ಬೋರ್ಡ್ ರೂಮಿನ ಸುತ್ತ ಮುತ್ತ

ಉಂಡಾಡಿ ಗುಂಡರೆಲೊ ನಮ್ಮ ನಾಯಕರಿಂದು/
ಬಂಡರಾಗಿಹರೆಲ್ಲ ಹೊಣೆಯನು ಮರೆತು//
ದಂಡಬಿದ್ದರೆ ಇರದೆ, ಶಿಕ್ಷಿಸುವರಾರಿರದೆ/
ಪುಂಡರಾಗಿಹರೆಲ್ಲ! - ನವ್ಯ ಜೀವಿ//

ಹಿಂದಿನ ಅಂಕಣದಲ್ಲಿ `ರೆಸ್ಪಾನ್ಸಿಬಿಲಿಟಿ~ ಎಂಬ ಪದವನ್ನು ಬಳಸಿ ಅದು ವೈಯಕ್ತಿಕವಾದ ನೆಲೆಗಟ್ಟಿನಲ್ಲಿ ಸ್ವಯಂಪ್ರೇರಣೆಯಿಂದ ಮಾತ್ರವೇ ವ್ಯಕ್ತವಾಗದೆ ಅದು ಎಲ್ಲರ ಸಹಜ ಕ್ರಿಯೆಯಾಗಬೇಕಾದರೆ ಅದಕ್ಕಾಗಿ ಕಂಪೆನಿಯೊಂದು ತನ್ನ ಕಾರ್ಯಾಚರಣೆಯನ್ನು ಸೂಕ್ತ ರೀತಿಯಲ್ಲಿ ರೂಪಿಸಿಕೊಳ್ಳಬೇಕಾದೀತು ಎಂದು ಚರ್ಚಿಸಿದ್ದೆವು. ಈ ವಿಷಯವಾಗಿ ಅನೇಕ ಓದುಗರು ಪ್ರತಿಕ್ರಿಯಿಸಿದ್ದಾರೆ.

ಓದುಗ ಮಿತ್ರರಾದ ಲಕ್ಷ್ಮಣ ಭಂಡಾರಕರ್ ಅವರು, ರೆಸ್ಪಾನ್ಸಿಬಿಲಿಟಿ `ಯಾವುದೇ ಕೆಲಸವಾದರೂ ನಾನೇ ಏಕೆ?~ ಎಂಬುದರ ಬದಲಿಗೆ `ನಾವಲ್ಲದೆ ಇನ್ಯಾರು ಮಾಡಬೇಕು?~ ಎಂದು ಆ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ರೆಸ್ಪಾನ್ಸಿಬಲ್ ಮನುಷ್ಯನೊಬ್ಬನ ನಿಜ ಸ್ವರೂಪ. ಇದು ಉದ್ಯೋಗದಲ್ಲಿ ಮಾತ್ರವಲ್ಲದೆ ಜವಾಬ್ದಾರಿಯುತ ನಾಗರಿಕತನಕ್ಕೂ ಒಳ್ಳೆಯದು ಎಂದು ನನ್ನ ಭಾವನೆ~ ಎಂದಿದ್ದಾರೆ.

ರೆಸ್ಪಾನ್ಸಿಬಿಲಿಟಿ ಕುರಿತು ಲಕ್ಷಣ ಅವರ ಅರ್ಥ ವಿವರಣೆ ಪದಗಣನೆಯಲ್ಲಿ ಅದೆಷ್ಟು ಸ್ಫುಟವಾಗಿದೆಯೋ ಪಥ ಪ್ರದರ್ಶನದಲ್ಲಿ ಅಷ್ಟೇ ವಿಸ್ತಾರವಾಗಿಯೂ ಇದೆ, ಅತ್ಯಂತ ಸೂಕ್ತವೂ ಆಗಿದೆ. ಇದನ್ನು ಹಂಚಿಕೊಂಡ ಓದುಗ ಗೆಳೆಯರಿಗೆ ಧನ್ಯವಾದಗಳು.

ಹಿಂದಿನ ಅಂಕಣದಲ್ಲಿ ರೆಸ್ಪಾನ್ಸಿಬಿಲಿಟಿ ಪದದ ಜತೆಯಲ್ಲೇ ಇರುವ ಅಥವಾ ಬರಲೇಬೇಕಾದ ಮತ್ತೊಂದು ಪದ ಯಾವುದು ಎಂಬ ಪ್ರಶ್ನೆಯೂ ಇತ್ತು. ಉತ್ತರ ಸ್ಪಷ್ಟ. ಆ ಪದ ಅಕೌಂಟಿಬಿಲಿಟಿ ಆಗಿರದೆ ಮತ್ತಿನ್ನೇನೂ ಆಗಿರಲಿಕ್ಕೆ ಸಾಧ್ಯವಿಲ್ಲ.

ರೆಸ್ಪಾನ್ಸಿಬಲ್ ಎಂಬ ಪದಕ್ಕೆ ಕನ್ನಡದ ಅರ್ಥಗಳು ಅನೇಕ; ಹೊಣೆಗಾರಿಕೆ, ಜವಾಬ್ದಾರಿ, ಉತ್ತರದಾಯಿತ್ವ, ಪ್ರತಿವರ್ತನೆ ಇತ್ಯಾದಿ. ಇವೆಲ್ಲವೂ ಸಮಂಜಸ ಕೂಡ. ಆದರೆ, `ಅಕೌಂಟಬಲ್~ ಪದಕ್ಕೆ ನನ್ನಲ್ಲಿರುವ ನಿಘಂಟು ಕೊಡುವ ಅರ್ಥಗಳು ಎರಡು- ಜವಾಬ್ದಾರಿ ಹೊಂದಿರುವ ಅಥವಾ ಜವಾಬ್ದಾರನಾದ.

ನನಗೇಕೋ ಕನ್ನಡದ ಈ ಎರಡೂ ಪದಪ್ರಯೋಗಗಳು ಅಕೌಂಟಬಲ್ ಎಂಬ ಆಂಗ್ಲ ಪದದ ಹಿಂದಿರುವ ಮ್ಯಾನೇಜ್ಮೆಂಟಿನ ಧ್ವನಿಯನ್ನು ಬಿಂಬಿಸುವುದರಲ್ಲಿ ಸ್ವಲ್ಪ ಮಟ್ಟಿಗೆ ವಿಫಲವಾಗುತ್ತವೆ ಎಂದೇ ಅನ್ನಿಸುತ್ತದೆ.

ನನ್ನಲ್ಲಿರುವ ಆಂಗ್ಲ-ಆಂಗ್ಲ ನಿಘಂಟಿನಲ್ಲಿ ಅಕೌಂಟಬಲ್ ಎಂಬ ಪದಕ್ಕೆ ರೆಸ್ಪಾನ್ಸಿಬಲ್ ಎಂಬ ಪದದ ಜತೆಯೇ `ಲಯಬಲ್~ ಎಂಬ ಇನ್ನೊಂದು ಪದವನ್ನೂ ಸೂಚಿಸಿದ್ದಾರೆ. ಲಯಬಲ್ ಅಂದರೆ ಕರ್ತವ್ಯಬದ್ಧನಾದ ಅಥವಾ ದಂಡಕ್ಕೆ ಒಳಗಾದ ಎಂದು ಅರ್ಥೈಸಿಕೊಳ್ಳಬಹುದು.
ನಮ್ಮ ಮುಂದಿನ ಚರ್ಚೆಗೆ `ಅಕೌಂಟಬಲ್~ ಪದಕ್ಕೆ `ಕರ್ತವ್ಯಬದ್ಧನಾದ~ ಎಂಬುದರ ಜತೆಗೇ `ದಂಡಕ್ಕೆ ಒಳಗಾದ~ ಎಂಬುದನ್ನೂ ಸೇರಿಸಿಕೊಳ್ಳುವುದು ಸೂಕ್ತವಾದೀತು.

ನನ್ನಲ್ಲಿರುವ ನಿಘಂಟುವಿನಲ್ಲಿ ಇವೆರಡರ ಸಮ್ಮಿಶ್ರಣವಾದ ಏಕ ಪದ ಇಲ್ಲ. ಹಾಗಾಗಿ `ದಂಡಬದ್ಧತೆ~ ಎಂಬ ಹೊಸ ಪದವನ್ನು ನಾವೇ ಹುಟ್ಟುಹಾಕಿಕೊಂಡು ಮುಂದುವರೆಯೋಣ.
`ಹೊಣೆಗಾರಿಕೆ~ ಹಾಗೂ `ದಂಡಬದ್ಧತೆ~- ಈ ಎರಡೂ ಪ್ರಜ್ಞೆಗಳು ಒಂದಕ್ಕೊಂದು ಪೂರಕ. ಇವು ಅವಳಿ-ಜವಳಿ ಪದಗಳು. ಹೊಣೆಗಾರಿಕೆ ಇದ್ದರೂ ದಂಡಬದ್ಧತೆ ಇಲ್ಲವಾದರೆ, ಹೊಣೆಗಾರಿಕೆ ಮಾತ್ರವೇ ನೌಕರನೊಬ್ಬನ ಎಚ್ಚರವನ್ನು ಎಲ್ಲ ವೇಳೆಯಲ್ಲೂ ಕಾಯ್ದಿರಿಸಿಕೊಳ್ಳಲಾರದು.

ಅಂತೆಯೇ ದಂಡಬದ್ಧತೆಯ ಸರಹದ್ದಿನಲ್ಲಿ ಮಾತ್ರವೇ ಹೊಣೆಗಾರಿಕೆಯನ್ನು ನೌಕರನೊಬ್ಬನ ಎದೆಯಲ್ಲಿ ಉದ್ದೀಪನಗೊಳಿಸಲಾಗುವುದಿಲ್ಲ. ಉದಾಹರಣೆಗೆ ಹಕ್ಕು ಹಾಗೂ ಬಾಧ್ಯತೆಗಳೆರಡೂ ಸಮಾಜವೊಂದರ ಹೊಣೆಗಾರಿಕೆಯಾದರೆ, ಪ್ರಬಲವಾದ ಹಾಗೂ ದಕ್ಷವಾದ ಕಾನೂನಿನ ನೀತಿಸಂಹಿತೆ ಜನರಲ್ಲಿ ದಂಡಬದ್ಧತೆಯನ್ನು ಮಾಡಿಸಬಲ್ಲದು.

`ನಾನಲ್ಲದೆ ಇನ್ಯಾರು ಮಾಡಬೇಕು?~ ಎಂಬ ಹೊಣೆಗಾರಿಕೆಯ ಓಡುವ ಕುದುರೆಗೆ `ನಾನು ಮಾಡದಿದ್ದರೆ ಅದರಿಂದ ನನಗಾಗುವ ನಷ್ಟ ಅಥವಾ ನನಗೊದಗುವ ಶಿಕ್ಷೆ ಏನು?~ ಎಂಬ ದಂಡಬದ್ಧತೆಯ ಅಂಕುಶವಿದ್ದರೆ, ಕಂಪೆನಿಯೆಂಬ ಗಾಡಿಯ ಚಲನೆ ಸಲೀಸು.

ಯಾವ ಕಂಪೆನಿಯಲ್ಲಿ ಇವೆರಡೂ ಒಂದಕ್ಕೊಂದು ಸಹಜವಾಗಿ ಮೂಡಿಬರುತ್ತವೋ ಅಲ್ಲಿನ ಎಲ್ಲರೂ ಕಾಯಿದೆಗೆ ಅನುಸಾರವಾಗಿ ಹೊಣೆಗಾರರಾಗುತ್ತಾರೆ, ಹೊಣೆಯರಿತು ದುಡಿಯುತ್ತಾರೆ. ಎಲ್ಲ ಸರಿಯಾದಾಗ ವಿಜೃಂಭಿಸುತ್ತಾರೆ. ತಪ್ಪಾದಾಗ ಅದಕ್ಕೆ ಸಲ್ಲಬೇಕಾದ ಕಪ್ಪ ಕಟ್ಟಿ ಎಲ್ಲೋ ಸ್ವಲ್ಪ ಸಡಿಲಗೊಂಡಿರುವ ತಮ್ಮ ಹೊಣೆಗಾರಿಕೆ ಪ್ರಜ್ಞೆಯನ್ನು ಮತ್ತಷ್ಟು ಬಲಗೊಳಿಸಿ ಮುಂದೆ ಸಾಗುತ್ತಾರೆ.

ಇದು ವೈಯಕ್ತಿಕವಾಗಿ ನೌಕರನೊಬ್ಬನನ್ನು ಜಾಗೃತವಾಗಿಡುವುದರ ಜತೆಯಲ್ಲೇ, ತಿಳಿದು ತಪ್ಪು ಮಾಡುವ ತಿಳಿಗೇಡಿತನವನ್ನು ಕಡಿಮೆಗೊಳಿಸುತ್ತ ಒಟ್ಟಾರೆ ಕಂಪೆನಿಯ ಕೆಲಸ ಕಾರ್ಯಗಳಲ್ಲಿ ಒಂದು ಶಿಸ್ತನ್ನೂ ತರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸ್ವಯಂಪ್ರೇರಣೆಯಿಂದ ಹೊಣೆಗಾರನಾಗುವುದು ನಮಗೆ ನಿಮ್ಮ ಖಾಸಗಿ ಜೀವನದಲ್ಲಿ ಅಥವಾ ಸಮಾಜಾಭಿಮುಖವಾದ ಕಾರ್ಯಗಳಲ್ಲಿ ಮುಖ್ಯವಾದೀತು. ಆದರೆ ಸಮಯವೊಂದರ ನಿರ್ದಿಷ್ಟವಾದ ಚೌಕಟ್ಟಿನಲ್ಲಿ, ಹಣ ಮಾಡಬೇಕಾದ ಏಕಮೇವ ಉದ್ದೇಶದಲ್ಲಿ ತೊಡಗುವ ಕಂಪೆನಿಗಳ ಸ್ತರದಲ್ಲಿ ನೌಕರರೆಲ್ಲ ಕಾಯಿದೆಗೆ ಅನುಗುಣವಾಗಿ ಹೊಣೆಗಾರರಾಗುವುದು ಅತಿ ಮುಖ್ಯ. ಈ ಸೂಕ್ಷ್ಮವಾದ ಅಂತರವನ್ನು `ಬೋರ್ಡ್ ರೂಮಿನ ಸುತ್ತಮುತ್ತ~ಲಿನ ಎಲ್ಲರೂ ಸ್ಪಷ್ಟವಾಗಿ ಅರಿತುಕೊಳ್ಳಬೇಕು.

ಡೇವಿಡ್ ವೀಲನ್ ಎಂಬ ಮ್ಯಾನೇಜ್ಮೆಂಟ್ ಚಿಂತಕ ತನ್ನದೇ ಆದ ಅಭ್ಯಾಸವನ್ನು ಲೇಖನವೊಂದರಲ್ಲಿ ಚೆಂದವಾಗಿ ಬರೆದಿದ್ದಾನೆ. ಅದನ್ನು ತಮ್ಮಡನೆ ಹಂಚಿಕೊಳ್ಳುವ ಬಯಕೆ;

ಡೇವಿಡ್ಗೆ ಪದಬಂಧ ಬಿಡಿಸುವ ಹವ್ಯಾಸ. ಅದರಲ್ಲಿ ಆತ ನಿಸ್ಸೀಮನೂ ಹೌದು. ಅನೇಕ ಕ್ಲಿಷ್ಟ ಪದಬಂಧಗಳ ಪುಸ್ತಕಗಳನ್ನು ತೆರೆದು ಸಮಯ ದೊರೆತಾಗಲೆಲ್ಲ ಅವುಗಳ ಪರಿಹಾರದಲ್ಲಿ ತೊಡಗುತ್ತಾನೆ. ಆದರೆ ಇದಕ್ಕೆ ಅವನೆಂದೂ ಬೇಕೆಂದೇ ಪೆನ್ಸಿಲ್ ಬಳಸುವುದಿಲ್ಲ. ಅಳಿಸಲಾಗದ ಪೆನ್ ಮಾತ್ರವೇ ಬಳಸುತ್ತಾನೆ. ಇದರಲ್ಲೇನು ಅಂತಹ ವಿಶೇಷ ಎಂದು ಕೇಳುವ ಮುನ್ನ ಒಮ್ಮೆ ಯೋಚಿಸಿ.

ಪೆನ್ಸಿಲ್ ಬಳಸುವಾಗ ತಪ್ಪಾದರೆ ಅವುಗಳನ್ನು ಅಳಿಸಿ ಮತ್ತೆ ಅದೇ ಪದಬಂಧದಲ್ಲಿ ಮುಂದುವರಿಯಬಹುದು. ಆದರೆ ಪೆನ್ನಿನಲ್ಲಿ ಇದು ಸಾಧ್ಯವಾಗದು. ಬರೆದದ್ದು ತಪ್ಪಾದರೆ ಆ ಪದಬಂಧವನ್ನು ತ್ಯಜಿಸಿ ಮತ್ತೊಂದಕ್ಕೆ ಕೈ ಹಾಕಬೇಕು. ಇದರಲ್ಲೇ ಹೊಣೆಗಾರಿಕೆ ಹಾಗೂ ದಂಡಬದ್ಧತೆಯ ವಿಶೇಷತೆಯನ್ನು ನಾವು ಕಂಡುಕೊಳ್ಳಬಹುದು.

ಪೆನ್ಸಿಲ್ ಬಳಸುವಾಗಲೂ ನಾವು ಪದಬಂಧವನ್ನು ಪೂರ್ಣಗೊಳಿಸಬೇಕೆಂಬ ಹೊಣೆಗಾರಿಕೆಯಲ್ಲಿಯೇ ಮಾಡುತ್ತೇವೆ. ಆದರೆ ಉತ್ತರಗಳು ತಪ್ಪಾದಾಗ, ಅವುಗಳನ್ನು ಅಳಿಸಿ ಏನೂ ಆಗೇ ಇಲ್ಲವೆಂಬಂತೆ ಮುಂದುವರೆಯಬಹುದು. ಇದರಿಂದಾಗಿ ಪದಬಂಧವನ್ನು ನಾವು ಅಷ್ಟೊಂದು ಕಳಕಳಿಯಿಂದ ಪರಿಹರಿಸುವತ್ತ ಗಮನವನ್ನು ಕೊಡದಿರಬಹುದು. ಈ ಸಾಧ್ಯತೆ ಉಂಟು.

ಇದಕ್ಕೆ ವ್ಯತಿರಿಕ್ತವಾಗಿ, ಪೆನ್ ಬಳಸುವಾಗ ನಮ್ಮ ಅರಿವಿಗಿಲ್ಲದೆಯೇ ಪದಬಂಧವನ್ನು ಪರಿಹರಿಸಬೇಕೆಂಬ ನಮ್ಮ ಹೊಣೆಗಾರಿಕೆ ದ್ವಿಗುಣಗೊಳ್ಳುತ್ತದೆ. ಉತ್ತರಗಳನ್ನು ಹಾಳೆಯಲ್ಲಿ ಮೂಡಿಸುವ ಮುನ್ನ ಅವುಗಳನ್ನು ಆದಷ್ಟೂ ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು, ಸರಿ-ತಪ್ಪುಗಳನ್ನು ಪರಾಮರ್ಶಿಸಿ ಆನಂತರವೇ ಅದನ್ನು ಹಾಳೆಯಲ್ಲಿ ಮಸಿಯಾಗಿಸುತ್ತೇವೆ. ಇದರಿಂದ ತಪ್ಪೇ ಆಗುವುದಿಲ್ಲವೆಂದಲ್ಲ.

ಒಮ್ಮೆ ಆದ ತಪ್ಪುಗಳೇ ಮತ್ತೆ ಮತ್ತೆ ಆಗುವ ಸಂಭವ ಕಡಿಮೆಯಾಗುತ್ತವೆ. ಹಾಗೊಮ್ಮೆ ತಪ್ಪಾದರೆ ಆ ಪದಬಂಧವನ್ನು ಪರಿಗಣಿಸುವಲ್ಲಿ ವಿಫಲವಾದಂತಾಗಿ ಮತ್ತೊಂದು ಪದಬಂಧಕ್ಕೆ ಹೋಗಲೇಬೇಕಾದ ಅನಿವಾರ್ಯತೆ ದಂಡಬದ್ಧತೆಯ ಸಂಕೇತವಾಗಿ ನಮ್ಮ ಮನಸ್ಸಿನಲ್ಲಿ ಸದಾ ನಮ್ಮನ್ನು ಎಚ್ಚರಿಸುತ್ತಿರುತ್ತದೆ. ತಪ್ಪಾಗಿ ಮುಂದಿನ ಪದಬಂಧವನ್ನು ಕೈಗೆತ್ತಿಕೊಳ್ಳುವಾಗ ನಾವು ಖಂಡಿತವಾಗಿಯೂ ಮತ್ತಷ್ಟು ಜಾಗೃತರಾಗಿರುತ್ತೇವೆ. ಅಷ್ಟರ ಮಟ್ಟಿಗೆ ಬೆಳೆದಿರುತ್ತೇವೆ ಕೂಡ!

ಡೇವಿಡ್ನ ಪದಬಂಧದ ಇದೇ ಅಭ್ಯಾಸ ನನಗೂ ಸುಡೊಕು ಪರಿಹರಿಸುವಾಗ ಇದೆಯಾದರೂ, ಈ ಪುಟ್ಟ ಅಭ್ಯಾಸದ ಹಿನ್ನೆಲೆಯಲ್ಲಿ ಹೊಣೆಗಾರಿಕೆ ಹಾಗೂ ದಂಡಬದ್ಧತೆಯ ನೀತಿ ಪಾಠಗಳು ಅಡಕವಾಗಿವೆ ಎಂದು ತಿಳಿದದ್ದು ಡೇವಿಡ್ನ ಲೇಖನವನ್ನು ಓದಿದಾಗಲೇ. ಅವನ್ನು ಹೇಳುವುದು ತನ್ನದೇ ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾತ್ರವೇ ಸತ್ಯವಲ್ಲ. ಇಂತಹ ಅಭ್ಯಾಸಗಳು ನೌಕರರಲ್ಲಿ ಇರುವಂತೆ ಕಂಪೆನಿ ನೋಡಿಕೊಂಡರೆ, ಸಮಷ್ಟಿಯಲ್ಲಿ ಅದು ಕಂಪೆನಿಯ ಆರೋಗ್ಯದ ಹೆಗ್ಗುರುತು ಆಗಿಬಿಡುವುದರಲ್ಲಿ ಸಂಶಯವಿಲ್ಲ.

ಇದಕ್ಕೆ ಇಷ್ಟೆಲ್ಲಾ ಪ್ರಾಮುಖ್ಯತೆ ಇದ್ದರೂ ನಾವೇ ಖುದ್ದಾಗಿ ಕಂಡಂತೆ ಅನೇಕ ಕಂಪೆನಿಗಳು ಇವುಗಳನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರುತ್ತಿಲ್ಲ. ಅದರ ಕಾರಣಗಳ ಹಿನ್ನೆಲೆಯಲ್ಲೇ ಹೊಣೆಗಾರಿಕೆ ಹಾಗೂ ದಂಡಬದ್ಧತೆಗೆ ಮದುವೆ ಮಾಡಿಸುವುದು ಹೇಗೆ ಹಾಗೂ ಅಂತಹ ಸಂಯೋಗದ ಫಲ ಎಂತಹುದು ಎಂಬ ವಿಷಯಗಳನ್ನೆಲ್ಲ ಮುಂದಿನ ಕೆಲ ಅಂಕಣಗಳಲ್ಲಿ ವಿಮರ್ಶಿಸೋಣ.

satyesh.bellur@gmail.com
ಇ-ಮೇಲ್ ವಿಳಾಸದಲ್ಲಿ ಲೇಖಕರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.