ಶನಿವಾರ, ಜನವರಿ 18, 2020
26 °C

ದಕ್ಷಿಣ ಸುಡಾನ್‌ಗೆ ಅಮೆರಿಕ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಐಎಎನ್‌ಎಸ್‌): ದಕ್ಷಿಣ ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸಾ­ಚಾರ ನಿಯಂತ್ರಿಸಲು ಅಗತ್ಯ ನೆರವು ನೀಡುವುದಕ್ಕಾಗಿ ವಿಶೇಷ ರಾಯಭಾರಿ­ಯನ್ನು ಕಳುಹಿಸಲಾಗಿದೆ ಎಂದು ಅಮೆ­ರಿಕ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರ್ರಿ ತಿಳಿಸಿದ್ದಾರೆ.ದಕ್ಷಿಣ ಸುಡಾನ್‌ನ ಸಶಸ್ತ್ರ ಹಿಂಸಾ­ಚಾರ ಕೊನೆಗೊಳಿಸಲು ನಡೆಯುತ್ತಿರುವ ಪ್ರಾದೇಶಿಕ ಪ್ರಯತ್ನಕ್ಕೆ ವಿಶೇಷ ರಾಯ­ಭಾರಿ ಡೊನಾಲ್ಡ್ ಬೂತ್‌ ನೆರವು ನೀಡ­ಲಿದ್ದಾರೆ ಎಂದು ಅವರು ಹೇಳಿದ್ದಾರೆ.ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮೇಲೆ ಬಂಡು­ಕೋ­ರರು ದಾಳಿ ನಡೆಸಿ ಇಬ್ಬರು ಭಾರ-ತೀಯ ಯೋಧರು ಸೇರಿದಂತೆ ೨೨ ಮಂದಿ­ಯನ್ನು ಹತ್ಯೆ ಮಾಡಿ­ರುವುದನ್ನು ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)