ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಗರಣದಲ್ಲಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಭಾಗಿಯಾಗಿದ್ದೆಂಬ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ತಾವು ಸಿಬಿಐಗೆ ಸಲ್ಲಿಸಿದ್ದ ಎಲ್ಲಾ ಮನವಿ, ಅರ್ಜಿಗಳನ್ನು ಕೋರ್ಟ್ಗೆ ಒದಗಿಸುವಂತೆ ಸುಪ್ರಿಂಕೋರ್ಟ್ ಗುರುವಾರ ಜನತಾ ಪಕ್ಷದ ಸುಬ್ರಮಣಿಯನ್ ಸ್ವಾಮಿ ಅವರಿಗೆ ಹೇಳಿದೆ

ಮೊದಲು ಈ ದಾಖಲೆಗಳನ್ನು ಪರಿಶೀಲಿಸಿ ಅಗತ್ಯವಾದಲ್ಲಿ ಸಿಬಿಐನಿಂದ ಮತ್ತು ಸರ್ಕಾರದಿಂದ ಪ್ರತಿಕ್ರಿಯೆ ಕೇಳಲಾಗುವುದು ಎಂದು ಕೋರ್ಟ್ ತಿಳಿಸಿದೆ.`ಸಿಬಿಐಗೆ ನೀವು ಸಲ್ಲಿಸಿದ ಮನವಿಗಳ ಬಗ್ಗೆ ದಾಖಲೆಗಳನ್ನು ಒದಗಿಸಿ~ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನು ಒಳಗೊಂಡ ಪೀಠ ಹೇಳಿದೆ. ಅಲ್ಲದೆ ಅಗತ್ಯ ದಾಖಲೆಗಳೊಂದಿಗೆ ವಾರದೊಳಗೆ ಪ್ರಮಾಣಪತ್ರ ಸಲ್ಲಿಸುವಂತೆಯೂ ಸೂಚಿಸಿದೆ.

ಆದರೆ ಸರ್ಕಾರ, ಸ್ವಾಮಿಯವರ ಮನವಿ ವಿರೋಧಿಸಿ ಅವರು ಯಾವುದೇ ಪುರಾವೆ ಹೊಂದಿದ್ದರೆ ಅದನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮುಂದೆ ಹಾಜರುಪಡಿಸಲಿ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.