ದೇವಕಣಗಳ ಅಸ್ತಿತ್ವಕ್ಕೆ ಇಂದು ಉತ್ತರ

7

ದೇವಕಣಗಳ ಅಸ್ತಿತ್ವಕ್ಕೆ ಇಂದು ಉತ್ತರ

Published:
Updated:
ದೇವಕಣಗಳ ಅಸ್ತಿತ್ವಕ್ಕೆ ಇಂದು ಉತ್ತರ

ಲಂಡನ್ (ಪಿಟಿಐ): ವಿಶ್ವದ ಉಗಮ ಮತ್ತು ಅದಕ್ಕೆ ಸಂಬಂಧಿಸಿದಂತೆ ಇನ್ನೂ ನಿಗೂಢವಾಗಿಯೇ ಉಳಿದಿರುವ ಅನೇಕ ಗೊಂದಲಗಳಿಗೆ ನಿಖರವಾದ ಉತ್ತರ ದೊರೆಯಲಿದೆ ಎಂದು ನಂಬಲಾದ ಹಿಗ್ಸ್ ಬೋಸನ್ ಅಥವಾ `ದೇವಕಣ ~ (ಗಾಡ್ ಪಾರ್ಟಿಕಲ್ಸ್) ನಿಜವಾಗಿಯೂ ಪತ್ತೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಜ್ಞಾನಿಗಳು ಬುಧವಾರ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.ವಿಶ್ವದ ಸೃಷ್ಟಿಯ ರಹಸ್ಯವನ್ನು ಅರಿಯುವಲ್ಲಿ ಈ `ದೇವಕಣ~ಗಳ ಅಸ್ತಿತ್ವ ಒಂದು ಮಹತ್ವದ ಕೊಂಡಿಯಾಗಿದೆ.`ದೇವಕಣ~ದ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಪರಮಾಣು ಸಂಶೋಧನಾ ಸಂಸ್ಥೆ (ಸಿಇಆರ್‌ಎನ್) ಜಿನೀವಾದಲ್ಲಿ ನಡೆಯಲಿರುವ ಸಭೆಗೆ ಐವರು ತಜ್ಞ ವಿಜ್ಞಾನಿಗಳನ್ನು ಆಹ್ವಾನಿಸಿದೆ.`ನಾಲ್ಕನೇ ಹಂತದ ಸಿಗ್ಮಾ~ ಎಂದು ಹೇಳಲಾದ ದೇವಕಣವನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದು, ತಮ್ಮ ಸಂಶೋಧನೆಯ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.ಜಗತ್ತಿನಾದ್ಯಂತ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ `ದೇವಕಣ~ಗಳ ಅಸ್ತಿತ್ವದ ಬಗ್ಗೆ  ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಡಿನ್‌ಬರೊ ವಿಶ್ವವಿದ್ಯಾಲಯದ ಭೌತಶಾಸ್ತ್ರ ಗೌರವ ಪ್ರಾಧ್ಯಾಪಕ ಪೀಟರ್ ಹಿಗ್ಸ್ ತಮ್ಮ ಸಂಶೋಧನೆಯ ಬಗ್ಗೆ ನೂರಕ್ಕೆ ಶೇ 99.99 ವಿಶ್ವಾಸ ಹೊಂದಿರುವುದಾಗಿ ಹೇಳಿದ್ದಾರೆ.`ದೇವಕಣ~ದ ಕುರಿತು ಅನೇಕ ವರ್ಷಗಳಿಂದ ನಿರಂತರ ಅಧ್ಯಯನದಲ್ಲಿ ತೊಡಗಿರುವ ಕಾರಣ ಹಿಗ್ಸ್ ಅವರ ಹೆಸರನ್ನೇ `ದೇವಕಣ~ಕ್ಕೆ ನಾಮಕರಣ ಮಾಡಲಾಗಿದೆ.ಐದನೇ ಹಂತದ ಸಿಗ್ಮಾ ಸ್ಥಿತಿಯಲ್ಲಿರುವ `ದೇವ ಕಣ~ವನ್ನು ಪತ್ತೆ ಹಚ್ಚಲು ಪರಮಾಣು ಸಂಶೋಧನಾ ಸಂಸ್ಥೆ ವಿಜ್ಞಾನಿಗಳ ಎರಡು ತಂಡವನ್ನು ರಚಿಸುವುದಾಗಿ ಹೇಳಿದೆ. ಆ ಫಲಿತಾಂಶ ಇನ್ನೂ ಹೆಚ್ಚು ನಿಖರವಾಗಿರುವ ಭರವಸೆಯನ್ನು ಸಂಸ್ಥೆ ಹೊಂದಿದೆ.ಅಣುಗಳ ರಚನೆಗೆ ಮೂಲ ಕಾರಣ ಎಂದು ಭಾವಿಸಲಾಗಿರುವ `ದೇವಕಣ~ಗಳು ಜಗತ್ತಿನ ಸೃಷ್ಟಿಯ ಮೂಲ ಎಂದು ಹಿಗ್ಸ್ ಹೇಳಿದ್ದಾರೆ. ಈ ಕುರಿತು ಎರಡೂ ವಿಜ್ಞಾನಿಗಳ ತಂಡ ಪ್ರತ್ಯೇಕವಾಗಿ ಸಂಶೋಧನೆ ನಡೆಸಿವೆ.`ದೇವಕಣ~ಗಳ ಕುರಿತು ಬುಧವಾರ ಹೊರ ಬೀಳಲಿರುವ ವಿಜ್ಞಾನಿಗಳ ಅಧಿಕೃತ ಹೇಳಿಕೆಯತ್ತಲೇ  ಈಗ ಜಗತ್ತಿನ ದೃಷ್ಟಿ ನೆಟ್ಟಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry