ಕೋಲಾರ: ಜಿಲ್ಲೆಯ ದರ್ವೇಶ್ ಜನಾಂಗದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ದರ್ವೇಶ್ ಅಭಿವೃದ್ಧಿ ಸಂಘದ ಸದಸ್ಯರು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಸುಮಾರು 5 ಸಾವಿರದಷ್ಟಿರುವ ದರ್ವೇಶ್ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಸೌಕರ್ಯ ಕಲ್ಪಿಸುವಲ್ಲಿ ವಿಶೇಷ ಯೋಜನೆ ರೂಪಿಸಬೇಕು. ಕಲಾವಿದರಿಗೆ ನೀಡುವ ಸ್ಥಾನಮಾನವನ್ನೇ ದರ್ವೇಶ್ ಸಮುದಾಯದ `ಸಮಾ' ಗಾಯಕರಿಗೆ ಮತ್ತು `ದಫ್' ನುಡಿಸುವವರಿಗೆ ನೀಡಬೇಕು. ಮಾಸಾಶನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ದರ್ಗಾಗಳ ನಿರ್ವಹಣೆಗೆ ಸರ್ಕಾರ ನೀಡುತ್ತಿರುವ ಚಿರಾಗ್ ಬತ್ತಿ ವೆಚ್ಚವನ್ನು 1 ಸಾವಿರ ರೂಪಾಯಿಗೆ ಏರಿಸಬೇಕು. ಇತರೆ ಪರಿಶಿಷ್ಟ ಪಂಗಡಗಳಿಗೆ ನೀಡುವ ರೀತಿಯಲ್ಲೇ ವಸತಿ, ಸಮುದಾಯ ಭವನ ಸೌಲಭ್ಯ ಕಲ್ಪಿಸಬೇಕು. ಜೀವನೋಪಾಯಕ್ಕೆ ಬೇಕಾದ ಹಾರ್ಮೊನಿಯಂ, ತಬಲ, ಶಹನಾಯಿ, ಢೋಲಕ್, ದಫ್ ವಾದ್ಯಗಳನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.

ಬೆಳ್ಳಿ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ಪ್ರವರ್ಗ 1ರ ದರ್ವೇಶ್ ಸಮುದಾಯಕ್ಕೆ ಶೌಚಾಲಯ, ರಸ್ತೆ, ಚರಂಡಿ, ದಾರಿದೀಪ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ದರ್ಗಾ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆ, ಬೋಧನೆ ಮಾಡುತ್ತಾ, ಶಾಂತಿ, ಸೌಹಾರ್ದ ಬಾಳ್ವೆಯ ಬಗ್ಗೆ ಮುಸ್ಲಿಂರಲ್ಲಿ ಜಾಗೃತಿ ಮೂಡಿಸುತ್ತಿರುವ ದರ್ವೇಶ್ಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯೂ ಅವರಿಗಿಲ್ಲ ಎಂದು ಹೇಳಿದರು.

ಸಂಘದ ಪ್ರಮುಖರಾದ ಸೈಯದ್ ಆರೀಫುಲ್ಲಾ ಷಾ ನಸೀರಿ, ಅನಿಸ್ಪಾಷಾ, ಫಕ್ರುದ್ದೀನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.