ಬುಧವಾರ, ಮೇ 12, 2021
19 °C

ತೆಲಂಗಾಣ: ಮತ್ತೊಬ್ಬ ಯುವಕ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರೀಂನಗರ, ಆಂಧ್ರಪ್ರದೇಶ (ಪಿಟಿಐ): ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತು ತಮ್ಮ ಪ್ರಾಂತ್ಯದ ರಾಜಕಾರಣಿಗಳ `ನಿಷ್ಕ್ರಿಯತೆ~ಗೆ ಬೇಸತ್ತು ವಾರಂಗಲ್ ಜಿಲ್ಲೆಯ 23 ವರ್ಷದ ಯುವಕನೊಬ್ಬ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸೀತಾಮ್‌ಪೇಟ್ ಗ್ರಾಮದ ಎಲ್ ನಾಗರಾಜು ಎಂಬಾತ ಪೆದ್ದಪಲ್ಲಿಯಲ್ಲಿ  ರೈಲ್ವೆ ಮೇಲ್ಸೆತುವೆಯಿಂದ ಚಲಿಸುತ್ತಿದ್ದ ರೈಲಿನ ಎದುರು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳು ಹೇಳಿವೆ.

ತೆಲಂಗಾಣ ರಾಜ್ಯ ರಚನೆಗೆ ಒತ್ತಾಯಿಸಿ ಪ್ರಾಣ ಕಳೆದುಕೊಳ್ಳುತ್ತಿರುವುದಾಗಿ ನಾಗರಾಜು ಆತ್ಮಹತ್ಯೆಗೆ ಮುನ್ನ ಮೊಬೈಲ್‌ನಲ್ಲಿ ತಮಗೆ ತಿಳಿಸಿದ ಎಂದು ಕುಟುಂಬದವರು ಹೇಳಿದ್ದಾರೆ. ಇದೇ ಬೇಡಿಕೆಗಾಗಿ ಕಳೆದ ವಾರ ಎಂಬಿಎ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.