ತೆಪ್ಪ ಮುಳುಗಿ ಐವರ ಸಾವು

7

ತೆಪ್ಪ ಮುಳುಗಿ ಐವರ ಸಾವು

Published:
Updated:

ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕಂದ್ಲಿ ಗ್ರಾಮದ ತಟ್ಟಿಹಳ್ಳ ಜಲಾಶಯದಲ್ಲಿ ತೆಪ್ಪ ಮುಳುಗಿ ಒಂದೇ ಕುಟುಂಬದ ಮೂವರು ಸೇರಿ ಐವರು ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ 6 ಗಂಟೆ ವೇಳೆಗೆ ಸಂಭವಿಸಿದೆ.

ಸತ್ತವರಲ್ಲಿ ಇಬ್ಬರು ಮಹಿಳೆಯರು ಹಾಗೂ ಮೂವರು ವಿದ್ಯಾರ್ಥಿನಿಯರು. ಒಬ್ಬ ವಿದ್ಯಾರ್ಥಿ ಈಜಿ ಪಾರಾಗಿದ್ದಾನೆ. ತಟ್ಟಿಹಳ್ಳ ಜಲಾಯಶದ ಒಂದು ಬದಿಯಲ್ಲಿರುವ ಹೊಲದಲ್ಲಿನ ಹತ್ತಿಯ ಫಸಲನ್ನು ಬಿಡಿಸಿಕೊಂಡು ತೆಪ್ಪದಲ್ಲಿ ತೆಗೆದುಕೊಂಡು ಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಮೃತರನ್ನು ಜಾಯವ್ವ ಬಾಂದೇಕರ (40), ಸೇವಂತಿ ಬಾಬರಿ (35), ವಿದ್ಯಾರ್ಥಿನಿಯರಾದ ಗಿರಿಜಾ ಬಾಂದೇಕರ (13), ಚನ್ನವ್ವ ಬಾಬರಿ (14), ಅಕ್ಷತಾ ಬಾಂದೇಕರ (13) ಎಂದು ಗುರುತಿಸಲಾಗಿದೆ.  ಕೃಷ್ಣಾ ಬಾಂದೇಕರ ಎಂಬ ಬಾಲಕ ಈಜಿ ದಡ ಸೇರಿಕೊಂಡಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry