ನರಸಿಂಹರಾಜಪುರ: ತರಕಾರಿ ಬೆಲೆ ನಿರಂತರ ಹೆಚ್ಚಳವಾಗುತ್ತಿರುವ ಕಾರಣ ಸಾರ್ವಜನಿಕರ ಜೀವನಕ್ಕೂ ಬಿಸಿ ಮುಟ್ಟಿಸಿದ್ದು ಅದರಲ್ಲೂ ಪ್ರಮುಖವಾಗಿ ಸಸ್ಯಹಾರಿಗಳು ಕಂಗೆಡುವಂತೆ ಮಾಡಿದೆ.

ಮಂಗಳವಾರ ಪಟ್ಟಣದಲ್ಲಿ ತರಕಾರಿ ಅಂಗಡಿಗಳಲ್ಲಿ ಕೆಜಿ ಟೊಮ್ಯಾಟೊ ಬೆಲೆ ರೂ. 60, ಹುರಳೀಕಾಯಿ ರೂ.80, ಬದನೆಕಾಯಿ ರೂ.30, ಹಸಿಮೆಣಸಿನ ಕಾಯಿ ರೂ.40, ಬೆಂಡೆಕಾಯಿ ರೂ.40, ತೊಂಡೆಕಾಯಿ ರೂ.40 ಇತ್ತು.

ತರಕಾರಿ ವ್ಯಾಪಾರಿಯೊಬ್ಬರ ಪ್ರಕಾರ ಗ್ರಾಹಕರಿಗೆ ಯಾವುದೇ ತರಕಾರಿಯ ಬೆಲೆ ಕೆ.ಜಿ ದರದಲ್ಲಿ ಹೇಳಿದರೆ ತರಕಾರಿಯನ್ನು ಕೊಳ್ಳಲು ಮುಂದಾಗದಿರುವುದರಿಂದ ಕಾಲು ಕೆ.ಜಿ ದರದಲ್ಲಿ ಹೇಳಲಾಗುತ್ತಿದೆ. ವ್ಯಾಪಾರವು ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಎಲ್ಲಾ ತರಕಾರಿಗಳು 100 ಗ್ರಾಂ, ಕಾಲು ಕೆ.ಜಿ ಇತ್ಯಾದಿ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ವ್ಯಾಪಾರ ಮಾಡುವುದೇ ದುಸ್ತರವಾಗಿದೆ ಎನ್ನುತ್ತಾರೆ.

ಮಲೆನಾಡಿನ ಭಾಗದಲ್ಲಿ ಈ ಪ್ರಮಾಣದಲ್ಲಿ ತರಕಾರಿಯ ಬೆಲೆ ಹೆಚ್ಚಾಗಿರುವುದು ಇತ್ತೀಚಿನ ವರ್ಷ ಗಳಲ್ಲಿ ಇದೇ ಮೊದಲ ಬಾರಿಯಾಗಿದೆ. ಈ ರೀತಿ ತರಕಾರಿ ಬೆಲೆ ಹೆಚ್ಚಿರುವುದು ಬಡವರ್ಗ, ಮಧ್ಯಮ ವರ್ಗ ಹಾಗೂ ಸಸ್ಯಹಾರಿಗಳಿಗೂ ಜೀವನವೆಚ್ಚ ದುಬಾರಿಯಾಗಿ ಪರಿಣಮಿಸಿದೆ. ದಿನ ನಿತ್ಯದ ಸಾಂಬಾರಿಗೆ ಬಳಸುವ ಟೊಮ್ಯಾಟೊ ಬೆಲೆ ಹೆಚ್ಚಿರುವುದರಿಂದ ಇದರ ಬದಲಿಗೆ ಹುಣಸೆಹಣ್ಣನ್ನು ಬಳಸುವುದು ಲೇಸು ಎನ್ನುತ್ತಾರೆ ಗೃಹಿಣಿಯರು.

ಸಮುದ್ರದ ಮೀನು, ಚಿಕನ್ ಬೆಲೆ ತರಕಾರಿ ಬೆಲೆಗೆ ಆಸುಪಾಸಿನಲ್ಲಿರುವುದರಿಂದ ಇದನ್ನೇ ದಿನನಿತ್ಯ ಬಳಸಬಹುದು ಎನ್ನುತ್ತಾರೆ ಮಾಂಸಾಹಾರಿಗಳು. ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಮಳೆ ಕೈಕೊಟ್ಟಿರುವುದು, ನೀರಿದ್ದರೂ ಬಳಸಲು ಬೇಕಾದ ವಿದ್ಯುತ್ಕ್ಷಾಮ ತರಕಾರಿ ಬೆಳೆಯಲು ಹಿನ್ನಡೆಯಾಗಿದ್ದು, ಬೆಲೆಗಳು ಗಗನಕ್ಕೇರಲು ಕಾರಣವಾಗಿದೆ. ಕಳೆದ 15-20 ದಿನಗಳಿಂದ ಉತ್ತಮ ಮಳೆಯಾಗಿದ್ದರೂ ತರಕಾರಿ ಬೆಲೆ ಇದೇ ದರದಲ್ಲಿ ಒಂದು, ಎರಡು ತಿಂಗಳವರೆಗೂ ಮುಂದುವರೆಯುವ ಸಾಧ್ಯತೆಯಿದೆಯೆಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.