ಹುಬ್ಬಳ್ಳಿ: ದೇಶದ ಆಹಾರ ಕೊರತೆ ನಿವಾರಣೆಗೆ ಹಸಿರು ಕ್ರಾಂತಿಯ ಮಂತ್ರ ಹೇಳಿಕೊಟ್ಟು ಜಾಗತಿಕ ಮಟ್ಟದಲ್ಲಿ ದೇಶದ ಸ್ವಾವಲಂಬನೆಯ ಎತ್ತಿ ಹಿಡಿದ ಹರಿಕಾರ ಡಾ.ಬಾಬು ಜಗಜೀವನರಾಮ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಬಣ್ಣಿಸಿದರು.

ಮಾಜಿ ಉಪಪ್ರಧಾನ ಮಂತ್ರಿ ಹಾಗೂ ದಲಿತ ನೇತಾರ ಡಾ.ಬಾಬು ಜಗಜೀವನರಾಮ್ ಅವರ 105ನೇ ಜನ್ಮೋತ್ಸವದ ಅಂಗವಾಗಿ ಇಂದಿರಾ ಗಾಜಿನ ಮನೆ ಆವರಣದಲ್ಲಿ ಗುರುವಾರ ಜಗಜೀವನರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಶಾಸಕ ವೀರಭದ್ರಪ್ಪ ಹಾಲಹರವಿ, ಶಿಕ್ಷಣದಿಂದ ಮಾತ್ರ ದಲಿತರ ಉದ್ಧಾರ ಸಾಧ್ಯ ಎಂಬುದನ್ನು ಜಗಜೀವನರಾಮ್ ತೋರಿಸಿಕೊಟ್ಟಿದ್ದಾರೆ ಎಂದರು.

ರಾಜ್ಯದ ಎರಡನೇ ದೊಡ್ಡ ನಗರವಾದ ಹುಬ್ಬಳ್ಳಿಯಲ್ಲಿ ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ ಸರ್ಕಾರ 4.5 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದಕ್ಕಾಗಿ ಪಡದಯ್ಯನ ಹಕ್ಕಲು ಬಳಿ 1 ಎಕರೆ ಜಾಗ ಗುರ್ತಿಸಲಾಗಿದೆ. ಆ ನಿಟ್ಟಿನಲ್ಲಿ ಶ್ರಮಿಸಿದ ಸಚಿವ ಜಗದೀಶ ಶೆಟ್ಟರ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರಿಗೆ ದಲಿತ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ದೇಶ ಕಂಡ ಮುತ್ಸದ್ಧಿ ಜಗಜೀವನರಾಮ್ ಬಡತನ ಮತ್ತು ಸಾಮಾಜಿಕವಾಗಿ ಕಷ್ಟಕರ ಪರಿಸ್ಥಿತಿಯಲ್ಲಿದ್ದರೂ ತಾನೂ ಬೆಳೆದು ತನ್ನ ಜನಾಂಗವನ್ನು ಮೇಲೆತ್ತಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಪ್ರಧಾನಿಯಾಗಬೇಕಾಗಿತ್ತು ಕಾರಣಾಂತರಗಳಿಂದ ಆ ಪಟ್ಟ ತಪ್ಪಿತು ಎಂದರು.

ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಸ್ವಾಭಿಮಾನ ಹಾಗೂ ಪರಿಶ್ರಮದ ಸಂಕೇತ ಜಗಜೀವನರಾಮ್ ಎಂದು ಬಣ್ಣಿಸಿದರು.

ಹುಟ್ಟಿನ ಆಧಾರದ ಮೇಲೆ ಮೇಲು-ಕೀಳು ತೊರೆದು ಅವಕಾಶ ದೊರೆತರೆ ದೊಡ್ಡ ನಾಯಕರಾಗಿ ಬೆಳೆಯಬಹುದು ಎಂಬುದನ್ನು ಜಗಜೀವನರಾಮ್ ಹಾಗೂ ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಕೇವಲ ಭಾಷಣದ ಮೂಲಕ ಜಗಜೀವನರಾಮ್ ಅವರ ತತ್ವಾದರ್ಶಗಳನ್ನು ಪಾಲಿಸಲು ಸಾಧ್ಯವಿಲ್ಲ. ಅವುಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಸಮಾರಂಭದಲ್ಲಿ ಮೇಯರ್ ಪಾಂಡುರಂಗ ಪಾಟೀಲ, ಉಪಮೇಯರ್ ಭಾರತಿ ಪಾಟೀಲ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಗಣೇಶ ಟಗರಗುಂಟಿ. ಪಾಲಿಕೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಮತ್ತಿತರರು ಉಪಸ್ಥಿತರಿದ್ದರು.

`ಪ್ರತಿಮೆ ಸ್ಥಾಪನೆಗೆ ಪ್ರಯತ್ನ~
ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಬಾಬು ಜಗಜೀವನರಾಮ್ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ, ಬಾಬು ಜಗಜೀವನ ರಾಮ್ ಪ್ರತಿಮೆ ಸ್ಥಾಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸಮಾರಂಭ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಶಾಸಕ ಚಂದ್ರಕಾಂತ ಬೆಲ್ಲದ, ರಕ್ಷಣೆ ಹಾಗೂ ಕೃಷಿ ಕ್ಷೇತ್ರದಲ್ಲಿ ಡಾ. ಬಾಬು ಜಗಜೀವನರಾಮ್ ದೇಶಕ್ಕೆ ನೀಡಿದ ಕೊಡುಗೆ ದೊಡ್ಡದು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ನಿಜಲಿಂಗಪ್ಪ ಮಟ್ಟಿಹಾಳ ಉಪನ್ಯಾಸ ನೀಡಿದರು.
ಎಚ್.ವೈ. ವೀರಾಪೂರ ಮಾತನಾಡಿದರು. ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಸರ್ಕಾರ ಸಮಾರಂಭಕ್ಕೆ ಸವಲತ್ತು ಒದಗಿಸಿರುತ್ತದೆ. ಆದರೆ ಸಮುದಾಯದವರು, ಸಾರ್ವಜನಿಕರು ಪಾಲ್ಗೊಳ್ಳದೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಕಲಾವಿದ ಸಿದ್ದಪ್ಪ ಬಿದರಳ್ಳಿ, ಸಮಾಜ ಸೇವಕ ಹನುಮಂತ ಮಾಲಪಲ್ಲಿ, ನಾಗರಾಜ ಸಗಬಾಲ, ಕಲ್ಮೇಶ ಹಾದಿಮನಿ, ಶಿಕ್ಷಣ ಕ್ಷೇತ್ರದಲ್ಲಿ ಬಿ.ಸಿ.ಮಠಪತಿ, ಅನಸೂಯಾ ಬೊಮ್ಮಯ್ಯನವರ, ಸುಭಾಷ ನೀರಲಕೇರಿ, ಗಂಗಪ್ಪ ಹೆಗಡೆ ಹಾಗೂ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಪಡೆದ ಪೂರ್ಣಿಮಾ ಮೇಲಿನಮನಿ ಅವರನ್ನು ಸನ್ಮಾನಿಸಲಾಯಿತು.

ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟವೆ, ಜಿಪಂ ಅಧ್ಯಕ್ಷ ಅಡಿವೆಪ್ಪ ಮನಮಿ, ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ಸಾವುಕಾರ, ಉಪಮೇಯರ್ ಭಾರತಿ ಪಾಟೀಲ, ಜಿಲ್ಲಾಧಿಕಾರಿ ದರ್ಪಣ ಜೈನ್, ಪೊಲೀಸ್ ಆಯುಕ್ತ ಡಾ. ಕೆ.ರಾಮಚಂದ್ರರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವೇದಿಕೆಯಲ್ಲಿದ್ದರು.

ಯಲ್ಲಪ್ಪ ಮಾಳಗಿ ಪ್ರಾರ್ಥಿಸಿದರು. ಎಸ್.ಎ.ಮುಲ್ಲಾ ಸ್ವಾಗಸಿದರು. ಮೋಹನ ನಾಗಮ್ಮನವರ ವಂದಿಸಿದರು. ಸಂಗಮೇಶ ಮಾದರ ನಿರೂಪಿಸಿದರು.

ವೆುರವಣಿಗೆ:
ಜನ್ಮದಿನಾಚರಣೆ ಅಂಗವಾಗಿ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಶಾಸಕ ಚಂದ್ರಕಾಂತ ಬೆಲ್ಲದ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಡಿವೆಪ್ಪ ಮನಮಿ, ಜಿಲ್ಲಾಧಿಕಾರಿ ದರ್ಪಣ ಜೈನ್, ಜಿಪಂ ಸದಸ್ಯೆ ಪ್ರೇಮಾ ಕೊಮಾರದೇಸಾಯಿ ಡಾ. ಜಗಜೀವನರಾಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಜಗ್ಗಲಗಿ, ಡೊಳ್ಳು ಕುಣಿತ, ಹೆಜ್ಜೆ ಮೇಳ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

`ವೀರಣ್ಣ ನಮ್ಮ ಕಡೆ ಬನ್ನಿ~

ಪಾಲಿಕೆ ಕಾರ್ಯಕ್ರಮಕ್ಕೆ ಮುನ್ನವೇ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಜಗಜೀವನರಾಮ್ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು. ನಂತರ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಆಗಮಿಸಿದ ಬಿಜೆಪಿ ಮುಖಂಡರು ಮಾಲಾರ್ಪಣೆ ಮಾಡಿದರು.

ನಂತರ ಶೆಟ್ಟರ್ ಮಾತನಾಡಲು ಆರಂಭಿಸುತ್ತಿದ್ದಂತೆಯೇ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ ಆಗಮಿಸಿದರು.

ಮತ್ತಿಕಟ್ಟಿ ಆವರನ್ನು ನೋಡುತ್ತಿದ್ದಂತೆಯೇ ಶೆಟ್ಟರ `ಬನ್ನಿ ಬನ್ನಿ ಮತ್ತಿಕಟ್ಟಿ ಸಾಹೇಬ್ರೆ, ನಿಮ್ಮವರು ಮಾಲಾರ್ಪಣೆ ಮಾಡಿ ತೆರಳಿದ್ದಾರೆ. ಇನ್ನು ನೀವು ನಮ್ಮ ಕಡೆಗೆ ಬನ್ನಿ~ ಎಂದು ಚಟಾಕಿ ಹಾರಿಸಿದರು. ಶೆಟ್ಟರ ಮಾತಿಗೆ ಪ್ರತಿಕ್ರಿಯಿಸಿದ ಮತ್ತಿಕಟ್ಟಿ, `ನಾನು ಬರಲು ನೀವು ಒಪ್ಪಿದರೂ, ನಿಮ್ಮ ಹೈಕಮಾಂಡ್ ಒಪ್ಪುವುದಿಲ್ಲ~ ಎಂದು ಪಕ್ಕದಲ್ಲಿ ನಿಂತಿದ್ದ ಸಂಸದ ಪ್ರಹ್ಲಾದ ಜೋಶಿ ಆವರತ್ತ ಕೈ ತೋರಿಸಿದ್ದು ಕ್ಷಣ ಕಾಲ ನಗೆಯ ಅಲೆಗೆ ಕಾರಣವಾಯಿತು. `ನೀವು ಮಾಧ್ಯಮದವರು ಬರೀ ಆಡಳಿತ ಪಕ್ಷದವರ ಫೊಟೋ ಮಾತ್ರ ಹಾಕುತ್ತೀರಿ, ಸಚಿವರ ಜೊತೆಗಿರುವೆ ನಾಳೆ ನನ್ನದೂ ಚಿತ್ರ ಹಾಕಿ~ ಎಂದು ವೀರಣ್ಣ ಮತ್ತಿಕಟ್ಟಿ ಕಿಚಾಯಿಸಿದರು.

ಅದಕ್ಕೆ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿ `ಫೋಟೊ ಹಾಕಿ, ವೀರಣ್ಣ ಮತ್ತಿಕಟ್ಟಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ~ ಎಂದು ಕೆಳಗೆ ಬರೆಯಿರಿ ಎಂದಾಗ ಮತ್ತೊಮ್ಮೆ ನಗೆಗೆ ಕಾರಣವಾಯಿತು.

ಸಮಾರಂಭಕ್ಕೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಆಗಮಿಸುತ್ತಿದ್ದಂತೆಯೇ `ಇದು ಪಕ್ಷಾತೀತ ಕಾರ್ಯಕ್ರಮವಾಯಿತು. ನಾಳೆ ಎಲ್ಲರೂ ಇರುವ ಚಿತ್ರ ಹಾಕಿ~ ಎಂದು ಶೆಟ್ಟರ ಮಾಧ್ಯಮದವರಿಗೆ ತಮಾಷೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.