ಸೋಮವಾರ, ಮೇ 23, 2022
21 °C

ದೀಪಾವಳಿಗೆ ದೀಪಗಳ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಕಾದಲ್ಲಿ...

ದೀಪದಿಂದ ದೀಪ ಹಚ್ಚೆ ದೀಪಾವಳಿ... ಎನ್ನುವ ಹಾಡಿನ ಹಾಗೇ ಭಾರತೀಯ ಸಂಪ್ರದಾಯದಲ್ಲಿ ದೀಪಗಳಿಗೆ ಮಹತ್ವದ ಸ್ಥಾನ, ಅದರಲ್ಲೂ ದೀಪಾವಳಿಯಲ್ಲಿ ದೀಪ, ಹಣತೆಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಬಾರಿ ದೀಪಾವಳಿಗೆ ನಿಮ್ಮ ಮನೆಗೆ ಒಂದು ವಿಶಿಷ್ಟ ವಿನೂತನ ಲುಕ್ ನೀಡಬೇಕಾದರೆ ಒಮ್ಮೆ ‘ಎಕಾ’ಕ್ಕೆ ಹೋಗಬೇಕು.

ವಿವಿಧ ಬಗೆಯ ಮಣ್ಣಿನಿಂದ ತಯಾರಿಸಿರುವ ಹಣತೆಗಳು, ಕುಂದನ್ ದೀಪಗಳು, ವಿವಿಧ ಬಗೆಯ ಕಂಚಿನ ದೀಪಗಳ ಭಂಡಾರವೇ ಇಲ್ಲಿದೆ. ಕಂಚಿನ ಘಂಟೆಗಳು, ಲಕ್ಷ್ಮಿ, ಗಣೇಶ, ಸರಸ್ವತಿ ಸೇರಿದಂತೆ  ವಿವಿಧ ದೇವರ ವಿಗ್ರಹಗಳು, ಇದರೊಂದಿಗೆ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ವಿವಿಧ ವಸ್ತುಗಳು, ಥಾಲಿ ಸೆಟ್, ಮುತ್ತಿನ ಸೆಟ್‌ಗಳು ಕೂಡ ಇಲ್ಲಿ ದೊರೆಯಲಿವೆ.

ಇದರೊಂದಿಗೆ ಮನೆಗೆ ಬೇಕಾದ ವಿವಿಧ ರೀತಿಯ ಅಲಂಕಾರಿಕ ವಸ್ತುಗಳು ದೊರೆಯಲಿವೆ. ದೀಪಗಳು ಹಾಗೂ ವಿವಿಧ ವಸ್ತುಗಳ ವಸ್ತು ಪ್ರದರ್ಶನ ಇದೇ ನವೆಂಬರ್ 4ರಂದು ಮುಕ್ತಾಯವಾಗಲಿದೆ.

ವಿಳಾಸ: ನಂ.19, ಗಂಗಾಧರ್ ಚೆಟ್ಟಿ ರಸ್ತೆ, ಆರ್‌ಬಿಎಎನ್‌ಎಂಎಸ್ ಮೈದಾನದ ಎದುರು. ಬೆಳಿಗ್ಗೆ 10ರಿಂದ ಸಂಜೆ 8. ದೂ: 2554 4371.‘ವರ್ಣ’ದಲ್ಲಿ ಹಣತೆ

ದೀಪಾವಳಿ ಮನೆ ಮಂದಿಯನ್ನು ಬಣ್ಣ ಬಣ್ಣದ ಹೊನಲಿನಲ್ಲಿ ತೇಲಿಸುವ ಸಂಭ್ರಮದ ಹಬ್ಬ. ಯುವಕ ಯುವತಿಯರಿಗೆ ರಂಗುರಂಗಿನ ಬಟ್ಟೆಯಲ್ಲಿ ಮಿಂಚುವ ಸಂಭ್ರಮ ಒಂದೆಡೆಯಾದರೆ ಮಕ್ಕಳಲ್ಲಿ ಬಣ್ಣ ಬಣ್ಣದ ಪಟಾಕಿ ಹಚ್ಚುವ, ಬಗೆ ಬಗೆಯ ಭಕ್ಷ್ಯಭೋಜನಗಳನ್ನು ಸವಿಯುವ ಸಂಭ್ರಮ. ದೀಪಗಳ ಈ ಹಬ್ಬದಲ್ಲಿ ದೀಪ ಖರೀದಿ ಮಾಡದೆ ಇದ್ದರೆ ಹಬ್ಬ ಪೂರ್ಣ ಅನಿಸದು. ಈ ಬಾರಿ ಹಣತೆ ಖರೀದಿಗೆ ಹೊರಟಿದ್ದರೆ ‘ವರ್ಣ’ದಲ್ಲಿ ನಡೆಯುತ್ತಿರುವ ಟೆರ್ರಾಕೋಟಾ ಮತ್ತು ಕರಕುಶಲ ದೀಪಗಳ ಪ್ರದರ್ಶನಕ್ಕೆ ಒಮ್ಮೆ ಭೇಟಿ ಕೊಡಿ.

ದೀಪಾವಳಿಯ ಸಲುವಾಗಿ ವಿವಿಧ ರೀತಿಯ ಅಲಂಕಾರಿಕ ಮಣ್ಣಿನ ವಸ್ತುಗಳು ಮತ್ತು ಭಾರತದ ವಿವಿಧ ರಾಜ್ಯಗಳ ಕಲಾಕಾರರು ತಯಾರಿಸಿದ ವಿವಿಧ ರೀತಿಯ ಬಣ್ಣ, ಬಣ್ಣದ ದೀಪಗಳು, ಪ್ರಾಣಿ ಪಕ್ಷಿಗಳನ್ನು ಒಳಗೊಂಡಿರುವ ವಿವಿಧ ರೀತಿಯ ದೀಪಗಳು, ಕಂಬದ ದೀಪಗಳು, ಗಣೇಶ ಲಕ್ಷ್ಮಿಯರ ದೀಪಗಳ ಬಗೆಬಗೆಯ ಸಂಗ್ರಹವೇ ಇಲ್ಲಿದೆ.

 ಇದರೊಂದಿಗೆ ರಾಜಸ್ತಾನ, ಗುಜರಾತ್, ಕೋಲ್ಕತ್ತ, ಒಡಿಶಾ, ತಮಿಳುನಾಡು, ಆಂಧ್ರ ಮತ್ತು ಕರ್ನಾಟಕದ ಗ್ರಾಮಾಂತರ ಕಲಾವಿದರು ವಿಶಿಷ್ಟವಾಗಿ ತಯಾರಿಸಿರುವ ದೀಪಗಳು ಇಲ್ಲಿನ ಆಕರ್ಷಣೆ.

ಪ್ರದರ್ಶನ ನವೆಂಬರ್ 7ರ ವರೆಗೆ ನಡೆಯಲಿದೆ.

ಸ್ಥಳ: ವರ್ಣ, 9ನೇ ಕ್ರಾಸ್, ಸಂಪಿಗೆ ರಸ್ತೆ (ಗ್ರಂಥಾಲಯ ಹಿಂಭಾಗ) ಮಲ್ಲೇಶ್ವರ. ಬೆಳಿಗ್ಗೆ 10 ರಿಂದ ರಾತ್ರಿ 9.

ಪೂಂಪೂಹಾರ್‌ನಲ್ಲಿ...

ತಮಿಳುನಾಡು ಕರಕುಶಲ ಅಭಿವೃದ್ಧಿ ನಿಗಮದ ಪೂಂಪೂಹಾರ್ ಮಳಿಗೆ ನವೆಂಬರ್ 4ರ ವರೆಗೆ ದೀಪಗಳ ಪ್ರದರ್ಶನ ಮತ್ತು ಮಾರಾಟ ‘ದೀಪೋತ್ಸವ’ ಏರ್ಪಡಿಸಿದೆ.

ಮನಸ್ಸಿಗೆ ಮುದನೀಡುವ ನಯನಾಕರ್ಷಕ ವಿವಿಧ ಬಗೆಯ ಕಂಚು, ಹಿತ್ತಾಳೆಯ ದೀಪಗಳು ಈ ಉತ್ಸವದಲ್ಲಿ ದೊರೆಯುತ್ತಿವೆ.

ಇಲ್ಲಿ ಕಾಲುದೀಪಗಳು, ಗಣೇಶ ಲಕ್ಷ್ಮಿಯರ ದೀಪಗಳು, ಸಾಂಪ್ರದಾಯಿಕ ಅನ್ನಂ ದೀಪ, ತೂಗು ಉಯ್ಯಾಲೆ ದೀಪಗಳು, ನಾಗದೀಪ, ಮಲಬಾರ್ ದೀಪಗಳ ವಿಶಾಲ ಸಂಗ್ರಹ ಇಲ್ಲಿದ್ದು, ಶೇ 10ರಷ್ಟು ರಿಯಾಯ್ತಿ ದರದಲ್ಲಿ ಕೊಳ್ಳಬಹುದು.

ಸ್ಥಳ: ಪೂಂಪೂಹಾರ್, ಬ್ರಿಗೇಡ್ ರಸ್ತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.