ಸೋಮವಾರ, ಜೂನ್ 14, 2021
24 °C

ದೂರದಿಂದ ಬಂದಂತ ಸುಂದರಾಂಗ ಜಾಣ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಸಮೀಪದ ದೇವನಹಳ್ಳಿಯ ಶಿವಪುರ ರಮೇಶ್‌ ಅವರ ತೋಟದಲ್ಲಿ ಭಾನುವಾರ ಕಂಡ ‘ಇಂಡಿಯನ್‌ ಪಿಟ್ಟಾ’ (ವೈಜ್ಞಾನಿಕ ಹೆಸರು– Pitta brachyura) ಪಕ್ಷಿಯ ಸೊಬಗಿನ ನೋಟಗಳು. ಇದನ್ನು ಕನ್ನಡದಲ್ಲಿ ‘ನವರಂಗ’, ‘ನೆಲಗುಪ್ಪ’ ಎಂದು  ಕರೆಯುತ್ತಾರೆ. ಹಿಮಾಲಯದ ತಪ್ಪಲು ಇದರ ತವರು ಪ್ರದೇಶ. ಅಲ್ಲೇ ಸಂತಾನ ಅಭಿವೃದ್ಧಿ ನಡೆಸುತ್ತದೆ. ಮಳೆಗಾಲದಲ್ಲಿ ದಕ್ಷಿಣ ಭಾರತ ಹಾಗೂ ಶ್ರೀಲಂಕಾಕ್ಕೆ ವಲಸೆ ಬರುತ್ತದೆ. ಚಳಿಗಾಲ ಮುಗಿದ ಕೂಡಲೇ ತವರು ಪ್ರದೇಶಕ್ಕೆ ವಾಪಸ್‌ ತೆರಳುತ್ತದೆ.ಇದು ಸ್ವಲ್ಪ ದೂರ ನಡೆಯುತ್ತಲೂ, ಸ್ವಲ್ಪ ದೂರ ಹಾರುತ್ತಲೂ ಕ್ರಮಿಸುತ್ತದೆ. ಇದು ತುಂಬಾ ನಾಚಿಕೆ ಸ್ವಭಾವದ ಹಕ್ಕಿ. ಅಪಾಯದ ಮುನ್ಸೂಚನೆ ಸಿಕ್ಕ ಕೂಡಲೇ ಮರೆಯಾಗಿ ಬಿಡುತ್ತದೆ. ಕುರುಚಲು ಕಾಡು, ದಟ್ಟ ಪೊದೆ, ತೋಟಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ  -ಪ್ರಜಾವಾಣಿ ಚಿತ್ರ: ವಿಶ್ವನಾಥ ಸುವರ್ಣ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.