ಬುಧವಾರ, ಮೇ 25, 2022
22 °C

ದೇವಾಲಯ ಅಭಿವೃದ್ಧಿಗೆ ಹಣ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ತಾಲ್ಲೂಕಿನ ತಿರುಮಲ ಶ್ರೀರಂಗನಾಥ ಸ್ವಾಮಿ ದೇವಾಲಯದ ಗೋಪುರ ದುರಸ್ತಿಗೆ ರೂ.50ಲಕ್ಷ ಮತ್ತು ಕೋಟೆ ಅಭಿವೃದ್ಧಿಗೆ ರೂ.1 ಕೋಟಿ ಹಣವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಬಿಡುಗಡೆ ಮಾಡಿದ್ದಾರೆ ಎಂದು  ಶ್ರೀರಂಗ ಸೇವಾ ಟ್ರಸ್ಟ್ ಅಧ್ಯಕ್ಷ  ಟಿ.ಎಸ್.ಸತೀಶ್ ತಿಳಿಸಿದರು.ತಿರುಮಲ ಶ್ರೀರಂಗ ಸೇವಾ ಟ್ರಸ್ಟ್ ಪದಾಧಿಕಾರಿಗಳು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಸಲ್ಲಿಸಿದ ಮನವಿಯ ಮೇರೆಗೆ ಹಣ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಮಾಗಡಿಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು ಎಂದು ಸತೀಶ್ ತಿಳಿಸಿದರು. ನೆಲಮಂಗಲ ಶಾಸಕ ಎಂ.ವಿ, ನಾಗರಾಜು, ಬಿ.ಜೆ.ಪಿ.ಮುಖಂಡರಾದ ಎಂ.ಟಿ.ಶಿವಣ್ಣ, ನಾರಾಯಣ ಸ್ವಾಮಿ, ವೆಂಕಟೇಶ್ ಅಯ್ಯಾಂಗಾರ್ ಹಾಗೂ ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು ಇದ್ದರು.ಮನವಿ: ಶ್ರೀರಂಗನಾಥ ಸ್ವಾಮಿ ದೇವಾಲಯದ ದುರಸ್ತಿಯನ್ನು ಶ್ರೀರಂಗ ಸೇವಾ ಟ್ರಸ್ಟ್ ವತಿಯಿಂದಲೇ ಮಾಡಿಸಬೇಕಿದೆ. ದುರಸ್ತಿ ಕಾರ್ಯದಲ್ಲಿ ಗುಣಮಟ್ಟ ಕಾಪಾಡಿಕೊಳ್ಳ ಬೇಕು. ಗೋಪುರದ ಮೊದಲಿನ ವಾಸ್ತುಶಿಲ್ಪಕ್ಕೆ ದಕ್ಕೆಯಾಗದ ರೀತಿಯಲ್ಲಿ ದರುಸ್ತಿ ಮಾಡಿಸಬೇಲು ಎಂದು ಶ್ರೀರಂಗನಾಥ ಸ್ವಾಮಿ ಭಕ್ತ ಮಂಡಳಿಯು ಟ್ರಸ್ಟ್ ಪದಾಧಿಕಾರಿಗಳಿಗೆ ಮನವಿ ಮಾಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.