ಕೊಪ್ಪಳ: ಅತ್ತ ಗಂಡುಮಕ್ಕಳು ನನ್ನನ್ನು ಬೀದಿ ಪಾಲು ಮಾಡಿದರು. ಹೆಣ್ಣುಮಕ್ಕಳು ನನಗಿಲ್ಲ. ಕೊನೆಗೆ ಗಂಡಾಗಿದ್ದು ಹೆಣ್ಣಾಗಿ ನೀನು ನನ್ನನ್ನು ಕಾಪಾಡಿದೆ. ನೀನು ದೇವರಿಗೆ ಹತ್ತಿರವಾದವಳು...
-ಇದು ಲೈಂಗಿಕ ಅಲ್ಪಸಂಖ್ಯಾತರ ಸಂಕೀರ್ಣ ಬದುಕಿನ ಸುತ್ತ ಹೆಣೆದ `ಬದುಕು ಬಯಲು' ನಾಟಕದ ತಿರುಳು. ದೇವರಿಗೆ ಹತ್ತಿರವಾದವರು ಎಂಬ ಶೀರ್ಷಿಕೆಯೇ ಇದಕ್ಕೆ ಸರಿಯಾಗಿ ಅನ್ವಯಿಸುತ್ತದೆ.

ಎ.ರೇವತಿ ಅವರ ಮೂಲಕೃತಿ ಆಧಾರಿತ ನಾಟಕ ಇತ್ತೀಚೆಗೆ ಕೊಪ್ಪಳ ಭಾಗ್ಯನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಪ್ರದರ್ಶನಗೊಂಡಿತು. ರಂಗಯಾನ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಎಂ. ಗಣೇಶ ಹೆಗ್ಗೋಡು ನಿರ್ದೇಶನದಲ್ಲಿ ಹೆಗ್ಗೋಡಿನ ಜನಮನದಾಟ ತಂಡ ಸಮಾಜದ ಮತ್ತೊಂದು ಮುಖದ ಸಂಕೀರ್ಣತೆಯನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿತು.

ತಮಿಳುನಾಡಿನಲ್ಲಿ ಆರಂಭವಾಗುವ ಕಥೆ, ದೆಹಲಿವರೆಗೆ ತಲುಪಿ, ಬೆಂಗಳೂರಿನಲ್ಲಿ ಸುಖಾಂತ್ಯ ಕಾಣುತ್ತದೆ. ಲಾರಿ ಮಾಲೀಕನ ಕುಟುಂಬದ ಇಬ್ಬರು ಮಕ್ಕಳಲ್ಲಿ ಕಿರಿಯವನಾದ ದೊರೈಸ್ವಾಮಿ ಬೆಳೆಯುತ್ತಿದ್ದಂತೆಯೇ ಆತನ ಮನಸ್ಸಿನಲ್ಲಿ ಹೆಣ್ಣಿನ ಸ್ವಭಾವಗಳು ಬೆಳೆಯುತ್ತವೆ. ಕ್ರಮೇಣ ಜಾತ್ರೆಗಳಲ್ಲಿ ಕೊರತಿ ವೇಷ ಧರಿಸಿ ಕುಣಿಯುವುದು, ಹೆಣ್ಣುಮಕ್ಕಳ ಬಟ್ಟೆ ಧರಿಸುವ ಮೂಲಕ ತನ್ನ ಆಸೆ ಪೂರೈಸಿಕೊಳ್ಳಲು ಯತ್ನಿಸುತ್ತಾನೆ. ಹುಡುಗನ ಸ್ವಭಾವ ಬದಲಾಗುತ್ತಿದ್ದಂತೆ ಆತ ಸಾಕಷ್ಟು ಹಿಂಸೆ ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ಹೊಡೆತ, ಬಡಿತ, ಸಮಾಜದಲ್ಲಿ ನಿರ್ಲಕ್ಷ್ಯ... ಹೀಗೆ. ಕೊನೆಗೆ ಆತ ಹಿಜಿಡಾಗಳ ಕೇಂದ್ರ ಸ್ಥಾನವನ್ನೇ ಹುಡುಕಿ ಹೋಗುತ್ತಾನೆ.

`ಊಟ ಮಾಡಬೇಡ ಎಂದು ಯಾರೋ ಹೇಳಿದ ಮಾತ್ರಕ್ಕೆ ಹಸಿವು ತಡೆಯಲು, ಉಣದಿರಲು ಸಾಧ್ಯವೇ?' ಎಂದು ದೊರೈಸ್ವಾಮಿಯೊಳಗಿನ ಹೆಣ್ಣು ಕೇಳುವಾಗ ವ್ಯಕ್ತಿತ್ವದೊಳಗಿನ ಎಲ್ಲ ತುಮುಲ, ಕಾಮನೆ ವ್ಯಕ್ತವಾಗುತ್ತದೆ.

ಭಾವನೆಗಳು ಸಂಪೂರ್ಣ ಹೆಣ್ತನವನ್ನು ಹೊಂದಿದಾಗ ಹೆಣ್ಣು ವೇಷದಲ್ಲಿ ಕುಣಿದ ದೊರೈಸ್ವಾಮಿ ಹೇಳುತ್ತಾನೆ-ಹೆಣ್ಣಿನ ವೇಷ ಧರಿಸಿರಲಿಲ್ಲ, ಹೆಣ್ಣೇ ಆಗಿದ್ದೆ.! ಕೊನೆಗೂ ಹೆಣ್ಣು ಎಂಬ ಕಾರಣಕ್ಕಾಗಿ ಆತ ಮನೆಯಲ್ಲಿ ಶಿಕ್ಷೆಯಿಂದ ಪಾರಾಗುತ್ತಾನೆ. ದೇವರೇ ಗಂಡಾಗಿ ಹುಟ್ಟಿಸಿ ಹೆಣ್ತನವನ್ನೇಕೆ ತುಂಬಿದೆ. ನನ್ನನ್ನು ಗಂಡಾಗಿರಲು ಬಿಡು. ಇಲ್ಲವಾದರೆ ನಿನ್ನಹಾಗೆ ಹೆಣ್ಣಾಗಿಸಿ ಬಿಡೇ ಎಂದು ದೇವರಿಗೆ ಅಲವತ್ತುಕೊಳ್ಳುತ್ತಾನೆ.

ನಾಟಕದ ಮಧ್ಯೆ ಹಿಜಿಡಾಗಳಿಗೆ ಪೊಲೀಸ್ ಹಿಂಸೆ. ದೈಹಿಕ ಬಯಕೆ ತೀರಿಸಿಕೊಳ್ಳಲು ವೇಶ್ಯಾವಾಟಿಕೆಯ ಹಾದಿ ಹಿಡಿಯುವುದು. ಆಸ್ತಿ ಹಕ್ಕು ನಿರಾಕರಣೆಯಂಥ ಕಾನೂನು ತೊಡಕುಗಳು...

ಹೀಗೆ ಹಿಜಿಡಾಗಳು ಅನುಭವಿಸುವ ಕಷ್ಟಗಳನ್ನು ಅನಾವರಣಗೊಳಿಸುವ ಪ್ರಯತ್ನ ನಡೆಯಿತು. ಕೊನೆಗೂ ರೇವತಿಯ(ದೊರೈಸ್ವಾಮಿ) ಕುಟುಂಬಕ್ಕೆ ಆಕೆ (ಆತ)ಯೇ ಆಸರೆಯಾಗಿ ನಿಂತು ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಆಗ ತಂದೆ ನೀನು ದೇವರಿಗೆ ಹತ್ತಿರವಾದವಳು ಎಂದು ಉದ್ಗರಿಸುತ್ತಾನೆ.

ನಾಟಕದ ಕೇಂದ್ರಬಿಂದು ದೊರೈಸ್ವಾಮಿ (ವಿನೀತ್ಕುಮಾರ್), ರೇವತಿ(ಚಂದ್ರು ತಿಪಟೂರು) ಬದಲಾಗುವ ಪಾತ್ರಗಳು ಅಪ್ಪಟ ಹಿಜಿಡಾ ವ್ಯಕ್ತಿಯನ್ನೇ ವೇದಿಕೆಗೆ ತಂದವು. ಅಲ್ಲಲ್ಲಿ ಹಾಸ್ಯದ ಕಚಗುಳಿಯಿಡುವಲ್ಲಿ ಸೂರ್ಯ ಯಶಸ್ವಿಯಾದರು.

ಹಿಜಿಡಾಗಳಾಗಿ ಪರಿವರ್ತನೆ, ಅಲ್ಲಿನ ರೀತಿ ರಿವಾಜು, ಹಿಜಿಡಾ ಗುರುವಿನ ಗಾಂಭೀರ್ಯತೆಯನ್ನು ಶೋಧನ್ ಕಟ್ಟಿಕೊಟ್ಟರು.

ಸರಳ ರಂಗ ಪರಿಕರಗಳ ವೇದಿಕೆಯಲ್ಲಿ ಪರಿಣಾಮಕಾರಿ ಬೆಳಕಿನ ಚಲನೆ ಮೂಲಕ ಕಥೆ ಹೇಳುವ ರೀತಿ ಪ್ರೇಕ್ಷಕರ ಮನಮುಟ್ಟಿತು. ಈ ದೃಷ್ಟಿಯಲ್ಲಿ ನಾಟಕ ಅಪರೂಪದ ರಂಗಪ್ರಯೋಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.