ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ರುದ್ರ ಪ್ರತಾಪ್ ಸಿಂಗ್ ಹಾಗೂ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರು ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಸೀನಿಯರ್ ತಂಡದ ಆಯ್ಕೆ ಸಮಿತಿಯ ಸದಸ್ಯರಾಗುವ ಸಾಧ್ಯತೆ ಇದೆ. ಎಸ್. ಶರತ್ ಹಾಗೂ ಸುಬ್ರತೊ ಬ್ಯಾನರ್ಜಿ ಸಮಿತಿಯಿಂದ ನಿರ್ಗಮಿಸಲಿದ್ದು, ಅವರ ಸ್ಥಾನವನ್ನು ಈ ಮಾಜಿ ಆಟಗಾರರು ತುಂಬಲಿದ್ದಾರೆ.
.ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವದ ಬೆಲೆ ಹೆಚ್ಚಿಸಿದ ಬಿಸಿಸಿಐ.
2007ರ ಟಿ–20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಆರ್.ಪಿ ಸಿಂಗ್, ಉತ್ತರ ಪ್ರದೇಶ ಪರವಾಗಿ ಹಲವು ಬಾರಿ ಕಣಕ್ಕಿಳಿದಿದ್ದಾರೆ. 2016-17ರಲ್ಲಿ ರಣಜಿ ಟ್ರೋಫಿ ಗೆದ್ದ ಪಾರ್ಥಿವ್ ಪಟೇಲ್ ನೇತೃತ್ವದ ಗುಜರಾತ್ ತಂಡದಲ್ಲೂ ಸಿಂಗ್ ಇದ್ದರು. ಅವರು ಸುಬ್ರತೊ ಬ್ಯಾನರ್ಜಿ ಸ್ಥಾನವನ್ನು ಸಿಂಗ್ ತುಂಬಲಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ ನೂರಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಪ್ರಗ್ಯಾನ್ ಓಜಾ ಆಯ್ಕೆಯೂ ಖಚಿತವಾಗಿದ್ದು, ಶರತ್ ಜಾಗವನ್ನು ತುಂಬಲಿದ್ದಾರೆ. ಶರತ್ ಅವರು ಜೂನಿಯರ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಲಿದ್ದಾರೆ. ಸದ್ಯ ತಿಲಕ್ ನಾಯ್ಡು ಅಧ್ಯಕ್ಷರಾಗಿದ್ದಾರೆ.
.ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಬಿಸಿಸಿಐ ಅರ್ಜಿ ಆಹ್ವಾನ.
‘ಅರ್ಜಿ ಸಲ್ಲಿಸಬೇಕು ಎಂದು ಇಬ್ಬರಿಗೆ ಸೂಚಿಸಲಾಗಿದ್ದು, ಕ್ರಿಕೆಟ್ ಸಲಹಾ ಸಮಿತಿ ಅವರ ಹೆಸರನ್ನು ಬಿಸಿಸಿಐನ ವಾರ್ಷಿಕ ಸಭೆಯಲ್ಲಿ ಅಖೈರುಗೊಳಿಸುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಮೂಲಗಳು ಗೋಪ್ಯತೆಯ ಷರತ್ತು ವಿಧಿಸಿ ತಿಳಿಸಿವೆ.

82 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಆರ್.ಪಿ ಸಿಂಗ್ 124 ವಿಕೆಟ್ ಪಡೆದಿದ್ದಾರೆ. 14 ಟೆಸ್ಟ್, 58 ಒಡಿಐ ಹಾಗೂ 10 ಟಿ–20 ಪಂದ್ಯಗಳನ್ನು ಆಡಿದ್ದಾರೆ.

ಟೆಸ್ಟ್ನಲ್ಲಿ ಉತ್ತಮ ಬೌಲರ್ ಆಗಿದ್ದ ಓಜಾ, 133 ವಿಕೆಟ್ ಕಬಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಕೊನೆಯಾದಾಗಿ ಆಡಿದ ಟೆಸ್ಟ್ ಪಂದ್ಯದಲ್ಲಿ ಓಜಾ 10 ವಿಕೆಟ್ ಪಡೆದಿದ್ದರು.
.ದೇಶಿ ಕ್ರಿಕೆಟ್ | ಗಾಯಾಳುವಿಗೆ ಬದಲೀ ಆಟಗಾರ: ಬಿಸಿಸಿಐ ಮಹತ್ವದ ಬದಲಾವಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.