ. ಅಧಿಕಾರಿ ಯ.ಬಿ. ದಳವಾಯಿ, ಬಿ.ಜೆ. ಬಾಗಲಕೋಟಿ. ಬಸವರಾಜ ತರಕಾರ, ಡಾ. ಬಿ.ಸಿ. ಪಾಟೀಲ, ಶ್ರೀಶೈಲ ಕಡಾಡಿ, ವೈ.ಬಿ. ಪಾಟೀಲ, ಸಿ.ಎಸ್. ಬಗನಾಳ, ಜಿ.ಎಸ್. ಬಿಜಗುಪ್ಪಿ, ಮಲ್ಲಪ್ಪ ಮದಗುಣಕಿ, ಬಿ.ಎಂ. ಬರಗಾಲಿ, ಸುಭಾಸ ಕಡಾಡಿ, ಸುಭಾಸ ಕುರಣಿ, ಎ.ಆರ್. ಕುರಬರ ಮತ್ತಿತರು ಭಾಗವಹಿಸಿದ್ದರು.ಕಾರ್ಯದರ್ಶಿ ಪ್ರೊ. ವಿ.ಕೆ. ನಾಯಕ ಸ್ವಾಗತಿಸಿದರು, ಡಾ. ಮಹಾದೇವ ಜಿಡ್ಡಿಮನಿ ನಿರೂಪಿಸಿದರು, ಸಿದ್ರಾಮ ದ್ಯಾಗಾನಟ್ಟಿ ವಂದಿಸಿದರು.

ಪುಸ್ತಕ ಮಳಿಗೆ:   ಸಮ್ಮೇಳನದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶ ನೀಡಿದ್ದು, ಪುಸ್ತಕ ಮಾರಾಟ ಮಾಡುವವರು ಪುಸ್ತಕ ಮಳಿಗೆಗಾಗಿ  (9448839086) ಸಂಪರ್ಕಿಸಲು ತಿಳಿಸಿದ್ದಾರೆ.ಹೊಸ ಪುಸ್ತಕ ಬಿಡುಗಡೆ: ಲೇಖಕರ ಸಾಹಿತ್ಯಕ ಹೊಸ ಪುಸ್ತಕಗಳ ಬಿಡುಗಡೆಗೆ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಅವಕಾಶ ನೀಡಲಾಗಿದ್ದು, ಆಸಕ್ತ ಲೇಖಕರು ಜೂ. 8ರ ಒಳಗಾಗಿ ಪರಿಷತ್ ಅಧ್ಯಕ್ಷರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.