ಶಿಕ್ಷಣ ಮತ್ತು ಪ್ರಗತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶಿಕ್ಷಣ ಇಂದು ಎಲ್ಲರಿಗೂ ಸಿಗುವಂತಿದ್ದರೂ, ಕೆಲವು ಸಾಮಾಜಿಕ ಪರಿಸ್ಥಿತಿಗಳು ಅಡ್ಡಗೋಡೆಯಾಗಿ ಕೆಲವರಿಗೆ ಸಿಗದಿರುವುದೂ ಉಂಟು. ಹೆಣ್ಣುಮಕ್ಕಳು ಕೆಲವೊಮ್ಮೆ ಕೀಳರಿಮೆ ಮತ್ತೊಮ್ಮೆ ಭಯದ ಕಾರಣಕ್ಕಾಗಿ ಶಿಕ್ಷಣ ವಂಚಿತವಾಗುವುದೂ ಉಂಟು. ಇದು ವಿವಾಹ ಪೂರ್ವದ ವ್ಯವಸ್ಥೆ. ಆದರೆ ವಿವಾಹ ನಂತರ ಕುಟುಂಬ ಮಹಿಳೆಯನ್ನು ತನ್ನ ಕಬಂಧ ಬಾಹುಗಳಿಂದ ಬಂಧಿಸಿಡುತ್ತದೆ. ಆಗ ವಿದ್ಯೆ ಕನಸಿನ ಮಾತೇ ಆಗುತ್ತದೆ.

ಕಾಲ ಪರಿಪಕ್ವಗೊಂಡಂತೆಲ್ಲಾ ಪರ್ಯಾಯಗಳೂ ಉಗಮಗೊಳ್ಳುತ್ತವೆ. ಅಂತಹುದೇ ಪರ್ಯಾಯ ದೂರಶಿಕ್ಷಣ, ಮಹಿಳೆಯರ ಸಬಲೀಕರಣದಲ್ಲಿ ಪ್ರಭಾವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಅಂಶಗಳಲ್ಲಿ ದೂರಶಿಕ್ಷಣ ಕ್ರಮ ಮಹತ್ವದ್ದು.

ದೂರಶಿಕ್ಷಣದ ಸ್ವರೂಪ:
ರಾಷ್ಟ್ರದ ಭವಿಷ್ಯ ತರಗತಿಯ ಕೋಣೆಯಲ್ಲಿ ನಿರ್ಮಿತವಾಗುತ್ತದೆ ಎಂಬ ಹೇಳಿಕೆ ನೀಡಿದ ಕೊಠಾರಿ ಶಿಕ್ಷಣ ಆಯೋಗದ ಚಿಂತನೆಗೂ ಮೀರಿದಂತಹ ಸ್ವರೂಪದಲ್ಲಿ ರಾಷ್ಟ್ರದ ಭವಿಷ್ಯವು ಇಂದು ಅಡುಗೆಯ ಮನೆಯಲ್ಲಿಯೂ ನಿರ್ಮಾಣಗೊಳ್ಳುವ ಸ್ಥಿತಿ ದೂರಶಿಕ್ಷಣದ ಪರಿಣಾಮದಿಂದ ಸಾಧ್ಯವಾಗಿದೆ. ಹಾಗೆಂದಾಕ್ಷಣ, ಮಹಿಳೆಯನ್ನು ಅಡುಗೆ ಮನೆಗೆ ಸೀಮಿತಗೊಳಿಸುವ ಇಂಗಿತ ನನಗಿಲ್ಲ. ಈಗಾಗಲೇ ಪ್ರಸ್ತಾಪಿಸಿರುವಂತೆ ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣವನ್ನು ಒಂದು ಹಂತದವರೆಗೆ ಶಾಲೆ ಹಾಗೂ ಕಾಲೇಜುಗಳಲ್ಲಿ ಮುಗಿಸಿದ ನಂತರ ಕೆಲವೊಂದು ಕಾರಣಗಳಿಗಾಗಿ ಕಾಲೇಜಿಗೆ ಪ್ರವೇಶ ಪಡೆಯದಿರುವ ಎಲ್ಲಾ ವರ್ಗದವರಿಗೂ ಶಿಕ್ಷಣ ಮುಂದುವರಿಸುವ ಮತ್ತು ಉನ್ನತ ಶಿಕ್ಷಣ ಪಡೆಯುವ ಮಾರ್ಗವೇ ದೂರಶಿಕ್ಷಣ ಅಧ್ಯಯನ ಕ್ರಮ. ಇದೊಂದು ಸ್ವಯಂ ಅಧ್ಯಯನ ವಿಧಾನವಾಗಿದ್ದು, ಶಿಕ್ಷಣ ವಂಚಿತ ಮಹಿಳೆಯರಿಗೆ ಆಶಾಕಿರಣವೇ ಆಗಿದೆ.

1728ರಲ್ಲಿಯೇ ಈ ದೂರಶಿಕ್ಷಣ ಪರಿಕಲ್ಪನೆ ಆರಂಭವಾಗಿದೆ. ಕ್ಯಾಲೆಬ್ ಫಿಲಿಪ್ಸ್ ಎಂಬ ಶಿಕ್ಷಕರೊಬ್ಬರು ಲಘು ಟಿಪ್ಪಣಿ ತಯಾರಿಸಿ ದೂರದಲ್ಲಿರುವ ತನ್ನ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಕಳುಹಿಸುತ್ತಿದ್ದರು. 1840ರಲ್ಲಿ ಐಸಾಕ್ ಫಿಟ್ಮನ್ ಎಂಬಾತ ಗ್ರೇಟ್ಬ್ರಿಟನ್ನಲ್ಲಿ ಅಂಚೆ ಮೂಲಕ ಲಘುಟಿಪ್ಪಣಿ ರವಾನಿಸುತ್ತಿದ್ದ. ಲಂಡನ್ ವಿಶ್ವವಿದ್ಯಾಲಯದಲ್ಲಿ ಮೊದಲಿಗೆ ದೂರಶಿಕ್ಷಣ ವಿಭಾಗವನ್ನು 1858ರಲ್ಲಿ ತೆರೆದು ಪ್ರವೇಶ ನೀಡಲಾಯಿತು. ನಂತರ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ದೂರಶಿಕ್ಷಣ ಅಧ್ಯಯನ ವಿಧಾನವನ್ನು ಪ್ರಾರಂಭಿಸಿ ದೂರದಲ್ಲಿರುವವರಿಗೆ ಶಿಕ್ಷಣ ನೀಡುವ ಕ್ರಮ ಆರಂಭವಾಯಿತು.

ಭಾರತದಲ್ಲಿಯೂ ಪ್ರಥಮ ಭಾರಿಗೆ 1969-70ರ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯವು ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ ಎಂಬ ಹೆಸರಿನಲ್ಲಿ ದೂರ ಶಿಕ್ಷಣವನ್ನು ಪ್ರಾರಂಭಿಸಿ ಮುಕ್ತ ಕಲಿಕಾ ವ್ಯವಸ್ಥೆಗೆ ನಾಂದಿ ಹಾಡಿತು. ನಂತರ 1985ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಎಂಬ ಹೆಸರಿನಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವೊಂದು ದೆಹಲಿಯಲ್ಲಿ ಪ್ರಾರಂಭಗೊಂಡು ಇಂದು ದೇಶ ವಿದೇಶಗಳಲ್ಲಿ 40ಕ್ಕೂ ಹೆಚ್ಚು ಅಧ್ಯಯನ ಕೇಂದ್ರಗಳನ್ನು ಹೊಂದಿದ್ದು, ರಾಷ್ಟ್ರದ ಎಲ್ಲಾ ಮುಕ್ತ ವಿಶ್ವವಿದ್ಯಾನಿಲಯಗಳಿಗೆ ಮಾತೃಸ್ಥಾನದಲ್ಲಿದೆ. ಕರ್ನಾಟಕದಲ್ಲಿಯೂ ಮೈಸೂರು ವಿಶ್ವವಿದ್ಯಾಲಯದಿಂದ ಬೇರ್ಪಟ್ಟ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಸ್ಥಾಪನೆಗೊಡಿದೆ. ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯ ವಾಕ್ಯದೊಡನೆ ವಿಶ್ವದಾದ್ಯಂತ ಹೊಂದಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪರಿಣಾಮಕಾರಿ ಶಿಕ್ಷಣ ನೀಡುವಲ್ಲಿ ಕಾರ್ಯೋನ್ಮುಖವಾಗಿದೆ. ರಾಜ್ಯದ ಇತರೆ ವಿಶ್ವವಿದ್ಯಾಲಯಗಳೂ ಸಹ ದೂರ ಶಿಕ್ಷಣ ಅಧ್ಯಯನ ಕೇಂದ್ರಗಳನ್ನು ಹೊಂದಿದ್ದು, ಮುಕ್ತ ಶಿಕ್ಷಣ ನೀಡುವಲ್ಲಿ ಕ್ರಿಯಾಶೀಲವಾಗಿವೆ.

ಮನೆ ಬಾಗಿಲಿಗೆ ಜ್ಞಾನವನ್ನು ರವಾನಿಸುವ ಸಾಧನವೇ- ದೂರಶಿಕ್ಷಣ. ಉದ್ಯೋಗಸ್ಥರು, ಗೃಹಿಣಿಯರು ತಮ್ಮ ದೈನಂದಿನ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ಕಲಿಯುವಂತೆ ಪ್ರೇರೇಪಿಸುವ ಪದ್ಧತಿಯೇ ದೂರಶಿಕ್ಷಣ.ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ನೇರ ಸಂಪರ್ಕವಿಲ್ಲದೆ ಪಡೆಯುವ ಶಿಕ್ಷಣವೇ ದೂರಶಿಕ್ಷಣ.

ದೂರಶಿಕ್ಷಣ ಎಂದರೇನು? ಎಂಬುದಕ್ಕೆ ಮೇಲಿನ ವ್ಯಾಖ್ಯಾನಗಳು ಉತ್ತರ ಅಲ್ಲದಿದ್ದರೂ ಸಾಮಾಜಿಕ ಸಮಸ್ಯೆಯೊಂದಕ್ಕೆ ದೊರೆತ ಶಾಶ್ವತ ಪರಿಹಾರವೇ ದೂರಶಿಕ್ಷಣ ಎನ್ನುವಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ.

ಶಿಕ್ಷಣ ವಂಚಿತ ಮಹಿಳೆ:
ಶಿಕ್ಷಣವು ವ್ಯಕ್ತಿಗೆ ಜ್ಞಾನದ ಧಾರೆ ಎರೆಯುತ್ತದೆ. ಸಮಾಜದಲ್ಲಿ ಬದುಕುವ ಕೌಶಲಗಳನ್ನು ಕಟ್ಟಿಕೊಡುತ್ತದೆ. ವ್ಯಕ್ತಿತ್ವದ ವಿಕಸನದಲ್ಲಿ ಶಿಕ್ಷಣದ ಪಾತ್ರ ಗಣನೀಯ. ಇಂತಹ ಕಲಿಯುವಿಕೆಯ ಕೇಂದ್ರದಿಂದಲೇ ಸ್ತ್ರೀಯರನ್ನು ಹೊರಗಿಟ್ಟ ಈ ಪುರುಷ ಪ್ರಧಾನ ಸಮಾಜ ಕ್ರೂರವಾದದ್ದು.

1882ರ ನಂತರ ಸ್ತ್ರೀಯರಿಗೆ ಉನ್ನತ ಶಿಕ್ಷಣ ಅವಕಾಶ ದೊರೆಯಿತು. 1917ರಲ್ಲಿ ಪೂನಾದಲ್ಲಿ ಮಹಿಳಾ ವಿಶ್ವವಿದ್ಯಾಲಯವೊಂದು ಸ್ಥಾಪನೆಗೊಂಡು ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶ ನೀಡಿತು. 1901ರಲ್ಲಿ ಶೇ 0.05 ರಷ್ಟಿದ್ದ ಮಹಿಳಾ ಸಾಕ್ಷರತೆ 2001 ರಲ್ಲಿ ಶೇ. 57.21ರಷ್ಟಾಗಿದೆ. 2011ರ ಸಮೀಕ್ಷೆಯಲ್ಲಿ ಇದು ಗಣನೀಯ ಏರಿಕೆ ಕಂಡಿರುತ್ತದೆ ಎಂದು ಭಾವಿಸಲಾಗಿದೆ.

ಆದರೂ ಕಾಲೇಜು ಶಿಕ್ಷಣ ಪಡೆಯುವ ಹೆಣ್ಣುಮಕ್ಕಳ ಪ್ರಮಾಣ ಇಂದಿಗೂ ಕಡಿಮೆಯೇ ಇದೆ. ಉದಾ: ಮಂಡ್ಯ ಜಿಲ್ಲೆಯಲ್ಲಿ ಒಟ್ಟು 875671 ಮಹಿಳೆಯರಿದ್ದಾರೆ. ಇವರಲ್ಲಿ 311576 ಗ್ರಾಮೀಣ ಮಹಿಳೆಯರು, 88613 ನಗರ ಮಹಿಳೆಯರು ಅಕ್ಷರಸ್ಥರಾಗಿದ್ದಾರೆ.
(ಮೂಲ: ಜನಗಣತಿ ವರದಿ). 311576 ಅಕ್ಷರಸ್ಥ ಮಹಿಳೆಯರಲ್ಲಿ 91737 ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣ, 41370 ಹೆಣ್ಣು ಮಕ್ಕಳು ಪ್ರೌಢಶಾಲಾ ಶಿಕ್ಷಣ, 15019 ಹೆಣ್ಣು ಮಕ್ಕಳು ಪದವಿ ಪೂರ್ವ ಶಿಕ್ಷಣ ಹಾಗೂ 3416 ಮಹಿಳೆಯರು ಪದವಿ ಹಂತದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಒಟ್ಟು ಮಹಿಳೆಯರಲ್ಲಿ ಶೇ. 0.39 ರಷ್ಟು ಮಹಿಳೆಯರು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಬೇರೆ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರು ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದ್ದಾರೆ.

ದೂರಶಿಕ್ಷಣ ಮತ್ತು ಮಹಿಳಾ ಪ್ರಗತಿ:
ದೂರ ಶಿಕ್ಷಣದ ಪ್ರಯೋಜನದಿಂದಾಗಿ ಮಹಿಳೆಯರು ಕಳೆದುಕೊಂಡಿದ್ದ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯದ ಧ್ವನಿಯನ್ನು ಮರಳಿ ಪಡೆಯುತ್ತಿದ್ದಾರೆ. ಕೆಲವೇ ಸಾಂಪ್ರದಾಯಿಕ ಕೆಲಸಗಳಿಗೆ ಸೀಮಿತವಾಗಿದ್ದ ಮಹಿಳೆ ಇಂದು ದೂರ ಶಿಕ್ಷಣದ ಪ್ರಭಾವದಿಂದಾಗಿ ಸಮಾಜದ ಎಲ್ಲಾ ವತ್ತಿ ರಂಗಗಳಲ್ಲಿಯೂ ತನ್ನ ಸ್ಥಾನ ಮೀಸಲಿರಿಸಿಕೊಳ್ಳುತ್ತಿದ್ದಾಳೆ.

ದೂರ ಶಿಕ್ಷಣ ಕ್ರಮ ಜಾರಿಯಲ್ಲಿರುವುದರಿಂದ ಮಹಿಳೆ ಇಂದು ಯಾರ ಮುಲಾಜಿಗೂ ಒಳಪಡುತ್ತಿಲ್ಲ. ನಿರಂತರ ಶಿಕ್ಷಣದಿಂದ ವಂಚಿತಳಾದರೆ ದೂರಶಿಕ್ಷಣದತ್ತ ಮುಖ ಮಾಡಿ ಯಶಸ್ವಿ ಜೀವನ ಸಾಧಿಸಿರುವ ಸಾವಿರಾರು ಮಹಿಳೆಯರು ತಮ್ಮ ಸ್ಥಾನಮಾನ ಎತ್ತರಿಸಿಕೊಂಡಿದ್ದಾರೆ.

ಮಹಿಳಾ ಶೈಕ್ಷಣಿಕ ಪ್ರಗತಿಯಲ್ಲಿ 102 ಪ್ರಮುಖ ದೇಶಗಳ ಪೈಕಿ ಭಾರತ 95ನೇ ಸ್ಥಾನದಲ್ಲಿರುವುದು ಕಳವಳಕಾರಿ ವಿಚಾರವಾಗಿದೆ. ಆದರೂ ಸಮಾಧಾನಕರ ವಿಚಾರವೆಂದರೆ ದೂರಶಿಕ್ಷಣವೆಂಬ ಸಂಜೀವನಿಯ ಮೂಲಕ ಎಲ್ಲವನ್ನು ಸಾಧಿಸುವ ಪ್ರಯತ್ನದಲ್ಲಿದ್ದಾರೆ.

20ನೇ ಶತಮಾನದ ಉತ್ತರಾರ್ಧದಲ್ಲಿ ಉಂಟಾದ ಹೊಸ ಮಹಿಳಾ ಶಕೆಯಿಂದಾಗಿ ಸಾಂಪ್ರದಾಯಿಕ ಕುಟುಂಬಗಳೂ ದೂರ ಶಿಕ್ಷಣದ ಮೂಲಕವಾದರೂ ಶಿಕ್ಷಣ ಕೊಡಿಸುವ ಗೋಜಿಗೆ ಬಿದ್ದಿದ್ದಾರೆ. ದೂರಶಿಕ್ಷಣ ಪಡೆದ ಹಲವಾರು ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಬೇರೆಯವರಿಗೆ ಮಾರ್ಗದರ್ಶನ ನೀಡುತ್ತಾ ನಾಯಕತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಸ್ವತಂತ್ರವಾಗಿ ಬ್ಯಾಂಕ್ಗಳಲ್ಲಿ ಸಾಲ ಪಡೆದು ಹೈನುಗಾರಿಕೆ, ಪಶುಸಂಗೋಪನೆ, ಟೈ ಲರಿಂಗ್, ಗಂಧದಕಡ್ಡಿ ತಯಾರಿಸುವ ಉದ್ಯಮ, ಬ್ಯೂಟಿಪಾರ್ಲರ್, ಇವೇ ಮೊದಲಾದ ಗೃಹೋದ್ಯಮಗಳನ್ನು ನಡೆಸುತ್ತಾ ಹಲವಾರು ಮಹಿಳೆಯರಿಗೆ ಸ್ವತಂತ್ರ ಬದುಕು ಕಟ್ಟಿಕೊಡುತ್ತಿದ್ದಾರೆ. ಬಿ.ಎ. ಪದವಿ, ಬಿ.ಇಡಿ., ಎಂ.ಇಡಿ., ಪದವಿಗಳನ್ನು ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿಯೇ ಮುಗಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಕಿಯರಾಗಿ, ಮನೆ ಪಾಠ ಹೇಳಿಕೊಡುತ್ತಾ, ಜೀವನ ಸಾಗಿಸುವ ಕಾಯಕವೂ ಮುಂದುವರಿದಿದೆ. ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಉನ್ನತ ಪದವಿಯನ್ನು ಅಲಂಕರಿಸಿದ್ದಾರೆ. ಸ್ವಗ್ರಾಮದಲ್ಲೆೀ ಸಿಗುವ ವಿದ್ಯಾಭ್ಯಾಸಕ್ಕೆ ಸೀಮಿತವಾಗಿದ್ದ ಮಹಿಳೆ ಇಂದು ಹೊರ ರಾಜ್ಯಗಳ ಅಧ್ಯಯನ ಕೇಂದ್ರಗಳಿಗೆ, ಪರೀಕ್ಷೆಗಳಿಗೆ ಹಾಜರಾಗುತ್ತಿದ್ದು ಬಂಧಮುಕ್ತಳಾಗುತ್ತಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.