ಗುರುವಾರ , ಜನವರಿ 23, 2020
26 °C

ತೇಜ್‌ಪಾಲ್‌ ಕಸ್ಟಡಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೇಜ್‌ಪಾಲ್‌ ಕಸ್ಟಡಿ ವಿಸ್ತರಣೆ

ಪಣಜಿ (ಪಿಟಿಐ): ಕಿರಿಯ ಸಹೋ­ದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ‘ತೆಹೆಲ್ಕಾ’ ಪ್ರಧಾನ ಸಂಪಾದಕ ತರುಣ್‌ ತೇಜ್‌-­ಪಾಲ್‌ ಪೊಲೀಸ್‌ ಕಸ್ಟಡಿಯನ್ನು ಮತ್ತೆ 4 ದಿನಗಳ  ಕಾಲ ವಿಸ್ತರಿಸ­ಲಾಗಿದೆ.



6 ದಿನಗಳ ವಶದ ಅವಧಿ ಕೊನೆ­ಗೊಂಡ ಬಳಿಕ ಗೋವಾ ಪೊಲೀಸರು ಶನಿವಾರ ತೇಜ್‌ಪಾಲ್‌ ಅವರನ್ನು ಕೋರ್ಟ್‌ಗೆ ಹಾಜರು ಪಡಿಸಿದರು.



ಆರೋಪಿ ಹಾಗೂ ಸಾಕ್ಷಿಗಳ ಹೆಚ್ಚಿನ ವಿಚಾರಣೆ­ಗಾಗಿ ಇನ್ನಷ್ಟು ಕಾಲಾ­ವಕಾಶ ನೀಡು­ವಂತೆ ಪ್ರಾಸಿಕ್ಯೂಷನ್‌ ಪರ ವಕೀಲರು ನ್ಯಾಯಾ­ಲಯಕ್ಕೆ ಮನವಿ ಮಾಡಿದರು. ಮನವಿ­ಯನ್ನು ಪುರಸ್ಕರಿ­ಸಿದ ನ್ಯಾಯಾಲಯ, ತೇಜ್‌ಪಾಲ್‌ ಅವರ ಕಸ್ಟಡಿಯನ್ನು ಡಿ. 10ರ­ ವರೆಗೆ ವಿಸ್ತರಿಸಿತು.



ಶೋಮಾ ಚೌಧರಿ ಹೇಳಿಕೆ: ‘ತೆಹೆಲ್ಕಾ’­ಮಾಜಿ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿ ಶನಿವಾರ ನ್ಯಾಯಾ­ಲ­ಯಕ್ಕೆ ಹಾಜರಾಗಿದ್ದು, ಅವರ ಹೇಳಿಕೆಯನ್ನು ನ್ಯಾಯಲಯವು ದಾಖಲಿಸಿಕೊಂಡಿತು.

ಪ್ರತಿಕ್ರಿಯಿಸಿ (+)