ಶುಕ್ರವಾರ, ಜನವರಿ 17, 2020
20 °C

ತೆಲಂಗಾಣ: ನಿಲ್ಲದ ಹಗ್ಗಜಗ್ಗಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ (ಪಿಟಿಐ): ಆಂಧ್ರ ಪ್ರದೇಶ ಪುನರ್‌ರಚನೆ ಕರಡು ಮಸೂ ದೆಯು ಇದೀಗ ತೆಲಂಗಾಣ ಪರ ಹಾಗೂ ವಿರೋಧಿ ಬಣದ ಶಾಸಕರ ಹಗ್ಗ ಜಗ್ಗಾಟಕ್ಕೂ ಅವಕಾಶ ಕಲ್ಪಿಸಿಕೊಟ್ಟಿದೆ.ಈ ವಿಷಯವಾಗಿ ತೆಲಂಗಾಣ ಹಾಗೂ ಸೀಮಾಂಧ್ರ ಶಾಸಕರು ಕೋಲಾ ಹಲ ಎಬ್ಬಿಸಿದ್ದರಿಂದ ಕರಡು ಮಸೂದೆ­ಯು ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾಗಲಿಲ್ಲ.  ಸೋಮವಾರ ಮಂಡನೆಯಾಗುವ ನಿರೀಕ್ಷೆ ಇದೆ.ಕರಡು ಮಸೂದೆ ಮಂಡನೆ ಬಳಿಕ ಸ್ಪೀಕರ್‌, ಕಲಾಪ ಸಲಹಾ ಸಮಿತಿ ಸಭೆ ಕರೆಯಲಿದ್ದಾರೆ. ಈ ಸಭೆಯಲ್ಲಿ ಕರಡು ಮಸೂದೆ ಮೇಲಿನ ಚರ್ಚೆಯ ದಿನ ಗೊತ್ತುಪಡಿಸಲಾಗುತ್ತದೆ.ವಿಧಾನಸಭೆಯಲ್ಲಿ ಈ ಕೂಡಲೇ ಕರಡು ಮಸೂದೆ ಮಂಡಿಸಬೇಕು ಎನ್ನುವುದು ತೆಲಂಗಾಣ ಶಾಸಕರ ಪಟ್ಟು.  ಇನ್ನೊಂದೆಡೆ ಸೀಮಾಂಧ್ರ ಶಾಸಕರು, ಮುಂದಿನ ತಿಂಗಳು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಚರ್ಚೆಗೆ ಮುನ್ನ ಕರಡು ಮಸೂದೆಯನ್ನು ಇಂಗ್ಲಿಷ್‌ನಿಂದ ತೆಲುಗು ಹಾಗೂ ಉರ್ದು ಭಾಷೆಗಳಿಗೆ ತರ್ಜುಮೆ ಮಾಡಬೇಕು ಎಂದೂ  ಆಗ್ರಹಿಸಿದ್ದಾರೆ.ಈ ಚಳಿಗಾಲದ ಅಧಿವೇಶನದಲ್ಲಿ ಕರಡು ಮಸೂದೆ ಮೇಲೆ ಚರ್ಚೆ ನಡೆಸುವುದಕ್ಕೆ ಮುಖ್ಯಮಂತ್ರಿ ಕಿರಣ್‌್ ಕುಮಾರ್‌್ ರೆಡ್ಡಿ ಹಾಗೂ ಸೀಮಾಂಧ್ರ ಶಾಸಕರಿಗೆ  ಮನಸ್ಸಿಲ್ಲ. ಅವಿಶ್ವಾಸ ಗೊತ್ತುವಳಿ ಬೆದರಿಕೆ:

ಆದರೆ, ತೆಲಂಗಾಣ ಶಾಸಕರು ವಿಳಂಬ ತಂತ್ರಕ್ಕೆ ಅವಕಾಶ ಮಾಡಿ ಕೊಡಲು ತಯಾರಿಲ್ಲ. ತೆಲಂಗಾಣ ರಚನೆಗೆ ಅಡ್ಡಿಯಾಗುತ್ತಿರುವ ಮುಖ್ಯ­ಮಂತ್ರಿ ವಿರುದ್ಧ ‘ಅವಿಶ್ವಾಸ ಗೊತ್ತುವಳಿ’ ಮಂಡಿಸುವುದಾಗಿ ಉಪಮುಖ್ಯಮಂತ್ರಿ ದಾಮೋದರ ರಾಜ ನರಸಿಂಹ  ಬೆದರಿಕೆ ಹಾಕಿದ್ದಾರೆ.

ಪ್ರತಿಕ್ರಿಯಿಸಿ (+)