ಪಣಜಿ (ಐಎಎನ್ಎಸ್): ತೆಹೆಲ್ಕಾದ ಮಾಜಿ ಪ್ರಧಾನ ಸಂಪಾದಕ ತೇಜ್ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸಿ 60 ದಿನಗಳಲ್ಲಿ ಮುಗಿಸಬೇಕು ಎಂದು ಕೋರಿ ಪ್ರಾಸಿಕ್ಯೂಟರ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಮುಖ ವ್ಯಕ್ತಿ ಭಾಗಿಯಾಗಿರುವ ಪ್ರಕರಣ ಇದಾಗಿರುವುದರಿಂದ ಅತಿ ಸೂಕ್ಷ್ಮವಾಗಿದ್ದು ವಿಚಾರಣೆಯನ್ನು 60 ದಿನಗಳಲ್ಲಿ ಮುಗಿಸಬೇಕು ಎಂದು ಕೊರುತ್ತೇವೆ ಎಂದು ಸರ್ಕಾರಿ ವಕೀಲ ಫ್ರಾನ್ಸಿಸ್ ತವೊರಾ ತಿಳಿಸಿದ್ದಾರೆ.

ಗೋವಾದ ಪಂಚತಾರಾ ಹೋಟೆಲ್ನಲ್ಲಿ ನಡೆದ ಸಮ್ಮೇಳನದ ವೇಳೆ ತೇಜ್ಪಾಲ್ ಅವರು ಲಿಪ್ಟಿನಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದರು ಎಂದು ಅವರ ಕಿರಿಯ ಸಹೋದ್ಯೋಗಿ ದೂರು ನೀಡಿದ್ದರಿಂದ ತನಿಖೆ ನಡೆಸಿದ ಗೋವಾ ಪೊಲೀಸರು ತೇಜ್ಪಾಲ್ ವಿರುದ್ಧ ಐಪಿಸಿಯ ಅನೇಕ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಾಂಬೈ ಹೈಕೋರ್ಟ್ನ ಪಣಜಿ ಪೀಠವು ತೇಜಪಾಲ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ತನಿಖಾ ಅಧಿಕಾರಿಗೆ ಬೆದರಿಕೆ ಹಾಕಿದ ಮತ್ತು ಜೈಲಿನಲ್ಲಿ ಮೊಬೈಲ್ ಹೊಂದಿದ್ದರು ಎಂಬ ಕಾರಣಕ್ಕೆ ತೇಜ್ಪಾಲ್ ವಿರುದ್ಧ ಮತ್ತೆ 2ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.