ಭಾನುವಾರ, ಏಪ್ರಿಲ್ 11, 2021
25 °C

ದೇಶ ಕಂಡ ಮಹಾನ್ ವ್ಯಕ್ತಿ ಅಂಬೇಡ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶ ಕಂಡ ಮಹಾನ್ ವ್ಯಕ್ತಿ ಅಂಬೇಡ್ಕರ್

ಮಾಗಡಿ: ಅಂಬೇಡ್ಕರ್‌ರವರು ಈ ದೇಶ ಕಂಡ ಮಹಾನ್ ವ್ಯಕ್ತಿ.  ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಉಪನ್ಯಾಸಕ ಕುಮಾರ್ ನುಡಿದರು.

ಅವರು ಪಟ್ಟಣದ ಹೊಸಪೇಟೆ ಮೇದರ ಬೀದಿಯ ಜೈಭೀಮ್ ಕನ್ನಡ ಯುವಕರ ಸಂಘದ ವತಿಯಿಂದ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿಯನ್ನು ವಿನೋದ್‌ಕುಮಾರ್ ಉದ್ಘಾಟಿಸಿ ಮಾತನಾಡಿದರು.ಅಂಬೇಡ್ಕರ್‌ರವರು ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಮುಂದೆ ಯಾರು ಅನುಭವಿಸಬಾರದು ಎಂದು ಪಣತೊಟ್ಟು ಅಸಮಾನತೆ ನಿವಾರಣೆಗೆ ಅವಿರತವಾಗಿ ಶ್ರಮಿಸಿದರು ಎಂದು ನಾಗರಾಜು ತಿಳಿಸಿದರು. ಶೋಷಿತರೆಲ್ಲರೂ ಒಗ್ಗೂಡಿ ಅಕ್ಷರದ ಅರಿವು ಮೂಡಿಸಿಕೊಳ್ಳಲು ಮುಂದಾಗಬೇಕಿದೆ ಎಂಬುದು ಅಂಬೇಡ್ಕರ್‌ರವರ ಆದರ್ಶವಾಗಿದೆ ಎಂದು ಶಿಕ್ಷಕ ಮಾರಣ್ಣ ತಿಳಿಸಿದರು. ವಿಶ್ವ ಕಂಡ ಶ್ರೇಷ್ಠ ಸುಧಾರಕರಲ್ಲಿ ಅಂಬೇಡ್ಕರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.  ಅವರು ರಚಿಸಿದ ಸಂವಿಧಾನ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿದೆ ಎಂದು ತಿರುಮಲೆ ಶ್ರೀನಿವಾಸ್ ತಿಳಿಸಿದರು. ವಿನೋದ್ ಕುಮಾರ್, ದೇವರಾಜು, ಸಿದ್ದರಾಜು, ಜಯಸಿಂಹ, ಶಿವರಾಜು, ಸಂತೋಷ್‌ಕುಮಾರ್, ಪ್ರಕಾಶ್, ಸತೀಶ್ ಮಾತನಾಡಿದರು.  ಮಾದೇಶ, ರಂಗಸ್ವಾಮಿ, ಎಚ್.ಆರ್ ರಮೇಶ್, ರಂಗನಾಥ್, ಚಂದ್ರು, ಪುರುಷೋತ್ತಮ, ಗುರುಮೂರ್ತಿ, ಶ್ರೀಧರ್, ಪ್ರಕಾಶ್, ಅಣ್ಣಯ್ಯ, ಲಕ್ಷ್ಮಿನಾರಾಯಣ್, ಶಿವು, ಭೈರೇದೇವರು, ಬಾಲಾಜಿ ಇತರರು ಉಪಸ್ಥಿತರಿದ್ದರು. ಅನ್ನದಾನ ಏರ್ಪಡಿಸಲಾಗಿತ್ತು. ಚಿಕ್ಕನರಸಿಂಹಯ್ಯ ಸ್ವಾಗತಿಸಿ, ಗೋಪಾಲ್ ವಂದಿಸಿದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.