ಬುಧವಾರ, ಮಾರ್ಚ್ 3, 2021
31 °C

ದೇವಾಲಯಗಳಲ್ಲಿ ಭಕ್ತರಿಂದ ವಿಶೇಷ ಪೂಜೆ:ರಾಮನವಮಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಾಲಯಗಳಲ್ಲಿ ಭಕ್ತರಿಂದ ವಿಶೇಷ ಪೂಜೆ:ರಾಮನವಮಿ ಆಚರಣೆ

ರಾಮನಗರ: ರಾಮನವಮಿ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ಭಾನುವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.  ಭಕ್ತರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ  ರಾಮನಾಮ  ಜಪಿಸುತ್ತಿರುವುದು ಕಂಡುಬಂದಿತು. ರಾಮದೇವರ ಬೆಟ್ಟದ ಕೋದಂಡರಾಮನ ದೇವಾಲಯದಲ್ಲೂ ವಿಶೇಷ ಪೂಜೆಗಳು ನೆರೆವೇರಿದವು. ದೇವಾಲಯಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.ರಾಮನ ಆದರ್ಶ ಪಾಲಿಸಿಮಾಗಡಿ: ಕರ್ತವ್ಯ ಪರಿಪಾಲಕನಾದ ಆದರ್ಶ ಪುರುಷ ಶ್ರೀರಾಮನ ಆದರ್ಶ ಗುಣಗಳನ್ನು ಜೀವನದಲ್ಲಿ ಪಾಲಿಸಬೇಕೆಂದು ಕೆಂಪೇಗೌಡ ಟೆಂಪೊ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಬಾಚೇನಹಟ್ಟಿ ಕೃಷ್ಣಮೂರ್ತಿ ನುಡಿದರು. ಪಟ್ಟಣದ ಕೆಂಪೇಗೌಡ ಟೆಂಪೊ ಮಾಲೀಕರ ಮತ್ತು ಚಾಲಕರ ಸಂಘವು ಆಯೋಜಿಸಿದ್ದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಮನಸ್ಸು ಪರಿಶುದ್ಧವಾಗಿರಬೇಕು. ದೇವರ ಪೂಜೆ ಮಾಡಿದರೆ ಸಾಲದು. ಬದುಕನ್ನೇ ದಿವ್ಯ ಪೂಜೆಯನ್ನಾಗಿಸಿಕೊಳ್ಳಬೇಕಿದೆ. ರಾಮಾಯಣ ಮತ್ತು ಮಹಾಭಾರತಗಳು ನಮ್ಮ ಮನಸ್ಸಿನ ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಉತ್ತಮ ಗುಣ ಬೆಳೆಸುತ್ತಿವೆ ಎಂದು ತಿಳಿಸಿದರು. ಸಂಘದ ನಿರ್ದೇಶಕ ಉಮೇಶ್, ರಮೇಶ್,ಮುರಳಿ, ಲೋಕೇಶ್, ದೇವರಾಜು, ಪುಟ್ಟಸ್ವಾಮಿ, ಶ್ರೀನಿವಾಸ್, ವಿಜಯಣ್ಣ,ನಾಗೇಶ್, ಮುದ್ದು ಇತರರು ರಾಮನವಮಿಯ ಕುರಿತು ಮಾತನಾಡಿದರು. ರಾಮನವಮಿ ಅಂಗವಾಗಿ ಸಾರ್ವಜನಿಕರಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಯಿತು. ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.ರಾಮದೇವರ ರಥೋತ್ಸವ: ರಾಮನವಮಿ ಅಂಗವಾಗಿ ಇಲ್ಲಿನ ಕಲ್ಯಾಬಾಗಿಲು ವಿನಾಯಕ ಸ್ವಾಮಿ ದೇವಾಲಯದಲ್ಲಿ ರಾಮದೇವರ ರಥೋತ್ಸವ ವೈಭವದಿಂದ ನಡೆಯಿತು. ಎಸ್. ನಾಗರಾಜಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಎನ್.ಕೇಶವ ಮೂರ್ತಿ ಮತ್ತು ಟ್ರಸ್ಟ್‌ನ ಸತೀಶ್ ಪ್ರಸಾದ್ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪುರಸಭೆಯ ಮಾಜಿ ಸದಸ್ಯ ವೆಂಕಟ ಚಲಪತಿಶೆಟ್ಟಿ, ದಾನಿಗಳಾದ ಪುರುಷೋತ್ತಮ್ ಪಟೇಲ್, ಬಸವರಾಜು, ಎಂ.ಎನ್,ನಟರಾಜು, ಶೇಷಾದ್ರಿ, ಯೋಗಪಟು ರಮೇಶ್, ಬಾಬು ಇತರರು ಉಪಸ್ಥಿತರಿದ್ದರು. ನಂತರ ಕೋಸಂಬರಿ, ಪಾನಕ, ಮಜ್ಜಿಗೆ, ರಸಾಯನ ವಿತರಿಸಲಾಯಿತು.ಜೆಡಿಎಸ್‌ನಿಂದ ರಾಮನವಮಿ: ರಾಮನ ಆಡಳಿತ ಗುಣಗಳನ್ನು ಇಂದಿನ ರಾಜಕಾರಣಿಗಳು ಅಳವಡಿಕೊಳ್ಳಬೇಕು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು. ಪಟ್ಟಣದಲ್ಲಿ ಭಾನುವಾರ ಜೆ.ಡಿ.ಎಸ್ ಹಮ್ಮಿಕೊಂಡಿದ್ದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಪಾನಕ ವಿತರಿಸಿ ಮಾತನಾಡಿದ ಅವರು, ರಾಮಾಯಣ ಮತ್ತು ಮಹಾಭಾರತವನ್ನು ಯುವ ಜನತೆ ತಪ್ಪದೇ ಓದಬೇಕು ಎಂದು   ತಿಳಿಸಿದರು. ಪುರಸಭೆ ಅಧ್ಯಕ್ಷ ಪುರುಷೋತ್ತಮ್, ಜಿ.ಪಂ.ಸದಸ್ಯರಾದ ಧನಂಜಯ, ಮುದ್ದುರಾಜ್ ಯಾದವ್, ವಿಜಯ ಕುಮಾರ್, ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್,       ಟಿಎಪಿಎಂಎಸ್ ಅಧ್ಯಕ್ಷ ಜುಟ್ಟನಹಳ್ಳಿ ನಾಗರಾಜು, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಂ. ರಾಮಣ್ಣ, ತಾ.ಪಂ. ಅಧ್ಯಕ್ಷ ರಾಮಣ್ಣ ಮಾತನಾಡಿದರು.  ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಎಂ.ಎಸ್.ಸೀಬೇಗೌಡ, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜು, ಸದಸ್ಯರಾದ ಜಯರಾಮು, ರಾಜಣ್ಣ, ರೂಪೇಶ್, ನರಸೇಗೌಡ, ಚಂದ್ರಶೇಖರ್, ಜಯಣ್ಣ, ಕುಮಾರ ಸ್ವಾಮಿ, ರಮೇಶ್ ಇತರರು ಭಾಗವಹಿಸಿದ್ದರು.ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ: ಹೊಸಪೇಟೆ ಸರ್ಕಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ವಿಶೇಷ ಪೂಜೆ ನಡೆಸಲಾಯಿತು.ಸಮಾಜ ಸೇವಕ ಎಚ್.ಎಸ್. ರಾಜಣ್ಣ, ಬಿ.ಜೆ.ಪಿ. ಮುಖಂಡರಾದ ಅಶ್ವತ್ಥ್, ವಿಶ್ವನಾಥ್ ಪೂಜೆ ಸಲ್ಲಿಸಿ, ಪಾನಕ ವಿತರಿಸಿದರು.ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯ ಎ. ಮಂಜು. ಪುರಸಭೆ ಸದಸ್ಯರಾದ ಜಯಣ್ಣ, ಲೋಕೇಶ್ ಹಾಗೂ ಹೊಸಪೇಟೆ ಗ್ರಾಮಸ್ಥರು ಭಾಗವಹಿಸಿದ್ದರು.ಕುದೂರು: ಮಾಗಡಿ ತಾಲ್ಲೂಕಿನ ತಿಪ್ಪಸಂದ್ರದಲ್ಲಿ ಭಾನುವಾರ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ರಾಮಮಂದಿರದಲ್ಲಿ  ಸೀತಾರಾಮರ ವಿಗ್ರಹಗಳನ್ನು ಪೂಜಿಸಲಾಯಿತು.   ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಭಕ್ತರಿಗೆ  ಮಜ್ಜಿಗೆ,   ಪಾನಕ  ವಿತರಿಸಲಾಯಿತು .ತಾ. ಕಚೇರಿಯಲ್ಲಿ ರಾಮನವಮಿಕನಕಪುರ: ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ರಾಮನವಮಿ ಆಚರಣೆ ನಡೆಯಿತು.

 ಭಾನುವಾರ ರಜೆ ಇರುವುದರಿಂದ ಶನಿವಾರವೇ ಆಚರಿಸಲಾಯಿತು. ಪಾನಕ, ಮಜ್ಜಿಗೆ, ಕೋಸಂಬರಿ ಹಂಚಲಾಯಿತು. ತಹಶೀಲ್ದಾರ್ ಡಾ. ದಾಕ್ಷಾಯಿಣಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

 

ರಾಮನವಮಿ ವಿಶೇಷ ಅಲಂಕಾರಚನ್ನಪಟ್ಟಣ: ರಾಮನವಮಿ ಪ್ರಯುಕ್ತ ಶನಿವಾರ ಮತ್ತು ಭಾನುವಾರ ತಾಲ್ಲೂಕಿನಾದ್ಯಂತ ಹಲವು ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿದವು.ಪಟ್ಟಣದ ಕೋದಂಡರಾಮ ಬಡಾವಣೆಯ ರಾಮಮಂದಿರ, ಎಲೆಕೇರಿಯ ಸೀತಾರಾಮಾಂಜನೇಯ, ಮಂಗಳವಾರಪೇಟೆಯ ರಾಮದೇವಸ್ಥಾನ ಹಾಗೂ ಆಂಜನೇಯ, ಕೋಟೆ ಆಂಜನೇಯಸ್ವಾಮಿ , ತಾಲ್ಲೂಕಿನ ಕೆಂಗಲ್‌ನ ಹನುಮಂತರಾಯಸ್ವಾಮಿ, ದೊಡ್ಡಮಳೂರಿನ ರಾಮಪ್ರಮೇಯಸ್ವಾಮಿ , ದೇವರಹೊಸಹಳ್ಳಿಯ ಸಂಜೀವರಾಯಸ್ವಾಮಿ ದೇವಾಲಯ ಸೇರಿದಂತೆ ತಾಲ್ಲೂಕಿನ ಎಲ್ಲಾ ರಾಮಮಂದಿರ ಹಾಗೂ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ, ಮೊಸರನ್ನ, ಪಂಚಾಮೃತವನ್ನು  ಹಂಚಲಾಯಿತು. ರಾಮಭಜನೆ, ಹನುಮಸ್ಮರಣೆ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.