ನವದೆಹಲಿ: ಕೃಷ್ಣಾ ಜಲವಿವಾದ ನ್ಯಾಯಮಂಡಳಿ- 2ರ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸದಿರಲು ಹಿರಿಯ ವಕೀಲ ಎಫ್.ಎಸ್.ನಾರಿಮನ್ ನೇತೃತ್ವದ ಕರ್ನಾಟಕ ಪರ ವಕೀಲರ ತಂಡ ನಿರ್ಧರಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರ ಮತ್ತು ವಕೀಲರ ತಂಡದ ಮಧ್ಯೆ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ.ಕಳೆದ ಫೆಬ್ರುವರಿ 25ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ನ್ಯಾ. ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ಜಲವಿವಾದ ನ್ಯಾಯ ಮಂಡಳಿ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ನಿರ್ಣಯಿಸಲಾಯಿತು.

ಸರ್ವ ಪಕ್ಷಗಳ ಸಭೆಯ ನಿರ್ಣಯವನ್ನು ದೆಹಲಿಯಲ್ಲಿರುವ ಕರ್ನಾಟಕ ಪರ ವಕೀಲರ ತಂಡಕ್ಕೆ ತಲುಪಿಸಲಾಗಿದೆ. ನ್ಯಾಯಮಂಡಳಿ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದರಿಂದ ಆಗುವ ಪರಿಣಾಮ ಕುರಿತು ಸಮಗ್ರವಾಗಿ ಪರಿಶೀಲಿಸಿದ ವಕೀಲರ ತಂಡ ಇಂಥ ಕ್ರಮಕ್ಕೆ ಮುಂದಾಗದಿರಲು ತೀರ್ಮಾನಿಸಿತು.ವಕೀಲರ ತಂಡದ ನಿಲುವನ್ನು ಸರ್ಕಾರಕ್ಕೆ ತಿಳಿಸಲಾಗಿದೆ. ಯಾವ ಕಾರಣದಿಂದಾಗಿ ಈ ನಿಲುವಿಗೆ ಬರಲಾಗಿದೆ ಎಂಬ ಅಂಶವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ವಕೀಲರು ಮಾಡಿದ್ದಾರೆ.

ಆದಾಗ್ಯೂ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕೆಂದು ಸರ್ಕಾರ ಒತ್ತಡ ಹಾಕಿದರೂ ವಕೀಲರು ಮಣಿಯುವುದಿಲ್ಲ ಎಂದು ನಂಬಲರ್ಹ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ಕೃಷ್ಣಾ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸದಿರುವುದು ಅಷ್ಟೇ ಅಲ್ಲ, ನ್ಯಾಯಮಂಡಳಿಯ ಮುಂದೆ ಕೆಲವು ಅಂಶಗಳನ್ನು ಕುರಿತು ಸ್ಪಷ್ಟನೆ ಕೇಳುವುದಕ್ಕೂ ನಾರಿಮನ್ ಮತ್ತವರ ತಂಡ ಸಿದ್ಧ ಇಲ್ಲ. ರಾಜ್ಯದ ದೃಷ್ಟಿಯಿಂದ ಕೃಷ್ಣಾ ನ್ಯಾಯಮಂಡಳಿ ಸ್ವರ್ಗ ಇಳಿಸದಿದ್ದರೂ ‘ಪರವಾಗಿಲ್ಲ’ ಎನ್ನುವಂಥ ತೀರ್ಪು ನೀಡಿದೆ.

ಇದನ್ನು ಪ್ರಶ್ನೆ ಮಾಡುವುದರಿಂದ ಪ್ರತಿಕೂಲ ಆಗಬಹುದೆಂಬ ಅಭಿಪ್ರಾಯವನ್ನು ವಕೀಲರು ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ನಾರಿಮನ್ ಅವರ ಮನವೊಲಿಸುವ ಸಾಧ್ಯತೆಯಿದೆ. ಅವರು ತಮ್ಮ ನಿಲುವಿಗೆ ಅಂಟಿಕೊಂಡರೆ ಬೇರೆ ವಕೀಲರಿಂದ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿಸುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.ಕೃಷ್ಣಾ ನ್ಯಾಯ ಮಂಡಳಿ ತೀರ್ಪು ರಾಜ್ಯ ಸರ್ಕಾರಕ್ಕೂ ಸಮಾಧಾನ ತಂದಿದೆ. ಆದರೆ, ಅನಿವಾರ್ಯ ರಾಜಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ಗೆ ಹೋಗಬೇಕೆಂಬ ನಿಲುವಿಗೆ ಅಂಟಿಕೊಂಡಿದೆ.

ಈಚೆಗೆ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನಾರಿಮನ್ ಮತ್ತಿತರ ಕಾನೂನು ತಜ್ಞರ ಜತೆ ಸಮಾಲೋಚಿಸಲು ದೆಹಲಿಗೆ ಧಾವಿಸಿದ್ದರು.ಕೃಷ್ಣಾ ನ್ಯಾಯಮಂಡಳಿ ಆಲಮಟ್ಟಿ ಅಣೆಕಟ್ಟೆ ಎತ್ತರ ಕುರಿತಂತೆ ಕರ್ನಾಟಕದ ವಾದಕ್ಕೆ ಮನ್ನಣೆ ನೀಡಿದೆ. 524.265 ಮೀಟರ್ ಎತ್ತರಿಸಲು ಸಮ್ಮತಿಸಿದೆ. ಹೆಚ್ಚುವರಿ ನೀರಿನಲ್ಲಿ ಕರ್ನಾಟಕ 278 ಟಿಎಂಸಿ ಕೇಳಿತ್ತು.177 ಟಿಎಂಸಿ ನೀಡಿದೆ. ತುಂಗಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಸಿಂಗಟಾಲೂರು ಸೇರಿದಂತೆ ಕೆಲವು ಯೋಜನೆಗಳಿಗೆ 40 ಟಿಎಂಸಿ ನಿಗದಿಪಡಿಸಿದೆ.

ಸುಪ್ರೀಂಕೋರ್ಟ್ನಲ್ಲಿ ತೀರ್ಪು ಪ್ರಶ್ನಿಸುವುದರಿಂದ ರಾಜ್ಯಕ್ಕಾಗಿರುವ ಎಲ್ಲ ಲಾಭ ಕೈತಪ್ಪಬಹುದು. ನ್ಯಾಯಾಲಯ ವಿವಾದ ಇತ್ಯರ್ಥಪಡಿಸಲು ಹಲವು ವರ್ಷ ತೆಗೆದುಕೊಳ್ಳಬಹುದು. ಅಲ್ಲಿಯವರೆಗೂ ರಾಜ್ಯದ ಯೋಜನೆಗಳಿಗೆ ತಡೆ ನೀಡುವಂತೆ ಆಂಧ್ರ ಕೇಳಬಹುದು ಎಂಬ ಆತಂಕ ವಕೀಲರದ್ದು.ನ್ಯಾಯಮಂಡಳಿ ತೀರ್ಪು ಅಂತಿಮವಲ್ಲ. 2050ರ ಬಳಿಕ ನೀರು ಹಂಚಿಕೆ ಕುರಿತಂತೆ ಸಂಬಂಧಿಸಿದ ರಾಜ್ಯಗಳು ಮತ್ತೆ ಪುನರ್ಪರಿಶೀಲನಾ ಅರ್ಜಿ ಸಲ್ಲಿಸಲು ಅವಕಾಶವಿದೆ. ಸದ್ಯ ನ್ಯಾಯಮಂಡಳಿಯ ತೀರ್ಪನ್ನು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಲು ಸಿದ್ಧತೆ ನಡೆಸಿದೆ. ಒಮ್ಮೆ ಅಧಿಸೂಚನೆ ಹೊರಡಿಸಿದರೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಾದಿ ಸುಗಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.