ಶನಿವಾರ, ಮೇ 8, 2021
27 °C

ದವನಂ- ಡಿವೈನ್ ಸಾಲಿಟೇರ್ ದವನಂ- ಡಿವೈನ್ ಸಾಲಿಟೇರ್ ಒಪ್ಪಂದ: ವಿಶೇಷ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಪ್ರಸಿದ್ಧ ಆಭರಣ ಮಳಿಗೆಗಳಲ್ಲಿ ಒಂದಾದ `ದವನಂ ಜ್ಯುವೆಲರ್ಸ್‌' ಜೂನ್ 5ರಿಂದ 12ರವರೆಗೆ ಒಂಟಿ ಹರಳಿನ ವಜ್ರಾಭರಣ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿದೆ. ದೇಶದ ಪ್ರಥಮ ಒಂಟಿ ಹರಳಿನ ಆಭರಣ ತಯಾರಿಕಾ ಸಂಸ್ಥೆ ಡಿವೈನ್ ಸಾಲಿಟೇರ್ ಜತೆ ಮಾಡಿಕೊಂಡ ಒಪ್ಪಂದದ ಅನ್ವಯ ದವನಂ ತನ್ನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಮಳಿಗೆಯಲ್ಲಿ ಈ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಿದೆ.ಪ್ರದರ್ಶನದ ಕಾಲಾವಧಿಯಲ್ಲಿ ಗ್ರಾಹಕರಿಗೆ ಒಂದು ಕೊಂಡರೆ ಎರಡು ಎಂಬ ಕೊಡುಗೆಯ ಜತೆಗೆ ಮೂರು ಹಾಗೂ ಆರು ತಿಂಗಳ ಅವಧಿಯ ಬಡ್ಡಿರಹಿತ ಮಾಸಿಕ ಕಂತುಗಳಲ್ಲಿ ಪಾವತಿಸಬಹುದಾದ ಯೋಜನೆಯಡಿ ಆಭರಣ ಖರೀದಿಗೆ ಅವಕಾಶ, ಒಂಟಿ ಹರಳಿನ ಆಭರಣ ಖರೀದಿಸಿದ ಗ್ರಾಹಕರಿಗೆ ದವನಂ ಸರೋವರ ಪೋರ್ಟಿಕೊ ಸ್ಯೂಟ್‌ನಲ್ಲಿ ಕಾಕ್‌ಟೇಲ್ ಡಿನ್ನರ್ ಸವಿಯುವ ಅವಕಾಶವಿದೆ. ಜತೆಗೆ ಈ ಅವಧಿಯಲ್ಲಿ ಪ್ರತಿ ದಿನವೂ ಅದೃಷ್ಟಶಾಲಿ ವಿಜೇತರು ಡಿವೈನ್ ಸಾಲಿಟೇರ್ ಉಚಿತವಾಗಿ ಪಡೆಯಲಿದ್ದಾರೆ.`ಪ್ರತಿಯೊಂದು ವಯೋಮಾನವದವರ ಮನಕ್ಕೊಪ್ಪುವ ಒಂಟಿ ಹರಳಿನ ಆಭರಣಗಳನ್ನು ಪರಿಚಯಿಸುತ್ತಿರುವ ದವನಂ ಹಾಗೂ ಡಿವೈನ್ ಸಾಲಿಟೇರ್‌ನಲ್ಲಿರುವ ಪ್ರತಿಯೊಂದು ಹರಳೂ ಸಹ ಲೇಸರ್‌ನಿಂದ ರೂಪುಗೊಂಡಿದ್ದು, ಪೂರ್ವನಿಯೋಜಿತ ವಿಮೆಗೆ ಒಳಪಟ್ಟಿರುತ್ತದೆ. ಜತೆಗೆ ಒಮ್ಮೆ ಖರೀದಿಸುವ ಡಿವೈನ್ ಸಾಲಿಟೇರ್ಸ್‌ನ ವಜ್ರವು ಶಾಶ್ವತ ಅಪ್‌ಗ್ರೇಡ್ ಹಾಗೂ ಹಿಂಪಡೆಯುವ ಯೋಜನೆಗೆ ಒಳಪಡುತ್ತದೆ' ಎಂದು ದವನಂ ಜ್ಯುವೆಲರ್ಸ್‌ನ ನಿರ್ದೇಶಕ ಡಿ.ವಿ. ಹರೀಶ್ ತಿಳಿಸಿದರು.`ಇಂದು ಆಭರಣಗಳ ಕುರಿತು ಸಾಕಷ್ಟು ತಿಳಿದುಕೊಂಡಿರುವ ಗ್ರಾಹಕರು ಚಿನ್ನದ ಹೊರತಾಗಿ ವಜ್ರಗಳು, ಪ್ಲಾಟಿನಂ ಮುಂತಾದ ಆಭರಣಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಪ್ರದರ್ಶನ ಮೇಳಗಳು ಆಭರಣಪ್ರಿಯರಿಗೆ ತಮ್ಮ ಮೆಚ್ಚುಗೆಯ ಆಭರಣ ಖರೀದಿಸಲು ಅನುಕೂಲ ಮಾಡಿಕೊಡಲಿದೆ' ಎಂದು ಪ್ರದರ್ಶನ ಆರಂಭದ ವೇಳೆ ಹಾಜರಿದ್ದ ನಟಿ ಪ್ರಿಯಾಂಕಾ ಉಪೇಂದ್ರ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.