ಗುರುವಾರ , ಮೇ 19, 2022
21 °C

ದುಡಿಮೆ ಹಾಗೂ ಪ್ರಾಮಾಣಿಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಜನಪದ ಸಂಸ್ಕೃತಿ ಓಣಿಯೊಳಗಿನ ಕೂಸು ಇದ್ದಂತೆ. ಅದನ್ನು ಎಲ್ಲರೂ ಪ್ರೀತಿಯಿಂದ ಅಪ್ಪಿ-ಒಪ್ಪಿಕೊಂಡು ಬರುತ್ತಿದ್ದಾರೆ. ಪ್ರಕೃತಿ ಇರುವವರೆಗೂ ಜನಪದಕ್ಕೆ ಸಾವಿಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ತಜ್ಞ ಬಿ.ಆರ್. ಪೋಲಿಸ್ ಪಾಟೀಲ ಹೇಳಿದರು.ತಾಲ್ಲೂಕಿನ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಕಾಡಸಿದ್ಧೇಶ್ವರ ಸಂಸ್ಥಾನಮಠ ಮತ್ತು ಕರ್ನಾಟಕ ಜಾನಪದ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾನಪದ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜನಪದ ಪ್ರಕೃತಿ ಇರುವವರೆಗೂ ಬದುಕಿರುತ್ತದೆ ಎಂದು ಹೇಳಿದರು.ಸಂಸದ ರಮೇಶ ಕತ್ತಿ, ಪ್ರತಿಯೊಬ್ಬರೂ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಮಹಾಪೀಠದ ಜಗದ್ಗುರು ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

 

ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜಮಖಂಡಿಯ ಶ್ರೀ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಬನಹಟ್ಟಿಯ ಶ್ರೀ ಶರಣ ಬಸವ ಶಿವಾಚಾರ್ಯ ಸ್ವಾಮೀಜಿ, ಮಂಡ್ರೂಕ್‌ದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಜಿ.ಪಂ ಸದಸ್ಯರಾದ ಮಹೇಶ ಭಾತೆ, ಗಣೇಶ ಹುಕ್ಕೇರಿ, ತಾ.ಪಂ ಸದಸ್ಯರಾದ ವಿಕ್ರಮ್ ಬನಗೆ, ಪಾಪು ಕಿಲ್ಲೆಕತ್, ಭಾನು ಮತ್ತೇಭಾಯಿ, ಮಹಾದೇವಿ ಹಿರೇಮಠ ಮುಂತಾದವರನ್ನು ಸತ್ಕರಿಸ ಲಾಯಿತು.ಚಿತ್ರಕಲಾವಿದ ಬಾಬುರಾವ್ ನಡೋಣಿ ಅವರ ಭಾವಚಿತ್ರ ಬಿಡಿಸುವ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ನಾನಾ ಕಲಾಪ್ರಕಾರಗಳನ್ನು ಪ್ರದರ್ಶಿಸಿ ಮನರಂಜಿಸಿದರು. ಮಲ್ಲಯ್ಯಾ ಜಡೆ ಸ್ವಾಗತಿಸಿದರು.ಶ್ರೀಪಾದ ಕುಂಬಾರ ಮತ್ತು ಭರತ ಕಲಾಚಂದ್ರ ಕಾರ್ಯಕ್ರಮ  ನಿರೂಪಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.