ಲಂಡನ್ (ಪಿಟಿಐ): 12ನೇ ಶತಮಾನದ ದಾರ್ಶನಿಕ ಹಾಗೂ ಪ್ರಜಾಸತ್ತೆಯ ಪ್ರತಿಪಾದಕ ಬಸವೇಶ್ವರರ ಪ್ರತಿಮೆಯನ್ನು ಲಂಡನ್ನ ಥೇಮ್ಸ ನದಿ ದಡದಲ್ಲಿ ಸ್ಥಾಪಿಸಲು ಸ್ಥಳೀಯ ಯೋಜನಾ ಸಮಿತಿ ಅನುಮತಿ ನೀಡಿದೆ.

ಬ್ರಿಟನ್ನ ಸಂಸತ್ ಭವನದ ಮುಂಭಾಗದಲ್ಲಿ ಹಾಗೂ ಥೇಮ್ಸ ನದಿ ದಡದಲ್ಲಿರುವ ಐತಿಹಾಸಿಕ ಆಲ್ಬರ್ಟ್ ಕಟ್ಟೆಯ ಮೇಲೆ ಸ್ಥಾಪಿಸಲಿರುವ ಈ ಪ್ರತಿಮೆಯನ್ನು ಅಮೃತಶಿಲೆಯಲ್ಲಿ ನಿರ್ಮಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಲ್ಯಾಂಬೆತ್ನ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ಡಾ.ನೀರಜ್ ಪಾಟೀಲ್ ಈ ಕುರಿತು ಯೋಜನಾ ಸಮಿತಿ ಮುಂದೆ ಅರ್ಜಿ ಸಲ್ಲಿಸಿದ್ದರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜಾತಂತ್ರ ವ್ಯವಸ್ಥೆಗೆ ನಾಂದಿ ಹಾಡಿದ ವ್ಯಕ್ತಿಯ ಪ್ರತಿಮೆಯನ್ನು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಸಂಸ್ಥೆ (ಬ್ರಿಟನ್ ಸಂಸತ್ತು) ಮುಂದೆ ಸ್ಥಾಪನೆ ಮಾಡುವುದರಿಂದ ಉಭಯ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂಬಂಧ ಇನ್ನಷ್ಟು ಹೆಚ್ಚಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.