ಸೋಮವಾರ, ಏಪ್ರಿಲ್ 19, 2021
23 °C

ದಯವಿಟ್ಟು ಮಾಹಿತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ತಹಸೀಲ್ದಾರ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ಕೆಲಸದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಉದಾಸೀನ ಮನೋಭಾವದಿಂದ ಕೆಲಸ ಮಾಡುತ್ತಾರೆ. ಸಂಧ್ಯಾ ಸುರಕ್ಷಾ ಯೋಜನೆಯ ಅಡಿಯಲ್ಲಿ ಮಾಸಾಶನವನ್ನು ಪಡೆಯುತ್ತಿದ್ದ ವೃದ್ಧರಿಗೆ ಈ ಮಾಸಾಶನ ನಿಲ್ಲಿಸಿರುವ ಮಾಹಿತಿಯೇ ಇಲ್ಲ.  ಕಾರಣ ಸರ್ಕಾರದ ಈ ದಿಢೀರ್ ನಿರ್ಧಾರದ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಆಗಿ ನಿಲ್ಲಿಸಿದ್ದೇಕೆ ಎಂದು ಯಾರಿಗೂ ತಿಳಿದಿಲ್ಲ.ಆದರೆ ಕೈಗೆ ತಿಂಗಳಿಗೆ ಸ್ವಲ್ಪವಾದರೂ ಹಣ ಸಿಕ್ಕಿ ನೆಮ್ಮದಿಯಿಂದ ಇದ್ದವರಿಗೆ ಈಗ ಅದೂ ಕೂಡಾ ನಿಂತು ಹೋಗಿದೆ. ಅದನ್ನು ವಿಚಾರಿಸಲು ತಹಸೀಲ್ದಾರ್ ಆಫೀಸಿಗೆ ಹೋಗಿ ವಿಚಾರಿಸಿದರೆ ಅಲ್ಲಿ ಸಿಗುವ ಉತ್ತರ ಏನೂ ಗೊತ್ತಿಲ್ಲ. ಕೆಳಗಡೆಗೆ ಹೋಗಿ ಎಂದು ಅಲ್ಲಿಗೆ ಹೋದರೆ ನಮಗೇನೂ ಗೊತ್ತಿಲ್ಲ. ಮೂರನೇ ಮಹಡಿಯಲ್ಲಿ  ವಿಚಾರಿಸಿ ಎಂಬ ಸಿದ್ಧ ಉತ್ತರಗಳನ್ನು ಕೊಟ್ಟು ಸಾಗಹಾಕುತ್ತಾರೆ.  ಆದರೆ ಈಗ ಅಲ್ಲಿರುವ ಬಹಳ ಮಹಿಳಾ ನೌಕರರು ಸಮರ್ಪಕ ಮಾಹಿತಿಯನ್ನಾದರೂ ನೀಡುವಂತಾಗಲಿ. ಉನ್ನತಾಧಿಕಾರಿಗಳು ಈ ಮಹಿಳಾ ನೌಕರರಿಗೆ ಸರಿಯಾಗಿ ನಿರ್ದೇಶನ ನೀಡಲು ವಿನಂತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.