ದಾವಣಗೆರೆ: ‘ದುರ್ಗಮ್ಮ ನಿನಗೆ ಉಧೋ... ಉಧೋ...’ ಭಕ್ತ ಸಾಗರದ ಜಯಘೋಷದೊಂದಿದೆ ಭಾನುವಾರ ರಾತ್ರಿ 9ಕ್ಕೆ ಸಾಂಪ್ರದಾಯಿಕ ಆಚರಣೆಯಂತೆ ‘ಸಾರು’ ಹಾಕುವ ಮೂಲಕ ನಗರದೇವತೆ ದುಗ್ಗಮ್ಮ ಚಾತ್ರಾಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದಲ್ಲಿನ ವಿವಿಧ ದೇವರು ವಿಗ್ರಹಗಳನ್ನೂ ಸಹ ಅಲಂಕರಿಸಲಾಗಿದೆ. ಗರ್ಭಗುಡಿಯಲ್ಲಿರುವ ವಿಘ್ನೇಶ್ವರ, ನಂದಿಶ್ವರ, ಕಲ್ಲೇಶ್ವರ, ವಿಷ್ಣು, ಸತ್ಯನಾರಾಯಣ, ವೀರಭದ್ರೇಶ್ವರ, ದಡಾರದಮ್ಮ, ಸುಂಕದಮ್ಮ, ಸಿಡುಬಿನಮ್ಮ, ಕೆಮ್ಮಿನಮ್ಮ, ಮೈಲಮ್ಮ ದೇವತೆಗಳ ವಿಗ್ರಹಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ವಿಶೇಷ ಎಂದರೆ ಬ್ರಹ್ಮದೇವರ ವಿಗ್ರಹಮೂರ್ತಿಗೂ ಇಲ್ಲಿ ವಿಶೇಷ ಪೂಜೆ ನಡೆಸಲಾಗಿದ್ದು, ಭಕ್ತರ ಆಕರ್ಷಣೆ ಗಳಿಸಿದೆ.

ರೂ. 66ಲಕ್ಷ ಮೌಲ್ಯ ಆಭರಣಗಳಿಂದ ಅಲಂಕಾರ: 1937ರಲ್ಲಿ ಮುರುಘಾಮಠದ ಜಯದೇವ ಶ್ರೀಗಳಿಂದ ಪ್ರತಿಷ್ಠಾಪನೆಗೊಂಡಿರುವ ‘ದುರ್ಗಮ್ಮ ದೇವಿ’ ರೂ. 66 ಲಕ್ಷ ಮೌಲ್ಯದ ಅಪ್ಪಟ ಅಪರಂಜಿ ಚಿನ್ನದಿಂದ ತಯಾರಿಸಿರುವ ವಿವಿಧ ಆಭರಣಗಳಿಂದ ಅಲಂಕೃತಳಾಗಿದ್ದಾಳೆ. ವಜ್ರಖಚಿತ ಹರಳುಗಳಿಂದ ತಯಾರಿಸಲಾಗಿರುವ ಆಭರಣಗಳು ದೇವಿಯ ಮುಖಕವಚ ಮತ್ತು ಕೊರಳನ್ನು
ಅಲಂಕರಿಸಿವೆ. ಆಭರಣಗಳ ಸಹಿತ ಶೋಭಾಯಮಾನಳಾಗಿ ಗರ್ಭಗುಡಿಯಲ್ಲಿ ವಿರಾಜಮಾನಳಾಗಿದ್ದಾಳೆ. ಫಳಫಳ ಹೊಳೆಯುವ ಗರ್ಭಗುಡಿಯಲ್ಲಿನ ದೇವಿಯ ವಿಗ್ರಹ ಭಕ್ತಿ–ಭಾವುಕತೆ ಉಕ್ಕಿಸುವಂತಿದೆ.

ರೂ. 9.50 ಲಕ್ಷ ವೆಚ್ಚದ ಪೆಂಡಾಲ್: ಜಾತ್ರಾಮಹೋತ್ಸವಕ್ಕೆ ರೂ. 9.50 ಲಕ್ಷ ವೆಚ್ಚದಲ್ಲಿ ಪೆಂಡಾಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜತೆಗೆ ರೂ. 1.50ಲಕ್ಷ ವೆಚ್ಚದಲ್ಲಿ ಮೂರು ಸಾಲಿನ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಎಸ್ಕೆಪಿ ರಸ್ತೆ ಹಳೇಪೇಟೆ– ತಳವಾರ ಕೇರಿ ರಸ್ತೆ– ಹೊಂಡದ ವೃತ್ತದ ಮೂಲಕ ವಿದ್ಯುತ್ ದೀಪಾಲಂಕಾರವನ್ನು ದೇಗುಲ ಸಮಿತಿ ವ್ಯವಸ್ಥೆ ಮಾಡಿದೆ.

ಪಾರಂಪರಿಕ ಪ್ರಸಾದ ನೈವೇದ್ಯಕ್ಕೆ ಸೂಚನೆ: ದೇವಿಯ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವ ‘ಪಾರಂಪರಿಕ ಪ್ರಸಾದ ನೈವೇದ್ಯಕ್ಕೆ’ ದೇಗುಲ ಸಮಿತಿ ವತಿಯಿಂದ ಪದಾರ್ಥಗಳನ್ನು ನೀಡಲಾಗಿದೆ. ಗೌಡ್ರ ಕಳಸಪ್ಪ– ದೇವರಹಟ್ಟಿ ಗೌಡ್ರ ಬಸಪ್ಳರ–ಕುರುಡು ದುಗಪ್ಳರ–ಅಜ್ಜಪ್ಳರ–ಪಟೇಲ್ ಸಿದ್ದಪ್ಳ ಆನೆಪ್ಳರ ಗೌಡ್ರ ಸಿದ್ದಪ್ಪ ಐದು ಮನೆತನಗಳು ದೇವಿಯ ಸಾಂಪ್ರದಾಯಿಕ ನೈವೇದ್ಯ ತಯಾರಿಸುತ್ತಾ ಬಂದಿವೆ. ಅವರು ಪ್ರಸಾದ ನೈವೇದ್ಯ ಮಾಡಿದ ನಂತರವೇ ದೇವಿಗೆ ಸಂತೃಪ್ತಿ ಕಾರ್ಯಕ್ಕೆ ಚಾಲನೆ ಸಿಗಲಿದೆ.

ಮೂಲ ಸೌಕರ್ಯ ಸುವ್ಯವಸ್ಥೆ: ಹರಕೆ ಹೊತ್ತು ಬರುವ ಭಕ್ತರಿಗೆ ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆ ದೇಗುಲದ ಪಾದಗಟ್ಟೆ ಬಳಿ ಶವರ್ ಸ್ನಾನದ ವ್ಯವಸ್ಥೆ ಕಲ್ಪಿಸಿದೆ. ದೇಗುಲದ ಸುತ್ತಲೂ ನಲ್ಲಿಗಳನ್ನು ಅಳವಡಿಸುವ ಮೂಲಕ ಸಾಲಿನಲ್ಲಿ ನಿಂತು ದಣಿಯುವ ಭಕ್ತರಿಗೆ ಕುಡಿಯುವ ನೀರಿನ ಸುವ್ಯವಸ್ಥೆ ಮಾಡಲಾಗಿದೆ. ಬೇವಿನ ಸೀರೆ ಹರಕೆ ತೀರಿಸುವ ಭಕ್ತರಿಗಾಗಿ ಉಡುಪು ಬದಲಾವಣೆ ಕೊಠಡಿಗಳನ್ನು ನಿರ್ಮಿಸಲಾಗಿದೆ. ಜಾತ್ರಾ ಸಂದರ್ಭದಲ್ಲಿ ದೇಗುಲದ ಸುತ್ತಲೂ ಕಿರಿದಾಗಿದ್ದು, ಜನಸಂದಣಿಯಿಂದ ನೂಕುನುಗ್ಗಲು ಉಂಟಾಗುತ್ತಿತ್ತು.

ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದ ಭಕ್ತರ ಅನುಕೂಲಕ್ಕಾಗಿ ರೂ. 50ಲಕ್ಷ ವೆಚ್ಚದಲ್ಲಿ 60X20 ಅಡಿ ಉದ್ದಗಲದ ದೇಗುಲದ ಪಕ್ಕದಲ್ಲಿದ್ದ ಶೆಟ್ಟರ ಮೂರು ಮನೆಗಳನ್ನು ಖರೀದಿಸಿ ಜಾಗ ವಿಶಾಲಗೊಳಿಸಲಾಗಿದೆ. ಆಕರ್ಷಕ ಮಹಾದ್ವಾರ ನಿರ್ಮಿಸಲು ಅನುಕೂಲಕರವಾಗಿದೆ. ಬಿಸಿಲಿನ ತಾಪದಿಂದ ನೆಲಬಿಸಿಯಾಗಿ ಪಾದಸುಟ್ಟು ಕಿರಿಕಿರಿ ಅನುಭವಿಸುತ್ತಿದ್ದ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಸುತ್ತಲೂ ಅರ್ಧ ಅಡಿ ಎತ್ತರದಷ್ಟು ಹಸಿಮರುಳು ಹಾಕಲಾಗಿದೆ. ಇದರಿಂದ ತಂಪಾದ ವಾತಾವರಣ ಸೃಷ್ಟಿಯಾಗಿದೆ ಎಂದು ದೇಗುಲ ಸಮಿತಿ ತಿಳಿಸಿದೆ.

ವಾಹನ ನಿಲುಗಡೆಗೆ ವ್ಯವಸ್ಥೆ: ಹೊಂಡದ ವೃತ್ತದ ಬಳಿ 3 ಎಕರೆ ಜಾಗದಲ್ಲಿ ದ್ವಿಚಕ್ರ, ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಬೂದಾಳ್ ಸಮೀಪ 7 ಎಕರೆ ಜಾಗದಲ್ಲೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಮೈನವಿರೇಳಿಸಿದ ಟಗರು ಕಾಳಗ
ಉತ್ಸವದ ಅಂಗವಾಗಿ ನಗರದ ದೇವರಾಜ ಅರಸು ಮೈದಾನದಲ್ಲಿ ಭಾನುವಾರ ನಡೆದ ಟಗರು ಕಾಳಗ ರೋಚಕವಾಗಿದ್ದು, ನೆರೆದವರ ಮೈನವಿರೇಳಿಸಿತು. ಮರಿಟಗರು–82, 2 ಹಲ್ಲಿನ –80 ಟಗರು, 4ಹಲ್ಲಿನ –45 ಟಗರು, 6ಹಲ್ಲಿನ –52ಟಗರು, 8ಹಲ್ಲಿನ –54 ಟಗರುಗಳು ಕಾಳಗದಲ್ಲಿ ಭಾಗವಹಿಸಿದ್ದವು. ರಾಷ್ಟ್ರಮಟ್ಟದ ಟಗರು ಕಾಳಗ ನಡೆಸಲು ದೇಗುಲ ಸಮಿತಿ ರೂ. 1.50 ಲಕ್ಷ ಬಹುಮಾನ ಪ್ರಕಟಿಸಿದೆ.

ಟಗರುಗಳು ಮಾಲೀಕನ ಆಜ್ಞೆಯಂತೆ ಕೊಂಬಿಗೆ–ಕೊಂಬು ಡಿಕ್ಕಿಯಾಗಿಸಿ ಬಹುಮಾನಕ್ಕಾಗಿ ಹೋರಾಟ ನಡೆಸಿದ್ದವು. ಮೈದಾನದ ಸುತ್ತಲೂ ನೆರೆದ ಜನರು ಹೋ ಎಂದು ಸಂಭ್ರಮಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.