ಮಂಗಳವಾರ, ಜೂನ್ 22, 2021
29 °C

ದೇಸಿ ಕಲೆ ಪ್ರೋತ್ಸಾಹಿಸಿ: ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ದೇಸಿ ಕಲೆ, ಸಂಸ್ಕೃತಿ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು  ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಆರ್.ಆಶ್ವತ್ಥ್‌ ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇ­ಡ್ಕರ್ ಭವನದಲ್ಲಿ ಭಾನುವಾರ ಗೌತಮ ಶೈಕ್ಷಣಿಕ ಮತ್ತು ಕವಿ ಕಾವ್ಯ ಸಾಂಸ್ಕೃತಿಕ ಕಲಾ ಸಂಘ ಉದ್ಘಾಟಿಸಿ ಮಾತನಾಡಿ, ಅಧುನಿಕ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ನಾಡು, ನುಡಿ ಸಂಸ್ಕೃತಿ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿದೆ. ಗ್ರಾಮೀಣ ಭಾಗದ ದೇಸಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾ­ಹಿಸಬೇಕಿದೆ ಎಂದರು.ಮಾಧ್ಯಮಗಳ ಪ್ರಭಾವಕ್ಕೆ ಸಿಲುಕಿ­ರುವ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಜನಪದ, ಸೋಬಾನೆ ಪದ, ಗೀಗೀ ಪದಗಳಂಥ ದೇಸಿ ಕಲೆಗಳೂ ನಶಿಸಿಹೋಗುತ್ತಿವೆ ಎಂದು ವಿಷಾದಿಸಿದರು.ಗೌತಮ ಶೈಕ್ಷಣಿಕ ಮತ್ತು ಕವಿಕಾವ್ಯ ಸಾಂಸ್ಕೃತಿ ಕಲಾ ಸಂಘದ ಅಧ್ಯಕ್ಷ ವಿ.ಲಕ್ಷ್ಮಯ್ಯ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿಗೆ ಶ್ರಮಿಸುವುದು ಸಂಘದ ಉದ್ದೇಶವಾಗಿದೆ ಎಂದರು.ಕವಿ ಶರಣಪ್ಪ ಗಬ್ಬೂರು ತಂಡ, ಸಾಹಿತಿ ಜಿ.ಟಿ.ರಾಮಚಂದ್ರಪ್ಪ ತಂಡ ಹಾಗೂ ಶಿಕ್ಷಕ ಕೆ.ಜಿ.ಮಂಜುನಾಥ್‌ ತಂಡ­ದವರು ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.ವಕೀಲ ಚಲಪತಿ, ಶಿಕ್ಷಕ ಆರ್.­ಮುನಿನಾರಾಯಣ, ಮುಖಂಡರಾದ  ಸೈಯದ್ ಗುಲ್ಜಾರ್, ಕೆ.ಜಿ.ಮಂಜು­ನಾಥ್, ಚಂದ್ರಪ್ಪ, ಎಳೇಸಂದ್ರ ನಾಗ­ರಾಜ್, ಟಿ.ಎಂ.ನಾಗರಾಜ್, ಪಾಪೇ­ಗೌಡ, ಉಪೇಂದ್ರ, ಮುರಳಿ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.