ಶನಿವಾರ, ಜನವರಿ 25, 2020
27 °C

ದೀಪ ಜ್ಞಾನದ ಸಂಕೇತ: ಫಕೀರೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ದೀಪವು ಜ್ಞಾನದ ಸಂಕೇತ. ಅಜ್ಞಾನವನ್ನು ಕಳೆಯಲು ನಾವೆಲ್ಲ ಜ್ಞಾನ, ವೈಚಾರಿಕತೆ, ಸಮಾನತೆ ಎಂಬ ದೀಪ ಬೆಳಗಿಸಬೇಕು ಎಂದು ಸೊರಟೂರಿನ ಫಕೀರೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ನಾಗಾವಿ ತಾಂಡಾ ಬಳಿಯ  ಜಲಾಶಂಕರದೇವರ ಕಾರ್ತಿ­ಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಮನದ ಕತ್ತಲೆ ಕಳೆಯುವುದೇ ನಿಜವಾದ ಕಾರ್ತಿಕ. ದೀಪವು ಕತ್ತಲನ್ನು ಕಳೆದಂತೆ  ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜ್ಞಾನದ ಬೆಳಕನ್ನು ಹಚ್ಚಬೇಕು ಎಂದು ಹೇಳಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ದಯಾನಂದ ಪವಾರ ಅಧ್ಯಕ್ಷತೆ ವಹಿಸಿದ್ದರು.ಬೆಳಗ್ಗೆ ಜಲಾಶಂಕರ ದೇವರಿಗೆ ವಿಶೇಷ ಬಿಲ್ವಾರ್ಚನೆ, ಪೂಜೆ, ಅಲಂಕಾರ­ಗಳು ನಡೆದವು. ಅರ್ಚಕ ಮಲ್ಲಯ್ಯ­ಸ್ವಾಮಿ ಅಂಗಡಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾರದಾ ತೋಟದ, ಬೆಳದಡಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶಂಭುಲಿಂಗಯ್ಯ ಕಲ್ಮಠ, ಶಂಭುಲಿಂಗಯ್ಯ ತಂಗಡಗಿ, ವಿಜಿಯ.­ಪವಾರ, ಲಕ್ಷ್ಮಣ ಗುಡಿಮನಿ, ಶಂಕರ­ಗೌಡ ಸಿದ್ದನಗೌಡ್ರ, ವಿರೂಪಾಕ್ಷಯ್ಯ ಹಿರೇಮಠ, ಸಹದೇವಪ್ಪ, ಬಸವರಾಜ  ಸೂಡಿ, ಬಸವರಾಜ ಕುರ್ತಕೋಟಿ, ತಿಪ್ಪಣ್ಣ, ಸೇರಿದಂತೆ ಗದಗ-ಬೆಟಗೇರಿ, ನಾಗಾವಿ, ಪಾಪನಾಶಿ, ಅಡವಿಸೋಮಾಪುರ, ಬೆಳದಡಿ ತಾಂಡಾ ಮುಂತಾದ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತಾದಿಗಳು ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು ದೀಪ ಬೆಳಗಿದರು.ಅಯ್ಯಪ್ಪ ಸ್ವಾಮಿ ಭಕ್ತವೃಂದ ಬೆಳಧಡಿ ಹಾಗೂ ಬೆಟಗೇರಿ ನೇಕಾರ ಕಾಲನಿ  ಭಕ್ತಾದಿಗಳಿಂದ ಭಜನೆ ಕಾರ್ಯಕ್ರಮ ನಡೆಯಿತು.

ಪ್ರತಿಕ್ರಿಯಿಸಿ (+)