ಬೆಂಗಳೂರು: ನಗರದ ಶಂಕರ ಕಣ್ಣಿನ ಆಸ್ಪತ್ರೆಯು ಮೊಬೈಲ್ ಫೋನ್ ಮೂಲಕ ದೃಷ್ಟಿ ದೋಷಗಳನ್ನು ಪತ್ತೆ ಹಚ್ಚುವ ‘ಆಫ್ತಲ್ಮೋಸ್ಕೋಪ್’ ಎಂಬ ವಿನೂತನ ತಂತ್ರಜ್ಞಾನವನ್ನು ಆವಿಷ್ಕರಿಸಿದೆ.

ಈ ವಿಶಿಷ್ಟ ರೀತಿಯ ತಂತ್ರಜ್ಞಾನವಾದ ‘ಮೊಬೈಲ್ ಫೋನ್ ಆಫ್ತಲ್ಮೋಸ್ಕೋಪ್’ ಮೂಲಕ ದೃಷ್ಟಿ ದೋಷಗಳನ್ನು ಸರಳ ಹಾಗೂ ಸುಲಭವಾಗಿ ಪತ್ತೆ ಹಚ್ಚುವ ಭಾರತದ ಮೊಟ್ಟ ಮೊದಲ ಆಸ್ಪತ್ರೆಯಾಗಿದೆ. ಈ ಕುರಿತು ಶಂಕರ ಕಣ್ಣಿನ ಆಸ್ಪತ್ರೆಯ ರೆಟಿನಾ ತಜ್ಞ ಡಾ.ದಿವ್ಯಾಂಶು ಮಿಶ್ರಾ ಅವರು ಮಂಗಳವಾರ ವಿವರಿಸಿದರು.

‘ವಿನೂತನ ಸಾಧನದ ಸಹಾಯದಿಂದ ನೇತ್ರತಜ್ಞರು ರೆಟಿನಾದ ಸ್ಪಷ್ಟವಾದ ಚಿತ್ರಗಳನ್ನು ತೆಗೆದು ಅದರಲ್ಲಿ ನಾನಾ ಬಗೆಯ ದೃಷ್ಟಿ ದೋಷಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಇದಕ್ಕಾಗಿ ಮೊಬೈಲ್ ಫೋನ್ಗೆ ಕೇವಲ ₨ 35 ರಿಂದ ₨ 50 ವೆಚ್ಚದ ಪುಟ್ಟ ಎಲ್ಇಡಿ ಬಲ್ಬ್ ಹಾಗೂ ಕೆಲ ವೈರುಗಳ ಸಹಾಯದೊಂದಿಗೆ ಬ್ಯಾಟರಿಯೊಂದನ್ನು ಅಳವಡಿಸಿಕೊಂಡರೆ ಅದು ಆಫ್ತಲ್ಮೋಸ್ಕೋಪ್ ಆಗಿ ಪರಿವರ್ತನೆಗೊಳ್ಳುತ್ತದೆ’ ಎಂದರು.

‘ಅದರ ಮೂಲಕ ಕಣ್ಣಿನ ಒಳ ಹಾಗೂ ಮೇಲ್ಮೈನಲ್ಲಿ ಚಿತ್ರಗಳನ್ನು ಸ್ಪಷ್ಟವಾಗಿ ಸೆರೆಹಿಡಿದು, ಅದರಲ್ಲಿ ರೆಟಿನಾ, ಗ್ಲುಕೋಮಾ ಸೇರಿದಂತೆ ಕಣ್ಣಿನ ಎಲ್ಲಾ ಬಗೆಯ ಸಮಸ್ಯೆಗಳು ಹಾಗೂ ಲಕ್ಷಣಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ’ ಎಂದು ತಿಳಿಸಿದರು. ‘ಗ್ರಾಮೀಣ ಪ್ರದೇಶಗಳಲ್ಲಿನ ನೇತ್ರತಜ್ಞರು ದುಬಾರಿ ಬೆಲೆಯ ಸಾಧನಗಳನ್ನು ಅಳವಡಿಸಿಕೊಂಡು ದೃಷ್ಟಿ ಸಮಸ್ಯೆಗೆ ಚಿಕಿತ್ಸೆ ನೀಡಲು ಹಾಗೂ ಅದಕ್ಕಾಗಿ ದುಬಾರಿ ಹಣ ನೀಡಿ ಪರೀಕ್ಷೆ ಮಾಡಿಕೊಳ್ಳಲು ರೋಗಿಗಳು ಸಮರ್ಥರಾಗಿರುವುದಿಲ್ಲ. ಅಂತಹ ಕಡೆಗಳಲ್ಲಿ ‘ಮೊಬೈಲ್ ಫೋನ್ ಆಫ್ತಲ್ಮೋಸ್ಕೋಪ್’ ವರವಾಗಿ ಪರಿಣಮಿಸಿದೆ’ ಎಂದರು.

‘ತಾವು ಸೇರಿದಂತೆ ಆಸ್ಪತ್ರೆಯ ವೈದ್ಯರಾದ ಡಾ. ಮಹೇಶ್, ಪಿ. ಷಣ್ಮುಗಂ, ಡಾ. ಮಧುಕುಮಾರ್, ಡಾ. ಆರ್.ರಾಜೇಶ್, ಡಾ.ಶ್ರೀನಿವಾಸುಲು ರೆಡ್ಡಿ, ಡಾ. ಗ್ಲಾಡಿಸ್ ರೋಡ್ರಿಗಸ್ ಒಳಗೊಂಡ ತಂಡ ಈ ವಿನೂತನ ಸಾಧನವನ್ನು ಆವಿಷ್ಕರಿಸಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.