ಸೋಮವಾರ, ಏಪ್ರಿಲ್ 19, 2021
29 °C

ದೆಹಲಿಯಲ್ಲಿ ಹೊಸದಾಗಿ 38 ಡೆಂಗೆ ಪ್ರಕರಣಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ, (ಪಿಟಿಐ): ದೇಶದ ರಾಜಧಾನಿ  ದೆಹಲಿ ಈಗ ಡೆಂಗೆ ರೋಗದ ತಾಣವಾಗುತ್ತಿದೆ, ನವದೆಹಲಿಯಲ್ಲಿ ಹೊಸದಾಗಿ 38 ಡೆಂಗೆ ಪ್ರಕರಣಗಳು ಪತ್ತೆಯಾಗಿವೆ, ಇಲ್ಲಿಯವರೆಗೂ 1584 ಡೆಂಗೆ ಪ್ರಕರಣಗಳು ದಾಖಲಾಗಿವೆ.37 ಪ್ರಕರಣಗಳು ಪೂರ್ವ, ದಕ್ಷಿಣ, ಹಾಗೂ ಉತ್ತರ ದೆಹಲಿಯಲ್ಲಿ ಪತ್ತೆಯಾದರೆ, ಉಳಿದ ಒಂದು ಪ್ರಕರಣ ಮಾತ್ರ ರಾಜಧಾನಿಯಿಂದ ಹೊರಗಿನದು ಎಂದು ದೆಹಲಿ ಕಾರ್ಪೋರೇಷನ್ ತಿಳಿಸಿದೆ. ಇಲ್ಲಿಯವರೆಗೂ 1584 ಪ್ರಕರಣಗಳಲ್ಲಿ 16 ಜನ ಮೃತಪಟ್ಟಿದ್ದಾರೆ.594 ಪ್ರಕರಣಗಳು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂಡು ಬಂದಿವೆ,  532 ಪ್ರಕರಣಗಳು ಉತ್ತರ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂಡುಬಂದಿವೆ. ಉಳಿದಂತೆ 390 ಪ್ರಕರಣಗಳು ಪೂರ್ವ ದೆಹಲಿ ಮಹಾನಗರ ಪಾಲಿಕೆಯಲ್ಲಿ ಕಂಡು ಬಂದಿವೆ. ಉಳಿದ ಪ್ರಕರಣಗಳು ಉತ್ತರ ದೆಹಲಿ ಮಹಾನಗರ ಪಾಲಿಕೆ ಹಾಗೂ ದೆಹಲಿ ದಂಡು ಪ್ರದೇಶಗಳಲ್ಲಿ ಪತ್ತೆಯಾಗಿವೆ.

 2010ರಲ್ಲಿ  976 ಪ್ರಕರಣಗಳು ಪತ್ತಯಾಗಿದ್ದು 5 ಜನ ಮೃತ ಪಟ್ಟಿದ್ದರು, ಇಲ್ಲಿಯವರೆಗೂ ಒಟ್ಟು 5994 ಡೆಂಗೆ ಪ್ರಕರಣಗಳು ದಾಖಲಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.