ದರ್ಶನ್‌ಗೆ ಬುದ್ಧಿಮಾತು

7

ದರ್ಶನ್‌ಗೆ ಬುದ್ಧಿಮಾತು

Published:
Updated:

ಬೆಂಗಳೂರು: `ಪತ್ನಿ ಮೇಲೆ ಗಂಭೀರ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದಿರುವ ಮಾತ್ರಕ್ಕೆ  ಆಪಾದನೆಯಿಂದ ಮುಕ್ತವಾದಂತೆ ಅಲ್ಲ. ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಇನ್ನೂ ಮುಗಿದಿಲ್ಲ, ತನಿಖೆಯೂ ಪ್ರಗತಿಯಲ್ಲಿದೆ~ ಎಂದು ಚಿತ್ರನಟ ದರ್ಶನ್ ಅವರಿಗೆ ಹೈಕೋರ್ಟ್ ಗುರುವಾರ ಎಚ್ಚರಿಸಿದೆ.`ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಪತ್ನಿ ಅಥವಾ ಅವರ ಸಂಬಂಧಿಗಳಿಗೆ ಬೆದರಿಕೆ ಹಾಕುವ ಯತ್ನ ಮಾಡಬಾರದು, ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನಿಸಬಾರದು, ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಸಂಸಾರವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು~ ಎಂದೂ ನ್ಯಾಯಮೂರ್ತಿ ಬಿ.ವಿ.ಪಿಂಟೊ ಅವರು ದರ್ಶನ್‌ಗೆ ಬುದ್ಧಿಮಾತು ಹೇಳುವ ಮೂಲಕ ಷರತ್ತು ವಿಧಿಸಿದ್ದಾರೆ.ನ್ಯಾ. ಪಿಂಟೊ ಅವರ ಕೊಠಡಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ದಂಪತಿಯ ವಿಚಾರಣೆಯನ್ನು ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry