ಸೋಮವಾರ, ಮೇ 10, 2021
25 °C

ತಾಳವಾಡಿ ಬಳಿ ಆನೆ ದಂತ ವಶ: ಇಬ್ಬರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಆನೆ ದಂತ ಸಾಗಿಸುತ್ತಿದ್ದ ವೇಳೆ ಅರಣ್ಯ ಸಂಚಾರ ದಳದ ಸಿಬ್ಬಂದಿ ದಾಳಿ ನಡೆಸಿ ಬುಧವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ತಮಿಳುನಾಡಿಗೆ ಸೇರಿದ ತಾಳವಾಡಿ ಫಿರ್ಕಾದ ಗಾಜನೂರು ಗ್ರಾಮದ ವೆಂಕಟರಾಮು ಹಾಗೂ ಈರೋಡ್‌ನ ಮಹಮ್ಮದ್ ವಾಯ್ಸ ಬಂಧಿತರು.

ಈ ಇಬ್ಬರು ಆರೋಪಿಗಳು ತಾಳವಾಡಿ ಕಡೆಯಿಂದ ಚಾಮರಾಜನಗರಕ್ಕೆ ಬೈಕ್‌ನಲ್ಲಿ ಆನೆ ದಂತ ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತಿದೆ. ಈ ಮಾಹಿತಿ ಮೇರೆಗೆ ಬೆಂಗಳೂರಿನ ಸಿಐಡಿ ಅರಣ್ಯ ಸಂಚಾರ ಘಟಕದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಲಕ್ಷ್ಮೀನರಸಿಂಹಯ್ಯ ನಗರಕ್ಕೆ ಆಗಮಿಸಿದ್ದಾರೆ.ಇಲ್ಲಿನ ಅರಣ್ಯ ಸಂಚಾರ ಘಟಕದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಚಿಕ್ಕಸಿದ್ದಯ್ಯ ಹಾಗೂ ಸಿಬ್ಬಂದಿ ವೆಂಕಟಯ್ಯನಛತ್ರದ ಗೇಟ್ ಬಳಿ ಕಾದುಕುಳಿತಿದ್ದಾರೆ.

ಆರೋಪಿಗಳು ಬೈಕ್‌ನಲ್ಲಿ ಬಂದ ವೇಳೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿತರ ಬಳಿ ಇದ್ದ ಒಂದು ಆನೆ ದಂತ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.