ಮಂಗಳವಾರ, ಜನವರಿ 21, 2020
28 °C

ದಾಸರಹಳ್ಳಿ ಸ್ಪಂದನಾ ಸೇವಾ ಟ್ರಸ್ಟ್ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: ಸ್ಪಂದನಾ ಸೇವಾ ಟ್ರಸ್ಟ್‌ ಸಮಾಜ ಮುಖಿಯಾದ ಯೋಜನೆಗಳನ್ನು ರೂಪಿಸಿಕೊಂಡು ಮುಂದೆ ಸಾಗಲಿ ಎಂದು ಶಾಸಕ ಆರ್‌.ಅಶೋಕ ಆಶಿಸಿದರು.ದಾಸರಹಳ್ಳಿಯ ಮಲ್ಲಸಂದ್ರ ಪೈಪ್‌ಲೈನ್‌ ರಸ್ತೆಯ ಸ್ಪಂದನಾ ಸೇವಾ ಟ್ರಸ್ಟ್‌ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗೆ ಬ್ಯೂಟಿಷಿಯನ್‌, ತರಬೇತಿ, ಟೈಲರಿಂಗ್‌ ಹಾಗೂ ಕಂಪ್ಯೂಟರ್‌ ತರಬೇತಿ ನೀಡುತ್ತಿರುವುದರಿಂದ ನಿರುದ್ಯೋಗಿಗಳಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.ಶಾಸಕ ಎಸ್‌.ಮುನಿರಾಜು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಅಬ್ಬಿಗೆರೆ ಲೋಕೇಶ್‌, ಮಾಜಿ ಅಧ್ಯಕ್ಷ ಗಂಗರಾಜು, ಪಾಲಿಕೆ ಸದಸ್ಯರಾದ ಶಶಿ ಶಿವಕುಮಾರ್‌, ಪುಟ್ಟಮ್ಮ ತಮ್ಮಣ್ಣ ಟ್ರಸ್ಟ್‌ ಅಧ್ಯಕ್ಷ ಎನ್‌.ಲೋಕೇಶ್‌ ಇತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)