ಪಡುಬಿದ್ರಿ: ಇಲ್ಲಿಗೆ ಸಮೀಪದ ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಸುಮಾರು ₨ 50ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ನಾಪತ್ತೆ ಆದ ಘಟನೆ ಬೆಳಕಿಗೆ ಬಂದಿದೆ.

ಕಳೆದ 10ವರ್ಷಗಳಿಂದ ದೇವಳದ ಆಡಳಿತ ಮೊಕ್ತೇಸರ-ಅರ್ಚಕ ಯು. ಗಣೇಶ್ ಭಟ್ ಮತ್ತು ಮ್ಯಾನೇಜರ್ ವೆಂಕಟೇಶ್ ನಾವಡ ಅವ್ಯಹಾರ ನಡೆಸಿದ್ದಾರೆ ಎಂದು ಉಚ್ಚಿಲದ ನಾಲ್ಕು ಮಂದಿ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದು, ಶುಕ್ರವಾರ ಸಹಾಯಕ ಆಯುಕ್ತ ಎಸ್. ಎಂ.ದೊಡ್ಡಮನಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಪ್ರಶಾಂತ್ ಕುಮಾರ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ದೇವಳದ ಲಾಕರ್ ನಲ್ಲಿದ್ದ ಸಂಪೂರ್ಣ ಚಿನ್ನಾಭರಣ ನಾಪತ್ತೆ ಆಗಿರುವುದ ಕಂಡು ಬಂದಿದೆ.

ಮಾ.2ರಂದು ದೇವಳದ ವಾರ್ಷಿ ರಥೋತ್ಸವದಂದು ದೇವರಿಗೆ ಯಾವುದೇ ಚಿನ್ನಾಭರಣ ಹಾಕದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿತ್ತು. ಅಲ್ಲದೆ ದೇವರ ಬಲಿ ಮೂರ್ತಿಗೆ ನಕಲಿ ಕವಚ ಅಳವಡಿಸಿರುವುದನ್ನು ಸಾರ್ವಜನಿಕರು ಗಮನಿಸಿದ್ದರು.

ಈ ಬಗ್ಗೆ ಸಂಬಂದ ಪಟ್ಟವರಲ್ಲಿ ವಿಚಾರಿಸಿದಾಗ, ಚಿನ್ನಾಭರಣ ನಾಪತ್ತೆ ಆಗಿರುವುದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಲಾಗಿತ್ತು.

ಶುಕ್ರವಾರ ಸಂಜೆ ಧಾರ್ಮಿಕ ದತ್ತಿ ಇಲಾಖಾ ಎಸಿ ದೊಡ್ಡಮನಿ ದೇವಳಕ್ಕೆ ಆಗಮಿಸಿ ಸಮಗ್ರ ಪರಿಶೀನೆ ನಡೆಸಿದಾಗ ಚಿನ್ನಾಭರಣದ ಲಾಕರ್ ಸಂಪೂರ್ಣ ಬರಿದಾಗಿದ್ದು, ಹಲವು ಬೆಳ್ಳಿಯ ಆಭರಣ ನಾಪತ್ತೆ ಆಗಿರುವುದು ತಿಳಿದು ಬಂದಿತ್ತು.

ಬಳಿಕ 2006-–07ನೇ ಸಾಲಿನ ಅವಧಿಯವರೆಗೆ ಸ್ವೀಕರಿಸಲಾದ ಚಿನ್ನ ಹಾಗೂ ಬೆಳ್ಳಿಯ ಸೊತ್ತುಗಳ ದಾಖಲೆ ಪರಿಶೀಲಿಸಿದಾಗ ಅಂದಾಜು 868.800ಗ್ರಾಂ ತೂಕದ ಒಟ್ಟು 35ಚಿನ್ನಾಭರಣಗಳು ಲಾಕರ್ನಿಂದ ಕಾಣೆಯಾಗಿರುವುದು ಕಂಡು ಬಂದಿತ್ತು. ಅಲ್ಲದೆ ದಾಖಲೆಯಲ್ಲಿದ್ದ ಬೆಳ್ಳಿಯ ಹಲವು ಸ್ವತ್ತುಗಳು, ಇತ್ತೀಚೆಗೆ ದಾನಿಗಳು ನೀಡಿದ್ದ 14 ಬೆಳ್ಳಿಯ ಕಲಶಗಳು. 2 ಹರಿವಾಣಗಲೂ ಕಾಣೆಯಾಗಿತ್ತು.

ಈ ಹಿನ್ನೆಲೆಯಲ್ಲಿ ದೇವಳದ ಅನುವಂಶೀಯ ಮೊಕ್ತೇಸರ ಯು. ಗಣೇಶ್ ಭಟ್ ತಮ್ಮ ವಶದಲ್ಲಿದ್ದ ಈ ಸ್ವತ್ತುಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು, ಇವರ ವಿರುದ್ಧ ಇವರನ್ನು ವಿಚಾರಣೆ ನಡೆಸಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನುವಂಶಿಯ ಮೊಕ್ತೇಸರ ಸ್ಥಾನದಿಂದ ಅಮಾನತುಗೊಳಿಸಿ. ವಿಧಿ ಕಾಪು ನಾಡ ಕಛೇರಿ ಉಪ ತಹಶೀಲ್ದಾರ್ ಅವರನ್ನು ದೇವಳದ ಆಡಳಿತಾಧಿಕಾರಿಯಾಗಿ ಮುಂದಿನ ಅದೇಶದ ತನಕ ನೇಮಕ ಮಾಡಿ ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್ ಶನಿವಾರ ಆದೇಶ ಹೊರಡಿಸಿದ್ದಾರೆ.

ಆಧಿಕಾರ ಸ್ವೀಕಾರ: ಭಾನುವಾರ ಸಂಜೆ ಉಪ ತಹಶೀಲ್ದಾರ್ ಬಾಲಕೃಷ್ಣ ರೈ ದೇವಳಕ್ಕೆ ಆಗಮಿಸಿ ಗಣೇಶ ಭಟ್ಟರಿಂದ ದೇವಳಕ್ಕೆ ಸಂಬಂಧಿಸಿದ ದಾಖಲೆ ಪತ್ರ, ಬೀಗದ ಕೀಗಳನ್ನು ದಾಖಲೀಕರಣಗೊಳಿಸಿ ವಶಕ್ಕೆ ಪಡೆದುಕೊಂಡು ನೂತನ ಅಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ತಾತ್ಕಾಲಿಕ ಅರ್ಚಕರ ನೇಮಕ: ದೇವಳದ ಸಹಾಯಕ ಅರ್ಚಕರಾಗಿದ್ದ ಸೀತಾರಾಮ ಭಟ್ಟರನ್ನು ಮುಂದಿನ ಅದೇಶದ ತಾತ್ಕಾಲಿಕ ನೆಲೆಯಲ್ಲಿ ಅರ್ಚಕರನ್ನಾಗಿ ದೇವರ ಪೂಜಾ ವಿಧಿ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.