ದೇವರ ದಾಸಿಮಯ್ಯನವರೇ ಆದ್ಯ ವಚನಕಾರ ಎಂಬ ಬಗ್ಗೆ 2006 ರಲ್ಲಿ ಇದೇ ಪತ್ರಿಕೆಯ ‘ವಾಚಕರವಾಣಿ’ ವಿಭಾಗದಲ್ಲಿ ಸುಮಾರು ಎರಡು ತಿಂಗಳ ಕಾಲ ನಾಡಿನ ಖ್ಯಾತ ಸಾಹಿತಿಗಳ ಸರಣಿ ಲೇಖನಗಳು ಪ್ರಕಟಗೊಂಡು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಭಿನ್ನರಲ್ಲ, ಜೇಡ ಜಾತಿ ಸೂಚಕ ಎಂಬಲ್ಲಿಗೆ ಮುಕ್ತಾಯವಾಗಿದೆ.

ರಾಷ್ಟ್ರಕವಿ ದಿ. ಎಂ. ಗೋವಿಂದ ಪೈ ಅವರೂ ದೇವರ ದಾಸಿಮಯ್ಯನವರೇ ಆದ್ಯ ವಚನಕಾರರು ಮತ್ತು ಅವರ ಜೀವಿತಾವಧಿ ಕ್ರಿ.ಶ. 980–1040 ಎಂದು ತಿಳಿಸಿದ್ದಾರೆ. ಸಾಹಿತಿ ಚಂದ್ರಶೇಖರ ಕಂಬಾರರು ವಚನ ಚಳವಳಿಯ ಮೂಲ ಜನಕ ದೇವರ ದಾಸಿಮಯ್ಯ, ಇವರ ಭಾಷೆ, ವಿಚಾರ ಹಾಗೂ ಬರವಣಿಗೆ ಶೈಲಿ ನಂತರ ಬಂದ ಬಸವಣ್ಣ ಹಾಗೂ ಇತರೆ ವಚನಕಾರರ ಮೇಲೆ ಪ್ರಭಾವ ಬೀರಿದೆ.

ಸಂಸ್ಕೃತವನ್ನು ಹೊರತುಪಡಿಸಿ ಕನ್ನಡದಲ್ಲಿಯೂ ದೇವರ ಜೊತೆ ಸಂಭಾಷಣೆ ನಡೆಸಬಹುದು ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಸಾಧಿಸಿ ತೋರಿಸಿದ ಮಹಾನ್ ವ್ಯಕ್ತಿ ದೇವರ ದಾಸಿಮಯ್ಯ ಎಂದು ಹೇಳಿದ್ದಾರೆ (ಪ್ರಜಾವಾಣಿ , 7–6–2006). ಎಚ್. ಎಸ್. ಶಿವಪ್ರಕಾಶ್ ಅವರೂ ಇದನ್ನೇ ಹೇಳಿದ್ದಾರೆ.

ಮೊನ್ನೆ (ಮಾ. 13) ವಾಚಕರವಾಣಿ ವಿಭಾಗದಲ್ಲಿ ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಅವರು ‘ಒಂದು ಘೋರ ಅಪಚಾರ’ ಶೀರ್ಷಿಕೆಯಡಿ ದಾಖಲಿಸಿರುವ ಅನಿಸಿಕೆಯಲ್ಲಿ ‘ದೇವರ ದಾಸಿಮಯ್ಯ–ಇವನು ಬಹುಶಃ ಕಾವಿ ವಸ್ತ್ರದ ಬ್ರಹ್ಮಚಾರಿ, ಇವನು ಏನು ಬರೆದಿರುವನೋ ತಿಳಿಯದು’ ಎಂದು ಅಪಹಾಸ್ಯ ಮಾಡಿದ್ದಾರೆ. ಇದು ಹಿರಿಯರಿಗೆ ಶೋಭೆ ತರುವಂತಹದ್ದಲ್ಲ.

ಹಿಂದುಳಿದ ಜನಾಂಗದ ನೇಕಾರ ಕಾಯಕದ ಸಂತ, ಆದ್ಯ ವಚನಕಾರ ದೇವರ ದಾಸಿಮಯ್ಯ ಅವರಿಗೆ ನಿರಂತರವಾಗಿ ಅನ್ಯಾಯ ಎಸಗಲಾಗಿದೆ. ಉದಾಹರಣೆಗೆ ಬಸವ ಪೂರ್ವ ಯುಗದ ಈ ವಚನಕಾರನ ಕಾಲವನ್ನು ಕ್ರಿ.ಶ. 980–1040 ‘ದೇವರ ದಾಸಿಮಯ್ಯ ಯುಗ’ ಅಥವಾ ‘ವಚನಯುಗ’ ಎಂದು ಗುರುತಿಸದೇ ಇರುವುದು, ಜೇಡರ ದಾಸಿಮಯ್ಯ ಎಂದು ಜಾತಿ ಸೂಚಕವಾಗಿ ಕರೆದಿರುವುದು ಇತ್ಯಾದಿ.

ಭಕ್ತಿ ಭಂಡಾರಿ ಬಸವಣ್ಣನವರ ಜೀವಿತಾವಧಿ ಕಾಲಮಾನದಲ್ಲಿ ಗೊಂದಲವಿದ್ದು ಅವರು ಬದುಕಿದ್ದು 36 ವರ್ಷವಲ್ಲ 63 ವರ್ಷಗಳ ಕಾಲ ಎಂಬುದನ್ನು ಇತಿಹಾಸ ತಜ್ಞ ಡಾ.ಪಿ.ಬಿ. ದೇಸಾಯಿ, ವಿದ್ವಾಂಸ ಹಿರೇಮಲ್ಲೂರು ಈಶ್ವರನ್, ಸಂಶೋಧಕ ಎಂ.ಎಂ. ಕಲುಬುರ್ಗಿ ಮುಂತಾದವರು ಸ್ಪಷ್ಟಪಡಿಸಿದ್ದಾರೆ. ದೇವರ ದಾಸಿಮಯ್ಯನವರೇ ಆದ್ಯ ವಚನಕಾರರು ಎಂಬುದು ಸ್ಪಷ್ಟವಾಗಿದೆ ಮತ್ತು ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠಕ್ಕೆ ಇರುವ ಹೆಸರು ‘ದೇವರ ದಾಸಿಮಯ್ಯ ಪೀಠ’ ಸರಿಯಾಗಿಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.