ಶುಕ್ರವಾರ, ಮೇ 14, 2021
21 °C

ದಿಢೀರ್ ಬದಲಾದ ಕಾಮಗಾರಿ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ:  ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಮತ್ತು ಅಂದಾಜು ಪತ್ರಿಕೆ ನಿಯಮಗಳನ್ನು ಉಲ್ಲಂಘಿಸಿ ಪಟ್ಟಣದಿಂದ ಕಂದಕೂರು ನಾಗರಾಳ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಪಡಿಸುತ್ತಿರುವುದಕ್ಕೆ ಕಂದಕೂರು ಗ್ರಾಮಸ್ಥರು ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಕಂದಕೂರಪ್ಪ ವಾಲ್ಮೀಕಿ, ಗ್ರಾ.ಪಂ ಅಧ್ಯಕ್ಷ ಹನುಮೇಶ ಗಾದಾರಿ ಮತ್ತಿತರರು, ಸ್ಥಳದಲ್ಲಿದ್ದ ಯೋಜನೆಯ ಎಂಜಿನಿಯರ್ ಬಿ.ಎ.ಬಿರಾದಾರ ಅವರೊಂದಿಗೆ ವಾದಕ್ಕಿಳಿದರು. `ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಯಲ್ಲಿ ಈ ಮಾದರಿ ಏಕೆ ಅನುಸರಿಸಲಿಲ್ಲ, ನಿಯಮ ದಿಢಿ ೀರ್ ಬದಲಾದದ್ದು ಹೇಗೆ~ ಎಂದು ಪ್ರಶ್ನಿಸಿದರು. ಹಿಂದೆ ಮಾಡಿದ ರಸ್ತೆ ಕಳಪೆಯಾಗಿದ್ದು ಅದನ್ನು ಕಿತ್ತು ಹಾಕಿ ಹೊಸದಾಗಿ ನಿರ್ಮಿಸುವಂತೆಯೂ ಒತ್ತಾಯಿಸಿದರು.ಆದರೆ 2009ರಲ್ಲಿ ಮುಗಿಯಬೇಕಿದ್ದ ಈ ಕಾಮಗಾರಿ ಎರಡು ವರ್ಷ ವಿಳಂಬವಾಗಿದ್ದು ಪೂರ್ಣಗೊಳಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳಿಂದ ಒತ್ತಡವಿದ್ದು ಕೆಲಸ ಪೂರ್ಣಗೊಳಿಸುತ್ತೇವೆ ಎಂದು ಎಂಜಿನಿಯರ್ ಬಿರಾದಾರ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡರು.ಸದರಿ ಕಾಮಗಾರಿಯನ್ನು ಮೂಲ ವ್ಯಕ್ತಿಯ ಬದಲು ಬೇನಾಮಿ ಗುತ್ತಿಗೆದಾರ ನಿರ್ವಹಿಸುತ್ತಿದ್ದಾನೆ. ಈ ಮೊದಲು ಮಾಡಿದ ಕಾಮಗಾರಿಯಲ್ಲಿ 60 ಎಂ.ಎಂ. ಗಾತ್ರದ ಕಲ್ಲುಗಳನ್ನು ಹಾಕಿ ಡಾಂಬರ್ ಮಾಡಲಾಗಿದೆ. ಆದರೆ ಜನ ಪ್ರತಿಭಟನೆ ಮಾಡಿದ ನಂತರ ಎಚ್ಚೆತ್ತು 60 ಎಂ.ಎಂ. ಕಲ್ಲಿನ ಮೇಲೆ 40 ಎಂ.ಎಂ.ಡೌನ್ ಕಂಕರ್‌ಗಳನ್ನು ಹಾಕಿ ಡಾಂಬರ್ ಮಾಡುತ್ತಿರುವುದರಿಂದ ಕೆಲಸ ಉತ್ತಮವಾಗುತ್ತದೆ. ಆದರೆ ಮೊದಲೇ ಈ ರೀತಿ ಏಕೆ ಮಾಡಲಿಲ್ಲ, ಅಂದಾಜು ಪತ್ರಿಕೆಯಲ್ಲಿ ಇರಲಿಲ್ಲವೇ? ಎಂದು ಪ್ರಶ್ನಿಸಿದ ಜನರಿಗೆ ಎಂಜಿನಿಯರ್ ಸ್ಪಷ್ಟ ಉತ್ತರ ನೀಡಲಿಲ್ಲ.ಬೇನಾಮಿ ಗುತ್ತಿಗೆದಾರ ಕಳಪೆ ಕೆಲಸ ನಿರ್ವಹಿಸಿದ್ದಾರೆ, ಗುಣಮಟ್ಟ ಕಳಪೆಯಾಗಿರುವುದಕ್ಕೆ ಈ ಹಿಂದೆ ಪ್ರತಿಭಟನೆ ಮಾಡಿದಾಗ ಭೇಟಿ ನೀಡಿದ್ದ ಅಧಿಕಾರಿಗಳು, ತಜ್ಞರಿಂದ ಪರಿಶೀಲಿಸಲಾಗುತ್ತದೆ. ಕಳಪೆ ಎಂಬುದು ಗೊತ್ತಾದರೆ ಮುಲಾಜಿಲ್ಲದೇ ಹೊಸದಾಗಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೂವರೆಗೂ ಅಂಥ ಪ್ರಯತ್ನ ನಡೆದಿಲ್ಲ. ಆದರೆ ಜನರ ದೂರನ್ನು ಬದಿಗೊತ್ತಿ ಕೆಲಸ ಮುಂದುವರೆಸುತ್ತಿರುವುದರ ಬಗ್ಗೆ ಸರ್ಕಾರಕ್ಕೆ ದೂರು ನೀಡುವುದಾಗಿ ಕಂದಕೂರಪ್ಪ ಹೇಳಿದರು.

ಲಿಂಗಸಗೂರು ಮೂಲದ ಪಾಟೀಲ ಎಂಬ ಗುತ್ತಿಗೆದಾರ ಸದರಿ ಕಾಮಗಾರಿ ಟೆಂಡರ್ ಪಡೆದಿದ್ದರೆ ಕಂದಕೂರು ಮೂಲದ ಬೇನಾಮಿ ಗುತ್ತಿಗೆದಾರ ಕೆಲಸ ನಿರ್ವಹಿಸುತ್ತಿದ್ದಾನೆ. 2009 ನವೆಂಬರ್‌ಗೆ ಕಾಮಗಾರಿ ಪೂರ್ಣಗೊಳ್ಳಬೇಕಿದ್ದರೂ ಇನ್ನೂ ಅರ್ಧದಷ್ಟು ಬಾಕಿ ಉಳಿದಿದೆ.ಅಚ್ಚರಿಯಂದರೆ ಐದು ವರ್ಷಗಳ ನಿರ್ವಹಣೆ ಮಾಡಬೇಕಿದ್ದು ಅದರಲ್ಲೇ ಎರಡು ವರ್ಷಗಳು ಮುಗಿದಿವೆ. ಕಾಮಗಾರಿ ಕಳಪೆಯಾದರೂ ಶಾಸಕರ ಹತ್ತಿರದ ಸಂಬಂಧಿ ಎಂಬ ಕಾರಣಕ್ಕೆ ಪಿಎಂಜಿಸ್‌ವೈ ಎಂಜಿನಿಯರ್‌ರು ಗುತ್ತಿಗೆದಾರನ ಮೇಲೆ ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿಬಂದೆದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.