ಕೆಂಭಾವಿ: ನೂತನವಾಗಿ ಗ್ರಾಮ ಪಂಚಾ ಯಿತಿ ಕೇಂದ್ರ ಸ್ಥಾನವನ್ನು ಹೊಂದಿರುವ ಹೆಗ್ಗನದೊಡ್ಡಿ ಗ್ರಾಮ ಹಲವಾರು ಸಮಸ್ಯೆಗಳ ಆಗರವಾಗಿದೆ. ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಚರಂಡಿ ಹಾಗೂ ಶೌಚಾಲ ಯದ ಕೊರತೆ ಎದ್ದು ಕಾಣುತ್ತದೆ.

ಇದರಿಂದಾಗಿ ಗ್ರಾಮದ ಮುಖ್ಯ ರಸ್ತೆಯ ಮೇಲೆ ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಇದರಿಂದ ಡೆಂಗೆ, ಮಲೇರಿಯಾ ಮುಂತಾದ ಮಾರಕ ರೋಗ ಹರಡುವ ಭೀತಿ ಉಂಟಾಗಿದೆ. ರಸ್ತೆಗಳು ಕೆಸರು ಗದ್ದೆಗ ಳಂತಾಗಿದ್ದು, ಪಾದಾಚಾರಿಗಳು ಪರದಾಡುವಂತಾಗಿದೆ. ಸಾರ್ವಜನಿಕರಂತೂ ರಸ್ತೆ ಮೇಲೆ ಮೂಗು ಮುಚ್ಚಿಕೊಂಡೇ ತಿರುಗಾ ಡುತ್ತಾರೆ. ಗ್ರಾಮದಲ್ಲಿ ಒಳಚರಂಡಿ ನಿರ್ಮಿಸುವ ಜವಾಬ್ದಾರಿ ಹೊಸ ಗ್ರಾಮ ಪಂಚಾಯಿತಿ ಮೇಲೆ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಶೌಚಾಲಯ ವ್ಯವಸ್ಥೆ: ಈ ಗ್ರಾಮದಲ್ಲಿ ಕೇವಲ ಒಂದು ಸಾರ್ವಜನಿಕ ಮಹಿಳಾ ಶೌಚಾಲಯವಿದ್ದು, ಅದೂ ಕೂಡಾ ಉಪ ಯೋಗಕ್ಕೆ ಬಾರದಂತಾಗಿದೆ. ಇದರಿಂದ ಮಹಿಳೆಯರು ಬಯಲನ್ನೇ ಅವಲಂಬಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ಮಲ ಭಾರತ ಯೋಜನೆ ಯಂತೂ ಇಲ್ಲಿ ಕಾಣುವುದೇ ಇಲ್ಲ ಎನ್ನು ವುದೇ ಸೂಕ್ತ. ಕೇವಲ ನೂರು ಜನರಲ್ಲಿ ಮೂರ್ನಾಲ್ಕು ಜನ ಮಾತ್ರ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.

ಗ್ರಾಮದಲ್ಲಿ ಯಾವುದೇ ಸಾರ್ವಜ ನಿಕ ಶೌಚಾಲಯಗಳು ಇಲ್ಲದೇ ಇರುವುದ ರಿಂದ ಮಹಿಳೆಯರಿಗೆ ತೊಂದರೆಯಾ ಗಿದ್ದು, ನೂತನವಾಗಿ ಅಸ್ತಿತ್ವಕ್ಕೆ ಬಂದಿ ರುವ ಗ್ರಾಮ ಪಂಚಾಯಿತಿಯಿದ ಶೌಚಾ ಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾಮದ ನಿವಾಸಿ ವೀರಘಂಟೆಪ್ಪ ಮಡಿವಾಳ ಒತ್ತಾಯಿಸುತ್ತಾರೆ.

ಈ ಮೊದಲು ಮಾಲಗತ್ತಿ ಪಂಚಾ ಯತಿ ವ್ಯಾಪ್ತಿಯಲ್ಲಿ ಬರುತ್ತಿದ್ದ ಈ ಗಾಮ ದಲ್ಲಿ ಇಂದಿರಾ ಆವಾಸ್ ಬಸವ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ ಮುಂತಾದ ಯಾವ ಯೋಜ ನೆಗಳಲ್ಲಿ ಮನೆಗಳ ಹಂಚಿಕೆ ಸರಿಯಾಗಿ ಆಗಿಲ್ಲ ಎನ್ನುವ ಆರೋಪ ವನ್ನು ಗ್ರಾಮಸ್ಥರು ಮಾಡುತ್ತಾರೆ. ಪ್ರಭಾವಿ ವ್ಯಕ್ತಿಗಳಿಗೆ ಮನೆ ಹಂಚಿಕೆ ಮಾಡಿದ್ದು, ವಸತಿ ಇಲ್ಲದವರನ್ನು ಕಡೆಗ ಣಿಸಲಾಗುತ್ತಿದೆ ಎನ್ನುವ ಆಕ್ರೋಶ ಗ್ರಾಮಸ್ಥರದ್ದು.

ಆರೋಗ್ಯ ಸಮಸ್ಯೆ: ಸುಮಾರು 25 ವರ್ಷದ ಹಿಂದೆ ಇಲ್ಲಿ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಕೇಂದ್ರದ ಕಟ್ಟಡ ನಿರ್ಮಾಣವಾಗಿದ್ದು, ಇಲ್ಲಿ ಆರೋಗ್ಯ ಸಹಾಯಕರು ಬರದೇ ಇರುವುದರಿಂದ ಕಟ್ಟಡ ಉಪಯೋಗಿಸಲಾರದೇ ಶಿಥಿಲಾ ವಸ್ಥೆಗೆ ತಲುಪಿದೆ.

ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರ್ಸೆನಿಕ್ಯುಕ್ತ ನೀರಿನ ಸಮಸ್ಯೆ ತೀವ್ರವಾಗಿದೆ. ಕಿರದಳ್ಳಿ ತಾಂಡಾದ ಪ್ರಕ ರಣ ಬೆಳಕಿಗೆ ಬರುತ್ತಿದ್ದಂತೆಯೇ ಜ್ಯೆನಾ ಪುರ, ಹೆಗ್ಗಣದೊಡ್ಡಿ, ಗೊಡ್ರಿಹಾಳ ಗ್ರಾಮಗಳಲ್ಲಿ ನೀರು ಶುದ್ಧಿಕರಣ ಘಟಕ ಗಳನ್ನು ಸ್ಥಾಪಿ ಸಿದ್ದು, ಕುಡಿಯುವ ನೀರಿಗೆ ತೊಂದರೆಯಿಲ್ಲ.

ಆದರೆ ಬಳಕೆಗೆ ನೀರಿನ ತೊಂದರೆ ಇದೆ. ಇಲ್ಲಿ ಯಾವುದೇ ನೀರಿನ ಟ್ಯಾಂಕ್ ನಿರ್ಮಿಸಿಲ್ಲ. ಕೊಳವೆಬಾವಿಗಳೇ ಆಧಾರ ವಾಗಿವೆ. ಇದರಿಂದ ನಿತ್ಯ ಸರದಿಯಲ್ಲಿ ನಿಂತು ನೀರು ತರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.