ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಫ್ಲ್ಯಾಟ್ಗಳ ದರ ಪರಿಷ್ಕರಣೆ ಮಾಡಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. 4,228 ಫ್ಲ್ಯಾಟ್ಗಳಿಗೆ ಅರ್ಜಿ ಆಹ್ವಾನಿಸಿರುವ ಬಿಡಿಎ ಕಳೆದ ವರ್ಷಕ್ಕಿಂತ ಈ ವರ್ಷ ದರ ಹೆಚ್ಚಳ ಮಾಡಿದೆ.
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಮೂರು ಸಾವಿರ ಮನೆಗಳಿಗೆ ಅರ್ಜಿ ಆಹ್ವಾನಿಸಿದ್ದ ಬಿಡಿಎ ಒಂದು ಕೊಠಡಿಯ ಫ್ಲ್ಯಾಟ್ಗೆ ₨ 11 ಲಕ್ಷ, ಎರಡು ಕೊಠಡಿಯ ಫ್ಲ್ಯಾಟ್ಗೆ ₨ 17 ಲಕ್ಷ ಮತ್ತು ಮೂರು ಕೊಠಡಿಯ ಫ್ಲ್ಯಾಟ್ಗೆ ₨ 27 ಲಕ್ಷ ದರ ನಿಗದಿಪಡಿಸಿತ್ತು. ಆದರೆ, ಈ ವರ್ಷ ಒಂದು ಕೊಠಡಿ ಫ್ಲ್ಯಾಟ್ಗೆ ₨ 12 ಲಕ್ಷ, ಎರಡು ಕೊಠಡಿ ಫ್ಲ್ಯಾಟ್ಗೆ 25 ಲಕ್ಷ ಮತ್ತು ಮೂರು ಕೊಠಡಿ ಫ್ಲ್ಯಾಟ್ಗೆ ₨ 35 ಲಕ್ಷ ದರ ನಿಗದಿ ಮಾಡಿದೆ.

‘2011ರ ಅಕ್ಟೋಬರ್ 12ರಲ್ಲಿ ಅಧಿಸೂಚನೆ ಹೊರಡಿಸಿದ್ದ ಬಿಡಿಎ ಒಂದು ಕೊಠಡಿಯ ಫ್ಲ್ಯಾಟ್ಗೆ ₨ 5 ಲಕ್ಷ, ಎರಡು ಕೊಠಡಿಯ ಫ್ಲ್ಯಾಟ್ಗೆ ₨ 7.5 ಲಕ್ಷ ಹಾಗೂ ಮೂರು ಕೊಠಡಿಯ ಫ್ಲ್ಯಾಟ್ಗೆ ₨ 13 ಲಕ್ಷ ದರ ನಿಗದಿಗೊಳಿಸಿತ್ತು. ಆದರೆ, ಫ್ಲ್ಯಾಟ್ಗಳು ನಿರ್ಮಾಣಗೊಂಡು ಹಂಚಿಕೆಯ ಹಂತಕ್ಕೆ ಬಂದಾಗ ಫ್ಲ್ಯಾಟ್ಗಳ ದರವನ್ನು ಹೆಚ್ಚಳ ಮಾಡಲಾಗಿತ್ತು. ಈಗ ಆರಂಭದ ಹಂತದಲ್ಲೇ ಬಿಡಿಎ ದರ ಹೆಚ್ಚಳ ಮಾಡಿ ಮಧ್ಯಮ ವರ್ಗದ ಜನರಿಗೆ ಆಘಾತ ನೀಡಿದೆ’ ಎಂದು ಫ್ಲ್ಯಾಟ್ ಆಕಾಂಕ್ಷಿ ರಾಜಗೋಪಾಲ್ ದೂರಿದರು.

‘ಹಿಂದೆ ನಿರ್ಮಾಣ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಫ್ಲ್ಯಾಟ್ಗಳ ದರ ನಿಗದಿ ಮಾಡಲಾಗಿತ್ತು ಎಂದು ಬಿಡಿಎ ಹೇಳುತ್ತಿದೆ. ಆದರೆ, ಅವೈಜ್ಞಾನಿಕವಾಗಿ ದರ ನಿಗದಿ ಮಾಡುವ ಬಿಡಿಎ ಕ್ರಮ ಎಷ್ಟು ಸರಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಡಿಎ ಈ ರೀತಿ ಅವೈಜ್ಞಾನಿಕವಾಗಿ ವರ್ತಿಸುವುದು ಸರಿಯಲ್ಲ. ಮಧ್ಯಮ ವರ್ಗದ ಜನರು ಕೊಳ್ಳಲು ಸಾಧ್ಯವಾಗುವಂತೆ ಫ್ಲ್ಯಾಟ್ಗಳ ದರ ಇಳಿಕೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ಫ್ಲ್ಯಾಟ್ಗಳ ನಿರ್ಮಾಣ ವೆಚ್ಚ ಹಾಗೂ ಯೋಜನೆಯ ನಿರ್ವಹಣಾ ವೆಚ್ಚಕ್ಕೆ ಅನುಗುಣವಾಗಿ ಫ್ಲ್ಯಾಟ್ಗಳ ದರ ನಿಗದಿಪಡಿಸಲಾಗಿದೆ. ಮಧ್ಯಮ ವರ್ಗದ ಜನರಿಗೆ ಹೊರೆಯಾ ಗುವಂಥ ದರ ನಿಗದಿ ಮಾಡುವುದು ಪ್ರಾಧಿಕಾರದ ಉದ್ದೇಶವಲ್ಲ. ಲಾಭದ ಉದ್ದೇಶಕ್ಕಾಗಿ ಬಿಡಿಎ ಫ್ಲ್ಯಾಟ್ಗಳನ್ನು ನಿರ್ಮಿಸುತ್ತಿಲ್ಲ’ ಎಂದು ಬಿಡಿಎ ಹಣಕಾಸು ಸದಸ್ಯ ಬಿ.ಗಂಗಣ್ಣ ತಿಳಿಸಿದರು.

‘ಹಿಂದೆ ಜೆಎನ್– ನರ್ಮ್ ಯೋಜನೆಯಡಿ ಫ್ಲ್ಯಾಟ್ಗಳ ನಿರ್ಮಾಣಕ್ಕೆ ಆರ್ಥಿಕ ನೆರವು ದೊರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ನರ್ಮ್ನಿಂದ ಆರ್ಥಿಕ ನೆರವು ದೊರೆಯಲಿಲ್ಲ. ಹೀಗಾಗಿ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು. ಈ ವರ್ಷವೂ ನಿರ್ಮಾಣ ವೆಚ್ಚಕ್ಕೆ ಅನುಗುಣವಾಗಿ ದರ ನಿಗದಿಗೊಳಿಸಲಾಗಿದೆ’ ಎಂದು ಅವರು ಹೇಳಿದರು.

ಮಧ್ಯಮ ವರ್ಗದ ಬಗ್ಗೆ ಗಮನವಿರಲಿ
ಲಾಭದ ಉದ್ದೇಶವಿಲ್ಲದೆ ಫ್ಲ್ಯಾಟ್ಗಳನ್ನು ನಿರ್ಮಿಸುತ್ತಿರುವುದಾಗಿ ಹೇಳುವ ಬಿಡಿಎ ಮಧ್ಯಮ ವರ್ಗದ ಜನರ ಬಗ್ಗೆಯೂ ಗಮನ ನೀಡಬೇಕು. ಮಧ್ಯಮ ವರ್ಗದ ಜನ

ಫ್ಲ್ಯಾಟ್ ಕೊಳ್ಳಲು ಸಾಧ್ಯವಾಗುವಂಥ ದರ ನಿಗದಿಗೊಳಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು.
– ಮೋಹನ್, ಫ್ಲ್ಯಾಟ್ ಆಕಾಂಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.