ಮಂಗಳವಾರ, ಮೇ 24, 2022
23 °C

ದುರಂತ ತಪ್ಪಿಸಿದ ಚಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಬಾಲ, (ಪಿಟಿಐ): ಇಲ್ಲಿನ ದಂಡು ರೈಲು ನಿಲ್ದಾಣದ ಬಳಿ ಗುರುವಾರ ಭಾರಿ ಸ್ಫೋಟಕ ಪತ್ತೆ ಹಚ್ಚುವ ಮೂಲಕ ಉಗ್ರರು ನಡೆಸಲು ಉದ್ದೇಶಿಸಿದ್ದ ಪ್ರಮುಖ ದುಷ್ಕೃತ್ಯನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲ್ಯಾಬ್ರಡಾರ್ ನಾಯಿ `ಚಿಲಿ~ ಇದೀಗ ಪೊಲೀಸರ ಮೆಚ್ಚುಗೆಗೆ ಪಾತ್ರವಾಗಿದೆ.ಭಾರತ- ಟಿಬೆಟ್ ಗಡಿ ಪೊಲೀಸ್ ಪಡೆಯ ವಿಶೇಷ ಸ್ಫೋಟಕ ಪತ್ತೆ ತರಬೇತಿಪಡೆದಿದ್ದ 18 ತಿಂಗಳ ಈ ಕಪ್ಪು ನಾಯಿ, ಸ್ಫೋಟಕ ತುಂಬಿದ್ದ ಕಾರಿನತ್ತ ತನ್ನ ನಿರ್ವಾಹಕನನ್ನು ಎಳೆದು ತಂದಿತ್ತು. ಕಾಲುಗಳನ್ನು ಕಾರಿನ ಬಾನೆಟ್ ಮೇಲಿಟ್ಟು ಗಮನ ಸೆಳೆದಿತ್ತು.ಚಿಲಿ ಕಾರಿನ ಬಳಿಯಿಂದ ಕದಲದೇ ಮಹತ್ವದ ಸುಳಿವು ದೊರೆಯಲು ಕಾರಣವಾಯಿತು. ಚಿಲಿ ಇದೀಗ ಹರಿಯಾಣ ಪೊಲೀಸರ ವಿಶೇಷ ಪುರಸ್ಕಾರಕ್ಕೂ ಪಾತ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.