ದೆಹಲಿ ಸ್ಫೋಟ ಪ್ರಕರಣ: ವಿದ್ಯಾರ್ಥಿ ಬಂಧನ

7

ದೆಹಲಿ ಸ್ಫೋಟ ಪ್ರಕರಣ: ವಿದ್ಯಾರ್ಥಿ ಬಂಧನ

Published:
Updated:

ನವದೆಹಲಿ (ಪಿಟಿಐ): ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಶ್ಮೀರಿ ವೈದ್ಯಕೀಯ ವಿದ್ಯಾರ್ಥಿ ಒಬ್ಬನನ್ನು ವಶಕ್ಕೆ ತೆಗೆದುಕೊಂಡಿದೆ. ಸ್ಫೋಟದ ಸಂಚಿನ ರೂವಾರಿ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.ಬಾಂಗ್ಲಾ ದೇಶದಲ್ಲಿ ಯುನಾನಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿರುವ ವಾಸಿಂ ಅಹಮ್ಮದ್ ಬಂಧಿತನಾಡಿದ್ದು, ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಾಸಿಂನನ್ನು ಭಾರತ-ಬಾಂಗ್ಲಾ ಗಡಿಯಲ್ಲಿ ಬಂಧಿಸಲಾಗಿದೆಯೋ ಅಥವಾ ಬಾಂಗ್ಲಾ ದೇಶದ  ಅಧಿಕಾರಿಗಳು ಆತನನ್ನು ಭಾರತಕ್ಕೆ ಹಿಡಿದುಕೊಟ್ಟಿದ್ದಾರೆ ಎಂಬುದರ ಬಗ್ಗೆ ಯಾವೊಬ್ಬ ಅಧಿಕಾರಿಯು ಇಲ್ಲಿಯವರೆಗೆ ತುಟಿ ಬಿಚ್ಚಿಲ್ಲ. ತನಿಖಾ ಸಂಸ್ಥೆಯು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮೂವರನ್ನು ವಶಕ್ಕೆ ತೆಗೆದುಕೊಂಡಿತ್ತು. ಆನಂತರ ಒಬ್ಬನನ್ನು ಬಿಡುಗಡೆ ಮಾಡಿತ್ತು.ಸ್ಫೋಟದ ಸಂಚಿನ ಪ್ರಮುಖ ರೂವಾರಿ ಎಂದೇ ಹೇಳಲಾತ್ತಿರುವ ಹಿಜ್ಬುಲ್ ಮುಜಾಹಿದ್ದೀನ್ ಸಂಚಾಲಕ ಜುನೈದ್ ಅಕ್ರಂನ ಅಡಗುದಾಣಗಳ ಬಗ್ಗೆಯು ಪ್ರಶ್ನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಅಬ್ಬಾಸ್ ಎನ್‌ಐಎ ವಶಕ್ಕೆ: ದೆಹಲಿ ಹೈಕೋರ್ಟ್ ಅವರಣದಲ್ಲಿ ಸೆ.7ರಂದು ಬಾಂಬ್ ಸ್ಫೋಟ ಪ್ರಕರಣ ಸಂಬಂಧ  ಬಂಧಿತ ಆರೋಪಿ ಅಮೀರ್ ಅಬ್ಬಾಸ್ ದೇವ್‌ನನ್ನು ಇದೇ 14 ರವರೆಗೆ  ರಾಷ್ಟ್ರೀಯ ತನಿಖಾ ಆಯೋದಗದ ವಶಕ್ಕೆ ನೀಡುವಂತೆ ಶುಕ್ರವಾರ ದೆಹಲಿ ಕೋರ್ಟ್  ಆದೇಶಿಸಿದೆ.ಈ ಪ್ರಕರಣವನ್ನು ವಿಚಾರಣೆ ಮಾಡಿದ ವಿಶೇಷ ನ್ಯಾಯಾಧೀಶ ಎಚ್.ಎಸ್. ಶರ್ಮಾ ಅವರು ಇನ್ನೂ ಏಳು ದಿನಗಳ ಕಾಲ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ದಳದ ವಶಕ್ಕೆ ಅಬ್ಬಾಸ್‌ನನ್ನು ಒಪ್ಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry